ಉದಯಪುರ: ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾಲಾಲ್ ಹತ್ಯೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇಂದು ಮಧ್ಯಾಹ್ನ ಉದಯಪುರದಲ್ಲಿ ಕನ್ಹಯ್ಯಾಲಾಲ್ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ನಗರದಲ್ಲಿ ಕರ್ಫ್ಯೂ ವಿಧಿಸಿದ ಬಳಿಕವೂ ಅಂತಿಮ ಯಾತ್ರೆಗೆ ಅಪಾರ ಜನಸ್ತೋಮ ನೆರೆದಿತ್ತು.
ಟೇಲರ್ ಕನ್ಹಯ್ಯಾಲಾಲ್ ಸಾಹು ಅವರ ಅಂತಿಮ ಸಂಸ್ಕಾರದ ವೇಳೆ ಭಾರೀ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಕನ್ಹಯ್ಯಾಲಾಲ್ ಅವರ ಮೃತ ದೇಹದ ಅಂತಿಮಯಾತ್ರೆ ಹೊರಟಾಗ ಅವರ ಪತ್ನಿ ಮತ್ತು ಕುಟುಂಬದವರು ದುಃಖ ಇಮ್ಮಡಿಗೊಂಡಿತ್ತು. ಕನ್ಹಯ್ಯಾಲಾಲ್ ಸಾಹು ಅವರ ಪತ್ನಿ, 'ಆರೋಪಿಯನ್ನು ಗಲ್ಲಿಗೇರಿಸಿ, ಇಂದು ನನ್ನ ಗಂಡನನ್ನು ಕೊಂದಿದ್ದಾರೆ, ನಾಳೆ ಇತರರನ್ನು ಕೊಲ್ಲುತ್ತಾರೆ' ಎಂದು ಆಕ್ರೋಶ ಹೊರ ಹಾಕಿದರು.
26 ಬಾರಿ ಇರಿತ.. ಕುತ್ತಿಗೆ ಬೇರ್ಪಡಿಸಲು ಯತ್ನ
ಕನ್ಹಯ್ಯಾಲಾಲ್ ಅವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಆರೋಪಿಯು 26 ಬಾರಿ ಹರಿತವಾದ ಆಯುಧಗಳಿಂದ ಕನ್ಹಯ್ಯಾ ಮೇಲೆ ಹಲ್ಲೆ ಮಾಡಿದ್ದಾರೆ. ಆತನ ಮೈಮೇಲೆ 13 ಗಾಯಗಳಾಗಿವೆ. ಇವುಗಳಲ್ಲಿ ಹೆಚ್ಚಿನವು ಕುತ್ತಿಗೆಯ ಸುತ್ತ ಇದ್ದವು. ಇದೇ ಸಮಯದಲ್ಲಿ, ಆರೋಪಿಗಳು ದೇಹದಿಂದ ಕುತ್ತಿಗೆಯನ್ನು ಬೇರ್ಪಡಿಸಲು ಪ್ರಯತ್ನಿಸಿದ್ದರು ಎಂದು ಮರಣೋತ್ತರ ಪರೀಕ್ಷೆಯ ರಿಪೋರ್ಟ್ ನಲ್ಲಿ ತಿಳಿಸಲಾಗಿದೆ.
Advertisement