ಬಂಧಿತ ಉಗ್ರರು
ಬಂಧಿತ ಉಗ್ರರು

ಜಮ್ಮು-ಕಾಶ್ಮೀರ: ಇಬ್ಬರು ಎಲ್ಇಟಿ ಉಗ್ರರ ಬಂಧನ

ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಹೈಬ್ರೀಡ್ ಉಗ್ರರನ್ನು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಪಾಕಿಸ್ತಾನ ಮೂಲದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಹೈಬ್ರೀಡ್ ಉಗ್ರರನ್ನು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತ ಇಬ್ಬರು ಉಗ್ರರನ್ನು ರಿಜ್ವಾನ್ ಮುಷ್ತಾಕ್ ವಾನಿ ಮತ್ತು ಜಮೀಲ್ ಅಹ್ಮದ್ ಪರ್ರಾ ಎಂದು ಗುರ್ತಿಸಲಾಗಿದೆ.

ಶುಕ್ರವಾರ ಸಂಜೆ ಷಾ ಫೈಸಲ್ ಮಾರ್ಕೆಟ್‌ನಲ್ಲಿ ಬಾರಾಮುಲ್ಲಾ ಹಾಗೂ ಸೊಪೋರ್ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ್ದಾರೆ.

ಬಳಿಕ ಇಬ್ಬರನ್ನು ತಡೆಹಿಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಇಬ್ಬರನ್ನು ಬಂಧನಕ್ಕೊಳಪಡಿಸಿದ್ದಾರೆ.

ಇಬ್ಬರ ಬಳಿ ಇದ್ದ ಒಂದು ಪಿಸ್ತೂಲ್, ಮ್ಯಾಗಜೀನ್, ಮದ್ದುಗುಂಡುಗಳು, ಗ್ರೆನೇಡ್‌ಗಳು ಮತ್ತು ಸುಧಾರಿತ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರಿಬ್ಬರೂ ಸ್ಥಳೀಯರಲ್ಲದ ನಿಷೇಧಿತ ಉಗ್ರ ಸಂಘಟನೆ ಎಲ್ಇಟಿಯ ಹೈಬ್ರೀಡ್ ಭಯೋತ್ಪಾದಕರೆಂದು ತಿಳಿದುಬಂದಿದೆ.

ಇಬ್ಬರು ಉಗ್ರರು ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ದಾಳಿ ನಡೆಸಲು ಅವಕಾಶವನ್ನು ಹುಡುಕುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇಬ್ಬರ ವಿರುದ್ಧ ಸೋಪೋರ್ ಪೊಲೀಸರು ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com