ಪೋಷಣ್ ಯೋಜನೆ ಪ್ರಯೋಜನ ಪಡೆಯಲು ಮಕ್ಕಳ ಆಧಾರ್ ಕಡ್ಡಾಯವಲ್ಲ: ಕೇಂದ್ರ ಸರ್ಕಾರ

ಪೋಷಣ್ ಯೋಜನೆಯ ಪ್ರಯೋಜನ ಪಡೆಯುವಲ್ಲಿ ಮಕ್ಕಳ ಆಧಾರ್ ಕಡ್ಡಾಯವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಗುರುವಾರ ಸ್ಪಷ್ಪಪಡಿಸಿದೆ. ತಾಯಿಯ ಬಯೋಮೆಟ್ರಿಕ್ ಕಾರ್ಡ್ ಬಳಸಿ ಪೋಷಣ್ ಆ್ಯಪ್ ನಲ್ಲಿ ನೋಂದಣಿಯಾಗಿ ಇದರ ಅನುಕೂಲ ಪಡೆಯಬಹುದಾಗಿದೆ.
ಆಧಾರ್ ಸಾಂದರ್ಭಿಕ ಚಿತ್ರ
ಆಧಾರ್ ಸಾಂದರ್ಭಿಕ ಚಿತ್ರ

ನವದೆಹಲಿ: ಪೋಷಣ್ ಯೋಜನೆಯ ಪ್ರಯೋಜನ ಪಡೆಯುವಲ್ಲಿ ಮಕ್ಕಳ ಆಧಾರ್ ಕಡ್ಡಾಯವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಗುರುವಾರ ಸ್ಪಷ್ಪಪಡಿಸಿದೆ. ತಾಯಿಯ ಬಯೋಮೆಟ್ರಿಕ್ ಕಾರ್ಡ್ ಬಳಸಿ ಪೋಷಣ್ ಆ್ಯಪ್ ನಲ್ಲಿ ನೋಂದಣಿಯಾಗಿ ಇದರ ಅನುಕೂಲ ಪಡೆಯಬಹುದಾಗಿದೆ.

ಪೌಷ್ಟಿಕಯುಕ್ತ ಆಹಾರ ಪಡೆಯಲು ಲಕ್ಷಾಂತರ ಮಕ್ಕಳಿಗೆ ಶೀಘ್ರದಲ್ಲಿಯೇ ಆಧಾರ್ ಐಡಿ ಕಾರ್ಡ್ ಅಗತ್ಯವಿದೆ ಎಂಬ ಮಾಧ್ಯಮಗಳ ವರದಿ ಬೆನ್ನಲ್ಲೇ, ಈ ಸ್ಪಷ್ಟನೆ ನೀಡಲಾಗಿದೆ.

ತಾಯಿಯ ಆಧಾರ್ ಐಡಿ ಬಳಸುವ ಮೂಲಕ ಪೋಷಣ್ ಯೋಜನೆಯ ಅನುಕೂಲತೆ ಪಡೆಯಲು ಸಚಿವಾಲಯ ಖಾತ್ರಿ ಪಡಿಸಿದ್ದು, ಮಕ್ಕಳ ಆಧಾರ್ ವಿವರ ಕಡ್ಡಾಯವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಪ್ರತಿಪಾದಿಸಿದೆ. ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್ ನಲ್ಲಿಯೂ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.

ಪೋಷಣ್ ಆ್ಯಪ್ ನೊಂದಿಗೆ ಅಂಗನವಾಡಿ ಸೇವೆಯನ್ನು ಡಿಜಿಟಲೀಕರಣಗೊಳಿಸಲು ಸಚಿವಾಲಯ ಇತ್ತೀಚಿಗೆ ಪ್ರಸ್ತಾಪಿಸಿತ್ತು.ನೀವು ಒಂದು ಸ್ಥಳದಿಂದ ಇನ್ನೊಂದಕ್ಕೆ ಸ್ಥಳಾಂತರಗೊಂಡಾಗ, ಫಲಾನುಭವಿಗಳನ್ನು ಕಾರ್ಯಕ್ರಮದ ಭಾಗವಾಗಿ ಗುರುತಿಸಲು ಸುಲಭವಾಗುತ್ತದೆ. ಅದಕ್ಕಾಗಿ ಪೋಷಣ್ ಆ್ಯಪ್ ಸಾರ್ವತ್ರಿಕರಣಗೊಳಿಸಲು ರಾಜ್ಯಗಳಿಗೆ ಪ್ರಸ್ತಾಪಿಸಿದ್ದೇವೆ. ಫಲಾನುಭವಿಗಳ ಆಧಾರ್ ಲಿಂಕ್ ನೊಂದಿಗೆ ಕಾರ್ಯ ಕ್ರಮ ಅನುಷ್ಟಾನಗೊಳಿಸುವುದಾಗಿ ಈ ತಿಂಗಳ ಆರಂಭದಲ್ಲಿ ಅಧಿಕಾರಿಯೊಬ್ಬರು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com