ಮೊರ್ಬಿ ಸೇತುವೆ ಕುಸಿತ: 47 ಮಕ್ಕಳು ಸೇರಿ ಸುಮಾರು 141 ಸಾವು, ಮೃತರ ಸಂಬಂಧಿಕರಿಗೆ 6 ಲಕ್ಷ ರೂ. ಪರಿಹಾರ 

ಗುಜರಾತಿನ ಮೊರ್ಬಿಯಲ್ಲಿ ಭಾನುವಾರ ಸಂಭವಿಸಿದ ಕೇಬಲ್ ಸೇತುವೆ ಕುಸಿತ ಘಟನೆಯಲ್ಲಿ ಎರಡು ವರ್ಷದ ಪುಟ್ಟ ಮಗು ದುರುಕು ಝಾಲಾ ಸೇರಿದಂತೆ ಒಟ್ಟಾರೇ  47 ಮಕ್ಕಳು ಮೃತಪಟ್ಟಿದ್ದಾರೆ. ಈ ಪೈಕಿ 31 ಬಾಲಕರು , 16 ಬಾಲಕಿಯರಿದ್ದಾರೆ. ಇವರೆಲ್ಲರೂ 16 ವರ್ಷದೊಳಗಿನವರು ಎಂಬುದು ದೃಢಪಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಹಮದಾಬಾದ್: ಗುಜರಾತಿನ ಮೊರ್ಬಿಯಲ್ಲಿ ಭಾನುವಾರ ಸಂಭವಿಸಿದ ಕೇಬಲ್ ಸೇತುವೆ ಕುಸಿತ ಘಟನೆಯಲ್ಲಿ ಎರಡು ವರ್ಷದ ಪುಟ್ಟ ಮಗು ದುರುಕು ಝಾಲಾ ಸೇರಿದಂತೆ ಒಟ್ಟಾರೇ  47 ಮಕ್ಕಳು ಮೃತಪಟ್ಟಿದ್ದಾರೆ. ಈ ಪೈಕಿ 31 ಬಾಲಕರು , 16 ಬಾಲಕಿಯರಿದ್ದಾರೆ. ಇವರೆಲ್ಲರೂ 16 ವರ್ಷದೊಳಗಿನವರು ಎಂಬುದು ದೃಢಪಟ್ಟಿದೆ.

ಒಟ್ಟಾರೇ ದುರಂತದಲ್ಲಿ ಸುಮಾರು 141 ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.  ಇದಲ್ಲದೇ 58 ಪುರುಷರು ಮತ್ತು 27 ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆಸ್ಪತ್ರೆ ಮೂಲಗಳು ತಿಳಿಸಿವೆ.

ಮೃತರ ಸಂಬಂಧಿಕರಿಗೆ ರಾಜ್ಯಸರ್ಕಾರದಿಂದ 4 ಲಕ್ಷ ರೂ. ಪ್ರಧಾನ ಮಂತ್ರಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿ ರೂ. 2 ಲಕ್ಷ, ಗಾಯಾಳುಗಳಿಗೆ  ತಲಾ 50,000 ರೂ. ಪರಿಹಾರವನ್ನು ಘೋಷಿಸಲಾಗಿದೆ. 17 ಜನರು ಇನ್ನೂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇಬ್ಬರು ಕಣ್ಮರೆಯಾಗಿದ್ದಾರೆ ಎಂದು ಗುಜರಾತ್ ವಿಪತ್ತು ನಿರ್ವಹಣಾ ಸಚಿವ ರಾಜೇಂದ್ರ ತ್ರಿವೇದಿ ತಿಳಿಸಿದ್ದಾರೆ.

ಶತಮಾನಗಳಷ್ಟು ಹಳೆಯದಾದ ಸೇತುವೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಆರೋಪದಡಿ 9 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com