ಭಾರತ್ ಜೋಡೋ ಯಾತ್ರೆಯಿಂದ ಮೌನ ಕ್ರಾಂತಿ, ರಾಜಕೀಯ ಚಿತ್ರಣವೇ ಬದಲಾವಣೆ: ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್‌ ಪಕ್ಷದ ಭಾರತ್ ಜೋಡೋ ಯಾತ್ರೆಯು ರಾಜಕೀಯ ಚಿತ್ರಣವನ್ನು ಬದಲಾಯಿಸುವ ಮೌನ ಕ್ರಾಂತಿಯನ್ನು ತರುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಹೇಳಿದ್ದಾರೆ.
ಪಾದಯಾತ್ರೆಯಲ್ಲಿ ಮಲ್ಲಿಕಾರ್ಜುನ ಖರ್ಗೆ
ಪಾದಯಾತ್ರೆಯಲ್ಲಿ ಮಲ್ಲಿಕಾರ್ಜುನ ಖರ್ಗೆ

ಹೈದರಾಬಾದ್: ಕಾಂಗ್ರೆಸ್‌ ಪಕ್ಷದ ಭಾರತ್ ಜೋಡೋ ಯಾತ್ರೆಯು ರಾಜಕೀಯ ಚಿತ್ರಣವನ್ನು ಬದಲಾಯಿಸುವ ಮೌನ ಕ್ರಾಂತಿಯನ್ನು ತರುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಹೇಳಿದ್ದಾರೆ.

ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಬೋವೆನಪಲ್ಲಿಯಲ್ಲಿ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಖರ್ಗೆ, ಯಾತ್ರಿಗಳೊಂದಿಗೆ ಸಂವಾದ ನಡೆಸಿದರು. ಅಂತೆಯೇ ಅವರು ಕೂಡ ರಾಹುಲ್ ಗಾಂಧಿ ಅವರೊಂದಿಗೆ 3500 ಕಿಲೋಮೀಟರ್ ದೂರದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. 'ನಮ್ಮ ಪಕ್ಷದ ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಉತ್ತಮ ಸ್ಫೂರ್ತಿಯ ಮೂಲವಾಗಿದ್ದಾರೆ. ಭಾರತ್ ಜೋಡೋ ಯಾತ್ರೆಯು ಮೂಕ ಕ್ರಾಂತಿಯನ್ನು ತರುತ್ತಿದ್ದು, ರಾಜಕೀಯ ಚಿತ್ರಣವನ್ನೇ ಬದಲಾಯಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ನಂತರ, ಯಾತ್ರೆಯು MGB ಬಜಾಜ್ ಶೋರೂಮ್, ಬಾಲಾನಗರ ಮುಖ್ಯ ರಸ್ತೆ, ಹೈದರಾಬಾದ್ ನಗರದಿಂದ ಪುನರಾರಂಭವಾಯಿತು, ರಾಹುಲ್ ಗಾಂಧಿ ಜೊತೆಗೆ ಇತರ ಭಾರತ್ ಯಾತ್ರಿಗಳು ಯಾತ್ರೆಯ 56 ನೇ ದಿನದಂದು ತಮ್ಮ ನಡಿಗೆಯನ್ನು ಮುಂದುವರೆಸಿದರು. ಯಾತ್ರೆಯ ಬೆಳಗಿನ ವಿರಾಮವು ಹೋಟೆಲ್ ಕಿನಾರಾ ಗ್ರ್ಯಾಂಡ್, ಹಫೀಜ್‌ಪೇಟ್‌ನಲ್ಲಿ ಇರಲಿದೆ, ಬಳಿಕ ಪಾದಯಾತ್ರೆಯು BHEL ಬಸ್ ನಿಲ್ದಾಣದಿಂದ ಪುನರಾರಂಭವಾಗುತ್ತದೆ. ಸಂಜೆಯ ವಿರಾಮ ಹರಿ ದೋಷ, ಮುತ್ತಂಗಿ ಬಳಿ ಮತ್ತು ರಾತ್ರಿ ನಿಲುಗಡೆ ಕೌಲಂಪೇಟೆ ಬಳಿ, ಗಣೇಶ ಮಂದಿರ ರುದ್ರಾರಾಮ್ ಎದುರು ಇರುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಕಳೆದ ವಾರ ಯಾತ್ರೆ ತೆಲಂಗಾಣ ಪ್ರವೇಶ ಮಾಡಿದ್ದು, ಇದಕ್ಕೂ ಮೊದಲು ರಾಹುಲ್ ಗಾಂಧಿ ಅವರು ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮ್ಯಾರಥಾನ್ ನಡಿಗೆಯನ್ನು ಪೂರ್ಣಗೊಳಿಸಿದ್ದಾರೆ. ತೆಲಂಗಾಣ ರಾಜ್ಯ ಕಾಂಗ್ರೆಸ್ ಯಾತ್ರೆಯನ್ನು ಸಂಘಟಿಸಲು 10 ವಿಶೇಷ ಸಮಿತಿಗಳನ್ನು ರಚಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com