ಛತ್ತೀಸ್ ಗಡದಲ್ಲಿ ವಿಲಕ್ಷಣ ಘಟನೆ: 8 ವರ್ಷದ ಬಾಲಕ ಕಚ್ಚಿದ್ದರಿಂದ ನಾಗರ ಹಾವು ಸಾವು!

ಮನೆಯ ಹಿತ್ತಲಿನಲ್ಲಿ ಆಟವಾಡುವಾಗ 8 ವರ್ಷದ ಬಾಲಕನ ಕೈಗೆ ಸುತ್ತಿಕೊಂಡ ಹಾವು ಆತನ ಕೈ ಕಚ್ಚಿದೆ. ಇದರಿಂದ ಕೋಪಗೊಂಡ ಆತ 2 ಬಾರಿ ಕಚ್ಚಿರುವ ಘಟನೆ ಛತ್ತೀಸ್ ಗಡದಲ್ಲಿ ನಡೆದಿದೆ.
ಬಾಲಕ ಮತ್ತು ಹಾವು
ಬಾಲಕ ಮತ್ತು ಹಾವು

ರಾಯಪುರ್: ಮನೆಯ ಹಿತ್ತಲಿನಲ್ಲಿ ಆಟವಾಡುವಾಗ 8 ವರ್ಷದ ಬಾಲಕನ ಕೈಗೆ ಸುತ್ತಿಕೊಂಡ ಹಾವು ಆತನ ಕೈ ಕಚ್ಚಿದೆ. ಇದರಿಂದ ಕೋಪಗೊಂಡ ಆತ 2 ಬಾರಿ ಕಚ್ಚಿರುವ ಘಟನೆ ಛತ್ತೀಸ್ ಗಡದಲ್ಲಿ ನಡೆದಿದೆ.

ರಾಯ್‌ಪುರದಿಂದ ಈಶಾನ್ಯಕ್ಕೆ ಸುಮಾರು 350 ಕಿಮೀ ದೂರದಲ್ಲಿರುವ ಜಶ್‌ಪುರ್ ಜಿಲ್ಲೆಯ ದೂರದ ಪಂದರ್‌ಪಾಡ್ ಗ್ರಾಮದಲ್ಲಿ 8 ವರ್ಷದ ಬಾಲಕ ದೀಪಕ್ ಎಂಬಾತನ ಕೈ ಸುತ್ತಿಕೊಂಡು ಕಚ್ಚಿದೆ.  ನಾಗರಹಾವು ನನ್ನ ಕೈ ಕಚ್ಚಿತು. ನಾನು ಅದನ್ನು ದೂರ ಸರಿಸಲು ಪ್ರಯತ್ನಿಸಿದೆ, ಆದರೆ ಅದು ದೂರ ಹೋಗಲಿಲ್ಲ, ಹೀಗಾಗಿ ನಾನು ಅದಕ್ಕೆ ಎರಡು ಬಾರಿ ಕಚ್ಚಿದೆ.  ಇದೆಲ್ಲಾ ಕ್ಷಣಾರ್ಧದಲ್ಲಿ ಸಂಭವಿಸಿತು ಎಂದು ಆತ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾನೆ.

ಕುಟುಂಬದವರು ಆತನನ್ನು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆತನಿಗೆ ಶೀಘ್ರವಾಗಿ ಔಷಧಿ ನೀಡಿ, ಇಡೀ ದಿನ ವೀಕ್ಷಣೆಯಲ್ಲಿ ಇರಿಸಲಾಯಿತು  ಆನಂತರ ಡಿಸ್ಚಾರ್ಜ್ ಮಾಡಲಾಯಿತು" ಎಂದು ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ ಜೆಮ್ಸ್ ಮಿಂಜ್ ಹೇಳಿದರು.

ದೀಪಕ್ ಯಾವುದೇ ರೋಗಲಕ್ಷಣಗಳನ್ನು ತೋರಿಸಲಿಲ್ಲ, ದೀಪಕ್ ಗೆ ಹಾವು  ಕಚ್ಚಿದೆ ಆದರೆ  ವಿಷ ಬಿಡುಗಡೆಯಾಗಿಲ್ಲ.  ಆತನಿಗೆ ಹಾವು ಕಚ್ಚಿರುವ ನೋವಿದೆ. ಹಾವು ಕಚ್ಚಿದ ಪ್ರದೇಶದ ಸುತ್ತ ರೋಗಲಕ್ಷಣಗಳು ಗೋಚರಿಸಬಹುದು ಎಂದು ತೋರಿಸಬಹುದು ”ಎಂದು ಉರಗ ತಜ್ಞ ಕೈಸರ್ ಹುಸೇನ್ ವಿವರಿಸಿದರು.

ಇಂತಹ ಪ್ರಕರಣಗಳು ಅಪರೂಪ. ಜಶ್ಪುರ್ ಜಿಲ್ಲೆಯಲ್ಲಿ ಇಂತಹ ಘಟನೆಯನ್ನು ನಾನು ನೋಡಿಲ್ಲ ಎಂದು ಹಿರಿಯ ಪತ್ರಕರ್ತ ರಮೇಶ್ ಶರ್ಮಾ ಹೇಳಿದ್ದಾರೆ.

ಜಶ್ಪುರ್ ಬುಡಕಟ್ಟು ಜಿಲ್ಲೆಯಾಗಿದ್ದು, ಇದನ್ನು ನಾಗ್ಲೋಕ್ (ಸರ್ಪಗಳ ವಾಸಸ್ಥಾನ) ಎಂದೂ ಕರೆಯುತ್ತಾರೆ ಏಕೆಂದರೆ ಇದು 200 ಕ್ಕೂ ಹೆಚ್ಚು ಜಾತಿಯ ಹಾವುಗಳನ್ನು ಹೊಂದಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com