ಉತ್ತರ ಪ್ರದೇಶ: ಅಂಗಡಿಗೆ ತೆರಳಿದ್ದ 5 ವರ್ಷದ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ ಯುವಕ
ಯುವಕನೊಬ್ಬ ಐದು ವರ್ಷದ ಬಾಲಕಿಯ ಮೇಲೆ ಇಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. 20 ವರ್ಷದ ಆರೋಪಿ, ಬುಧವಾರ ಬಾಲಕಿಯು ಏನನ್ನೋ ಖರೀದಿಸಲೆಂದು ಅಂಗಡಿಗೆ ಹೋಗಿದ್ದಾಗ ಅಲ್ಲಿಂದ ಕರೆದೊಯ್ದಿದ್ದಾನೆ.
Published: 10th November 2022 12:02 PM | Last Updated: 10th November 2022 04:16 PM | A+A A-

ಪ್ರಾತಿನಿಧಿಕ ಚಿತ್ರ
ಮಥುರಾ: ಯುವಕನೊಬ್ಬ ಐದು ವರ್ಷದ ಬಾಲಕಿಯ ಮೇಲೆ ಇಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
20 ವರ್ಷದ ಆರೋಪಿ, ಬುಧವಾರ ಬಾಲಕಿಯು ಏನನ್ನೋ ಖರೀದಿಸಲೆಂದು ಅಂಗಡಿಗೆ ಹೋಗಿದ್ದಾಗ ಅಲ್ಲಿಂದ ಕರೆದೊಯ್ದಿದ್ದಾನೆ.
ನಂತರ ಆಕೆಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಘಟನೆ ಬಗ್ಗೆ ಬಾಲಕಿ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾಳೆ ಮತ್ತು ಅವರು ಇತರ ಗ್ರಾಮಸ್ಥರೊಂದಿಗೆ ಸೇರಿ ಪ್ರತಿಭಟನೆ ಆರಂಭಿಸಿದರು ಎಂದು ಎಸ್‌ಎಚ್‌ಒ (ಗೋವಿಂದ್ ನಗರ) ಸಂಜಯ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಗುಂಪನ್ನು ಚದುರಿಸಿದ ನಂತರ, ಪೊಲೀಸರು ಆರೋಪಿಯ ಮನೆಗೆ ತಲುಪಿದಾಗ ಅದು ಬೀಗ ಹಾಕಿರುವುದು ಕಂಡುಬಂದಿದೆ. ಆರೋಪಿಯ ಪತ್ತೆಗೆ ಪ್ರಯತ್ನ ಮುಂದುವರಿದಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: 13 ವರ್ಷದ ಬಾಲಕಿ ಮೇಲೆ ಆರು ಮಂದಿ ಅಪ್ರಾಪ್ತರಿಂದ ಅತ್ಯಾಚಾರ, ಕೃತ್ಯವನ್ನು ವಿಡಿಯೋ ಮಾಡಿಕೊಂಡ ಆರೋಪಿಗಳು
ಯುವಕನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ (ಪೊಕ್ಸೊ) ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.