ರಾಷ್ಟ್ರ ರಾಜಧಾನಿಯಲ್ಲಿ ದಟ್ಟ ವಾಯುಮಾಲಿನ್ಯ, ಸರ್ಕಾರಕ್ಕೆ ಗಂಭೀರತೆ ಇಲ್ಲ: ವರುಣ್ ಗಾಂಧಿ

ದಟ್ಟ ವಾಯುಮಾಲಿನ್ಯದಿಂದ ರಾಷ್ಟ್ರ ರಾಜಧಾನಿಯಲ್ಲಿ ಪರಿಸರ ತೀವ್ರ ರೀತಿಯಲ್ಲಿ ಹದಗೆಡುತ್ತಿರುವಂತೆಯೇ, ಪರಿಸ್ಥಿತಿ ನಿಭಾಯಿಸುವಲ್ಲಿ ದೆಹಲಿ ಹಾಗೂ ಕೇಂದ್ರ ಸರ್ಕಾರದ ನಡುವಣ ಸಮನ್ವಯತೆ, ಕಾಳಜಿ ಕೊರತೆಯನ್ನು ಸಂಸದ ವರುಣ್ ಗಾಂಧಿ ಗುರುವಾರ ಪ್ರಶ್ನಿಸಿದ್ದಾರೆ. 
ವರುಣ್ ಗಾಂಧಿ
ವರುಣ್ ಗಾಂಧಿ

ನವದೆಹಲಿ: ದಟ್ಟ ವಾಯುಮಾಲಿನ್ಯದಿಂದ ರಾಷ್ಟ್ರ ರಾಜಧಾನಿಯಲ್ಲಿ ಪರಿಸರ ತೀವ್ರ ರೀತಿಯಲ್ಲಿ ಹದಗೆಡುತ್ತಿರುವಂತೆಯೇ, ಪರಿಸ್ಥಿತಿ ನಿಭಾಯಿಸುವಲ್ಲಿ ದೆಹಲಿ ಹಾಗೂ ಕೇಂದ್ರ ಸರ್ಕಾರದ ನಡುವಣ ಸಮನ್ವಯತೆ, ಕಾಳಜಿ ಕೊರತೆಯನ್ನು ಸಂಸದ ವರುಣ್ ಗಾಂಧಿ ಗುರುವಾರ ಪ್ರಶ್ನಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಸಮಸ್ಯೆಯನ್ನು ಸರ್ಕಾರವಾಗಲಿ ಅಥವಾ ಜನರಾಗಲಿ ಗಂಭೀರವಾಗಿ ತೆಗೆದುಕೊಂಡಿಲ್ಲ.  ಉಸಿರಾಟ, ಹೃದಯ ಮತ್ತು ಶ್ವಾಸಕೋಶ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಂದ ಆಸ್ಪತ್ರೆಗಳು ತುಂಬಿ ತುಳುಕಾಡುತ್ತಿವೆ ಎಂದು ಹೇಳಿದ್ದಾರೆ. 
 
ದೆಹಲಿ-ಎನ್ ಸಿಆರ್ ಪ್ರದೇಶದಲ್ಲಿನ 10 ಮಕ್ಕಳ ಪೈಕಿ 8 ಮಕ್ಕಳಿಗೆ ಉಸಿರಾಟದ ಸಮಸ್ಯೆಯಿದೆ. ಚರ್ಚೆ ನಡೆದ ಒಂದು ವರ್ಷದ ನಂತರವೂ ಅನೇಕ ಸರ್ಕಾರಿ ಘಟಕಗಳ ನಡುವಣ ಸಮನ್ವಯತೆಯ ಕೊರತೆ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ.

ಒಂದು ವೇಳೆ ಈ ಸಮಸ್ಯೆಯನ್ನು ಹೋಗಲಾಡಿಸದಿದ್ದಲ್ಲಿ ಗಾಳಿಯ ಗುಣಮಟ್ಟ ಕ್ಷಿಣಿಸುವುದರೊಂದಿಗೆ  46 ಮಿಲಿಯನ್ ಜನರ ಉಸಿರಾಟಕ್ಕೆ ತುಂಬಾ ಸಮಸ್ಯೆಯಾಗಲಿದೆ ಎಂದು ವರುಣ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com