ಜಾರಿ ಬಿದ್ದ ಜಾಣರು: ಉತ್ತರ ಪ್ರದೇಶ ಚುನಾವಣೆಯಲ್ಲಿ ಮರು ಆಯ್ಕೆಯಾಗಲು 11 ಶಾಸಕರು ವಿಫಲ!

ಉತ್ತರ ಪ್ರದೇಶದಲ್ಲಿ ಮತದಾರರು ಬಿಜೆಪಿಯನ್ನು ಮರು ಆಯ್ಕೆ ಮಾಡಿದ್ದರ ನಡುವೆ ಡಿಸಿಎಂ ಸೇರಿದಂತೆ ಯೋಗಿ ಆದಿತ್ಯನಾಥ ಸಂಪುಟದ 11 ಸಚಿವರನ್ನು ತಿರಸ್ಕರಿಸಿದ್ದಾರೆ.
ಮಾಜಿ ಇಡಿ ಅಧಿಕಾರಿ ರಾಜೇಶ್ವರ್ ಸಿಂಗ್
ಮಾಜಿ ಇಡಿ ಅಧಿಕಾರಿ ರಾಜೇಶ್ವರ್ ಸಿಂಗ್

ಲಕ್ನೋ: ಉತ್ತರ ಪ್ರದೇಶದಲ್ಲಿ ಮತದಾರರು ಬಿಜೆಪಿಯನ್ನು ಮರು ಆಯ್ಕೆ ಮಾಡಿದ್ದರ ನಡುವೆ ಡಿಸಿಎಂ ಸೇರಿದಂತೆ ಯೋಗಿ ಆದಿತ್ಯನಾಥ ಸಂಪುಟದ 11 ಸಚಿವರನ್ನು ತಿರಸ್ಕರಿಸಿದ್ದಾರೆ.

ಉಪ ಮುಖ್ಯಮಂತ್ರಿಯಾಗಿದ್ದ ಕೇಶವ ಪ್ರಸಾದ್‌ ಮೌರ್ಯ ಅವರು ಸಿರಾಥು ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿ ಪಲ್ಲವಿ ಪಟೇಲ್‌ ವಿರುದ್ಧ 7, 337 ಮತಗಳ ಅಂತರದಿಂದ ಪರಾಜಿತರಾಗಿದ್ದಾರೆ.

ಸಕ್ಕರೆ ಖಾತೆ ಸಚಿವರಾಗಿದ್ದ ಸುರೇಶ್‌ ರಾಣಾ ಅವರು ಶಾಮ್ಲಿ ಜಿಲ್ಲೆಯ ಥಾಣಾ ಭವನ್‌ ಕ್ಷೇತ್ರದಲ್ಲಿ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಪಕ್ಷದ ಅಭ್ಯರ್ಥಿ ಅಶ್ರಾಫ್‌ ಅಲಿ ಖಾನ್‌ ವಿರುದ್ಧ ಸುಮಾರು 10,000 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.

ಕಂದಾಯ ಸಚಿವರಾಗಿದ್ದ ಛತ್ರಪಾಲ್‌ ಸಿಂಗ್‌ ಗಂಗಾವರ್‌ ಅವರು ಬರೇಲಿ ಜಿಲ್ಲೆಯ ಬಹೇರಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಅತೌರ್‌ ರೆಹ್ಮಾನ್‌ ವಿರುದ್ಧ 3,355 ಮತಗಳ ಅಂತರದಿಂದ ಸೋತಿದ್ದಾರೆ.

ಗ್ರಾಮೀಣ ಅಭಿವೃದ್ಧಿ ಮಂತ್ರಿಯಾಗಿದ್ದ ರಾಜೇಂದ್ರ ಪ್ರತಾಪ್‌ ಸಿಂಗ್‌ ಅವರು ಪ್ರತಾಪಗಢದ ಪಟ್ಟೀ ಕ್ಷೇತ್ರದ ಎಸ್‌ಪಿ ಅಭ್ಯರ್ಥಿ ರಾಮ್‌ ಸಿಂಗ್‌ ವಿರುದ್ಧ 22,051 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

