ಎಸ್‌ಇಡಬ್ಲ್ಯುಎ ಸಂಸ್ಥಾಪಕಿ, ಪದ್ಮಭೂಷಣ ಪ್ರಶಸ್ತಿ ವಿಜೇತೆ ಇಳಾ ಭಟ್ ನಿಧನ

ಖ್ಯಾತ ಸಾಮಾಜಿಕ ಕಾರ್ಯಕರ್ತೆ ಮತ್ತು ಸ್ವಯಂ ಉದ್ಯೋಗ ಮಹಿಳಾ ಸಂಘದ (ಎಸ್‌ಇಡಬ್ಲ್ಯುಎ) ಸಂಸ್ಥಾಪಕಿ ಇಳಾ ಭಟ್ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಇಳಾ ಭಟ್
ಇಳಾ ಭಟ್

ಅಹಮದಾಬಾದ್: ಖ್ಯಾತ ಸಾಮಾಜಿಕ ಕಾರ್ಯಕರ್ತೆ ಮತ್ತು ಸ್ವಯಂ ಉದ್ಯೋಗ ಮಹಿಳಾ ಸಂಘದ (ಎಸ್‌ಇಡಬ್ಲ್ಯುಎ) ಸಂಸ್ಥಾಪಕಿ ಇಳಾ ಭಟ್ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಇಳಾ ಭಟ್ ಅವರಿಗೆ 1977 ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ, 1984 ರಲ್ಲಿ ರೈಟ್ ಲೈವ್ಲಿಹುಡ್ ಪ್ರಶಸ್ತಿ ಮತ್ತು ಗುಜರಾತಿನ ಬಡ ಮಹಿಳೆಯರ ಸಬಲೀಕರಣಕ್ಕಾಗಿ 1986 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿತ್ತು. 2010 ರಲ್ಲಿ ಅವರು ನಿವಾನೊ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

ಇಳಾ ಭಟ್ ಅವರು 2016 ರಿಂದ ಸಬರಮತಿ ಆಶ್ರಮದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು.

1933 ರಲ್ಲಿ ಜನಿಸಿದ ಇಳಾ ಭಟ್ ಅವರು 1972 ರಲ್ಲಿ ಬಡ, ಸ್ವಯಂ ಉದ್ಯೋಗಿ ಮಹಿಳಾ ಕಾರ್ಮಿಕರ ಸಂಘಟನೆಯಾದ ಎಸ್‌ಇಡಬ್ಲ್ಯುಎ ಅನ್ನು ಸ್ಥಾಪಿಸಿದರು ಮತ್ತು 1972 ರಿಂದ 1996 ರವರೆಗೆ ಅದರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com