'ಅವಿದ್ಯಾವಂತರು, ನಡೆದಾಡುವ ಶವಗಳು'; ರೆಬೆಲ್ ಶಾಸಕರ ವಿರುದ್ಧ ಶಿವಸೇನೆ ವಕ್ತಾರ ಸಂಜಯ್ ರಾವತ್ ವಾಗ್ದಾಳಿ

ಮಹಾರಾಷ್ಟ್ರದಲ್ಲಿ ಮುಂದುವರಿದ ರಾಜಕೀಯ ಬಿಕ್ಕಟ್ಟಿನ ನಡುವೆ, ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಅಸ್ಸಾಂನಲ್ಲಿ ಬೀಡುಬಿಟ್ಟಿರುವ ಬಂಡಾಯ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರನ್ನು "ವಾಕಿಂಗ್ ಡೆಡ್" (ನಡೆದಾಡುವ ಶವಗಳು) ನಂತಹ 'ಜಾಹಿಲ್' (ಅಶಿಕ್ಷಿತರು) ಎಂದು ಟೀಕಿಸಿದ್ದಾರೆ.
ಸಂಜಯ್ ರಾವತ್
ಸಂಜಯ್ ರಾವತ್

ಮುಂಬೈ: ಮಹಾರಾಷ್ಟ್ರದಲ್ಲಿ ಮುಂದುವರಿದ ರಾಜಕೀಯ ಬಿಕ್ಕಟ್ಟಿನ ನಡುವೆ, ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಅಸ್ಸಾಂನಲ್ಲಿ ಬೀಡುಬಿಟ್ಟಿರುವ ಬಂಡಾಯ ಶಾಸಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರನ್ನು "ವಾಕಿಂಗ್ ಡೆಡ್" (ನಡೆದಾಡುವ ಶವಗಳು) ನಂತಹ 'ಜಾಹಿಲ್' (ಅಶಿಕ್ಷಿತರು) ಎಂದು ಟೀಕಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಶಿವಸೇನೆ ವಕ್ತಾರ ಸಂಜಯ್ ರಾವತ್ ಅವರು, ರೆಬೆಲ್ ಶಾಸಕ  ಇಮಾಮ್ ಅಲಿ ಅವರನ್ನು ಉಲ್ಲೇಖಿಸಿ 'ಜಹಲತ್' (ಶಿಕ್ಷಣದ ಕೊರತೆ) ಒಂದು ರೀತಿಯ ಸಾವು ಮತ್ತು 'ಜಾಹಿಲ್' (ಅಶಿಕ್ಷಿತ) ಜನರು ನಡೆದಾಡುತ್ತಿರುವ ಸತ್ತವರಂತೆ ಎಂದು ಟ್ವೀಟ್ ಮಾಡಿದ್ದಾರೆ. 

ಈ ಟ್ವೀಟ್ ವ್ಯಾಪಕ ವೈರಲ್ ಆಗುತ್ತಿದ್ದಂತೆಯೇ, ಈ ಕುರಿತು ಸ್ಪಷ್ಟನೆ ನೀಡಿರುವ ಸಂಜಯ್ ರಾವತ್, 'ಮಹಾರಾಷ್ಟ್ರದಲ್ಲಿ ಸಾಮಾನ್ಯವಾದ ಭಾಷಣವನ್ನು ನಾನು ಮಾಡಿದ್ದೇನೆ. ಯಾರ ಭಾವನೆಯನ್ನು ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

'ಅವರ ದೇಹ ಜೀವಂತವಾಗಿದೆ, ಆದರೆ ಅವರ ಆತ್ಮ ಸತ್ತಿದೆ ಎಂದು ಮಹಾರಾಷ್ಟ್ರದಲ್ಲಿ ಮಾತನಾಡುವ ವಿಧಾನವಾಗಿದೆ, ನಾನು ಏನು ತಪ್ಪು ಹೇಳಿದೆ? 40 ವರ್ಷಗಳ ಕಾಲ ಪಕ್ಷದಲ್ಲಿದ್ದು ನಂತರ ಓಡಿಹೋದವರು ಅವರು.. ಅವರ ಆತ್ಮಗಳು ಸತ್ತಿವೆ, ಅವರಲ್ಲಿ ಏನೂ ಉಳಿದಿಲ್ಲ, ಇದು ಡಾ ರಾಮ್ ಮನೋಹರ್ ಲೋಹಿಯಾ ಹೇಳಿದ ಸಾಲುಗಳು. ನಾನು ಯಾರ ಭಾವನೆಗೂ ಧಕ್ಕೆ ತರಲು ಬಯಸಲಿಲ್ಲ, ನಾನು ಸತ್ಯವನ್ನು ಹೇಳಿದ್ದೇನೆ ಎಂದು ಹೇಳಿದರು.

ಏತನ್ಮಧ್ಯೆ, ಪಕ್ಷದ ಬಂಡಾಯ ಶಾಸಕರ ಮೇಲೆ ದಾಳಿ ಮಾಡಿದ ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಅವರು ರೆಬೆಲ್ ಶಾಸಕರು ಪಕ್ಷಕ್ಕೆ "ದ್ರೋಹ" ಮಾಡಿದ್ದಾರೆ. ಮುಂಬೈನಲ್ಲಿ ಶಿವಸೈನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಠಾಕ್ರೆ, ಅಸ್ಸಾಂ ರಾಜ್ಯದ ಕೆಲವು ಭಾಗಗಳಲ್ಲಿ ಪ್ರವಾಹವನ್ನು ಎದುರಿಸುತ್ತಿರುವಾಗ ಪಕ್ಷದ ಬಂಡುಕೋರರು ಗುವಾಹಟಿಯಲ್ಲಿ "ಎಂಜಾಯ್" ಮಾಡುತ್ತಿದ್ದರು ಎಂದು ಆರೋಪಿಸಿದ್ದರು.

ಏಕನಾಥ್ ಶಿಂಧೆ ಅವರ ಬಂಡಾಯ ಶಾಸಕ ಪಾಳಯದಲ್ಲಿರುವ 15 ರಿಂದ 20 ಶಾಸಕರು ಶಿವಸೇನೆಯೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಅವರನ್ನು ಗುವಾಹಟಿಯಿಂದ ಮುಂಬೈಗೆ ಕರೆತರುವಂತೆ ಪಕ್ಷವನ್ನು ಒತ್ತಾಯಿಸಿದ್ದಾರೆ ಎಂದು ಠಾಕ್ರೆ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com