ಲೋಕೋಪಯೋಗಿ ರಾಜ್ಯ ಖಾತೆ ಸಚಿವರಾಗಿದ್ದ ಚಂದ್ರಿಕ ಪ್ರಸಾದ್‌ ಉಪಾಧ್ಯಾಯ ಅವರು ಚಿತ್ರಕೂಟ ಕ್ಷೇತ್ರದಿಂದ ಎಸ್‌ಪಿ ಅಭ್ಯರ್ಥಿ ಅನಿಲ್‌ ಕುಮಾರ್‌ ವಿರುದ್ಧ 20,876 ಮತಗಳ ಅಂತರದಿಂದ ಸೋತಿದ್ದಾರೆ.

ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದ ಆನಂದ್‌ ಸ್ವರೂಪ್‌ ಶುಕ್ಲ ಅವರು ಬರಿಯಾ ಕ್ಷೇತ್ರದಿಂದ ಎಸ್‌ಪಿ ಅಭ್ಯರ್ಥಿ ಜೈಪ್ರಕಾಶ್‌ ಅಂಚಲ್‌ ವಿರುದ್ಧ 12,951 ಮತಗಳಿಂದ ಸೋತಿದ್ದಾರೆ.

ಕ್ರೀಡಾ ಸಚಿವರಾಗಿದ್ದ ಉಪೇಂದ್ರ ತಿವಾರಿ ಅವರು ಫೆಫನಾ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿ ಸಂಗ್ರಾಮ್‌ ಸಿಂಗ್‌ ವಿರುದ್ಧ 19,354 ಮತಗಳ ಅಂತರದಿಂದಸೋಲನುಭವಿಸಿದ್ದಾರೆ.

ನಾಗರಿಕ ಸರಬರಾಜು ರಾಜ್ಯ ಖಾತೆ ಸಚಿವರಾಗಿದ್ದ ರಣವೇಂದ್ರ ಸಿಂಗ್‌ ಧುನ್ನಿ ಅವರನ್ನು ಫತೇಪುರ ಜಿಲ್ಲೆಯ ಹುಸೈನ್‌ ಗಂಜ್‌ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿ ಉಷಾ ಮೌರ್ಯ ಅವರು 25,181 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಕೃಷಿ ಮಂತ್ರಿಯಾಗಿದ್ದ ಲಾಖನ್‌ ಸಿಂಗ್‌ ರಾಜಪುತ ಅವರು ದಿಬಿಯಾಪುರ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿ ಪ್ರದೀಪ್‌ ಕುಮಾರ್‌ ಯಾದವ್‌ ವಿರುದ್ಧ ಕೇವಲ 473 ಮತಗಳಿಂದ ಪರಾಭವಗೊಂಡಿದ್ದಾರೆ.

ಶಿಕ್ಷಣ ಮಂತ್ರಿಯಾಗಿದ್ದ ಸತೀಶ್‌ ಚಂದ್ರ ದ್ವಿವೇದಿ  ಮತ್ತುಸಹಕಾರಿ ರಾಜ್ಯ ಖಾತೆ ಸಚಿವರಾಗಿದ್ದ ಸಂಗೀತಾ ಬಲವಂತ್‌ ಅವರು ಗಾಜಿಪುರ ಕ್ಷೇತ್ರದಲ್ಲಿ ಎಸ್‌ಪಿ ಅಭ್ಯರ್ಥಿ ಜೈ ಕಿಶಾನ್‌ ವಿರುದ್ಧ 1,692 ಮತಗಳ ಅಂತರದಿಂದ ಪರಾಜಯಗೊಂಡಿದ್ದಾರೆ.

ಮಾಜಿ ಇಡಿ ಅಧಿಕಾರಿ ಮತ್ತು ಬಿಜೆಪಿ ಅಭ್ಯರ್ಥಿ ರಾಜೇಶ್ವರ್ ಸಿಂಗ್ ಅವರು ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಸರೋಜಿನಿ ನಗರ ಕ್ಷೇತ್ರದಲ್ಲಿ ತಮ್ಮ ಸಮೀಪದ ಸಮಾಜವಾದಿ ಪಕ್ಷದ ಪ್ರತಿಸ್ಪರ್ಧಿ ವಿರುದ್ಧ 50,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com