ತೆಲಂಗಾಣ: ಕಲುಷಿತ 'ಶಾವಿಗೆ ಉಪ್ಪಿಟ್ಟು' ಸೇವಿಸಿದ 60 ವಿದ್ಯಾರ್ಥಿನಿಯರು ಅಸ್ವಸ್ಥ, ಆಸ್ಪತ್ರೆಗೆ  ದಾಖಲು

ಕೆಜಿಬಿವಿಯ 60 ವಿದ್ಯಾರ್ಥಿನಿಯರು ಶನಿವಾರ ಕಲುಷಿತ ಉಪಹಾರ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 25 ವಿದ್ಯಾರ್ಥಿನಿಯರು ಇನ್ನೂ ಆಸ್ಪತ್ರೆಯಲ್ಲೇ ಇದ್ದಾರೆ. ಆದರೆ, ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ವಿಷಾಹಾರ ಸೇವಿಸಿದ ನಂತರ ಆಸ್ಪತ್ರೆಗೆ ದಾಖಲಾದ ಕೆಜಿಬಿವಿಯ ವಿದ್ಯಾರ್ಥಿನಿಯರು
ವಿಷಾಹಾರ ಸೇವಿಸಿದ ನಂತರ ಆಸ್ಪತ್ರೆಗೆ ದಾಖಲಾದ ಕೆಜಿಬಿವಿಯ ವಿದ್ಯಾರ್ಥಿನಿಯರು
Updated on

ಸಂಗಾ ರೆಡ್ಡಿ: ಕೆಜಿಬಿವಿಯ 60 ವಿದ್ಯಾರ್ಥಿನಿಯರು ಶನಿವಾರ ಕಲುಷಿತ ಉಪಹಾರ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 25 ವಿದ್ಯಾರ್ಥಿನಿಯರು ಇನ್ನೂ ಆಸ್ಪತ್ರೆಯಲ್ಲೇ ಇದ್ದಾರೆ. ಆದರೆ, ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.

ಸಂಗಾರೆಡ್ಡಿ ಜಿಲ್ಲೆಯ ನಾರಾಯಣಖೇಡ್ ಪಟ್ಟಣದ ಉಪನಗರದಲ್ಲಿರುವ ಈ ಶಾಲೆಯಲ್ಲಿ 6 ನೇ ತರಗತಿಯಿಂದ ಇಂಟರ್ ಮೀಡಿಯೇಟ್ ವರೆಗೆ ಸುಮಾರು 300 ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ.

ಮೂಲಗಳ ಪ್ರಕಾರ, ವಿದ್ಯಾರ್ಥಿಗಳು ಉಪಾಹಾರಕ್ಕಾಗಿ ಶಾವಿಗೆ ಉಪ್ಪಿಟ್ಟು ಮತ್ತು ಸ್ವಲ್ಪ ಹಾಲನ್ನು ಸೇವಿಸಿದ್ದಾರೆ. ಶೀಘ್ರದಲ್ಲೇ, ಅವರು ವಾಂತಿ ಮಾಡಲು ಪ್ರಾರಂಭಿಸಿದರು. ನಂತರ ಅವರಿಗೆ ಬಡಿಸಿದ ಉಪ್ಪಿಟ್ಟಿನಲ್ಲಿ ಹುಳುಗಳು ಕಾಣಿಸಿಕೊಂಡಿವೆ. ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವುದನ್ನು ಗಮನಿಸಿದ ಹಾಸ್ಟೆಲ್ ಆಡಳಿತ ಮಂಡಳಿ 20 ಬಾಲಕಿಯರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದೆ.

ಇದೇ ವೇಳೆ ನಾರಾಯಣಖೇಡ್ ಆರ್‌ಡಿಒ ಅಂಬಾದಾಸ್ ರಾಜೇಶ್ವರ್, ತಹಶೀಲ್ದಾರ್ ಮುರಳಿ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಕೃಷ್ಣಾ ರೆಡ್ಡಿ ಅವರು ಆಸ್ಪತ್ರೆಗೆ ಧಾವಿಸಿದ್ದಾರೆ ಮತ್ತು ನಂತರ ಹಾಸ್ಟೆಲ್‌ಗೆ ಧಾವಿಸಿದಾಗ ಇನ್ನುಳಿದ ಇತರ ವಿದ್ಯಾರ್ಥಿಗಳಿಗೂ ವಾಂತಿಭೇದಿ ಕಾಣಿಸಿಕೊಂಡಿದೆ.

ಅಧಿಕಾರಿಗಳು ಕೆಲವು ಆಟೋಗಳ ಮೂಲಕ ಕೆಲವು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸಾಗಿಸಿದರು ಮತ್ತು ಇತರರನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ದರು.

ಬೆಳಗಿನ ಉಪಾಹಾರದಲ್ಲಿ ಹುಳುಗಳು ಇವೆ ಎಂದು ವಿದ್ಯಾರ್ಥಿನಿಯರು ಹೇಳಿದರೂ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಅನ್ನದಲ್ಲಿ ಹುಳುಗಳು ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ ಎಂದೂ ಹೇಲಿದ್ದಾರೆ.

ಉಳಿದ ವಿದ್ಯಾರ್ಥಿಗಳನ್ನು ಉಪಾಹಾರ ಸೇವಿಸಿದ್ದೀರಾ ಎಂದು ಆರ್‌ಡಿಒ ಕೇಳಿದಾಗ, ಕಲುಷಿತ ಆಹಾರವನ್ನು ಎಸೆದ ನಂತರ ಸಿಬ್ಬಂದಿ ಮತ್ತೆ ಅಡುಗೆ ಮಾಡಿಲ್ಲ ಎಂದು ಹೇಳಿದರು. ಇದರಿಂದ ಕೋಪಗೊಂಡ ಆರ್‌ಡಿಒ, ವಿದ್ಯಾರ್ಥಿಗಳಿಗೆ ಅನ್ನ, ಬೇಳೆ ಬೇಯಿಸುವಂತೆ ಸಿಬ್ಬಂದಿಗೆ ಸೂಚಿಸಿದರು. ಇತರ ವಿದ್ಯಾರ್ಥಿಗಳ ಪೋಷಕರು ಹಾಸ್ಟೆಲ್‌ಗೆ ಧಾವಿಸಿ ಮನೆಗೆ ಕರೆದೊಯ್ದರು.

ಈ ಸಂಬಂಧ ಜಿಲ್ಲಾಧಿಕಾರಿ ಎ. ಶರತ್, ಹಾಸ್ಟೆಲ್‌ನ ವಿಶೇಷ ಅಧಿಕಾರಿ ಮತ್ತು ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com