ಬಲವಂತದ ಧಾರ್ಮಿಕ ಮತಾಂತರ 'ಬಹಳ ಗಂಭೀರ' ವಿಷಯ: ಸುಪ್ರೀಂ ಕೋರ್ಟ್

ಬಲವಂತದ ಧಾರ್ಮಿಕ ಮತಾಂತರವನ್ನು 'ಬಹಳ ಗಂಭೀರ' ವಿಚಾರವೆಂದು ಪರಿಗಣಿಸಿದ ಸುಪ್ರೀಂ ಕೋರ್ಟ್, ಸೋಮವಾರ ಕೇಂದ್ರವು ಮಧ್ಯಪ್ರವೇಶಿಸಿ ಈ ಆಚರಣೆಯನ್ನು ಪರಿಶೀಲಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವಂತೆ ಕೇಳಿದೆ.
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Updated on

ನವದೆಹಲಿ: ಬಲವಂತದ ಧಾರ್ಮಿಕ ಮತಾಂತರವನ್ನು 'ಬಹಳ ಗಂಭೀರ' ವಿಚಾರವೆಂದು ಪರಿಗಣಿಸಿದ ಸುಪ್ರೀಂ ಕೋರ್ಟ್, ಸೋಮವಾರ ಕೇಂದ್ರವು ಮಧ್ಯಪ್ರವೇಶಿಸಿ ಈ ಆಚರಣೆಯನ್ನು ಪರಿಶೀಲಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವಂತೆ ಕೇಳಿದೆ.

ಬಲವಂತದ ಧಾರ್ಮಿಕ ಮತಾಂತರಗಳನ್ನು ನಿಲ್ಲಿಸದಿದ್ದರೆ 'ಬಹಳ ಕಠಿಣ ಪರಿಸ್ಥಿತಿ'ಯು ನಿರ್ಮಾಣವಾಗುತ್ತದೆ' ಎಂದು ಅದು ಎಚ್ಚರಿಸಿದೆ.

ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠವು, ಆಮಿಷಗಳ ಮೂಲಕ ನಡೆಯುವ ಮತಾಂತರಗಳನ್ನು ತಡೆಯುವ ಕ್ರಮಗಳನ್ನು ಪಟ್ಟಿ ಮಾಡಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಕೇಳಿದೆ.

'ಇದು ಬಹಳ ಗಂಭೀರವಾದ ವಿಷಯ. ಬಲವಂತದ ಮತಾಂತರವನ್ನು ನಿಲ್ಲಿಸಲು ಕೇಂದ್ರದಿಂದ ಪ್ರಾಮಾಣಿಕ ಪ್ರಯತ್ನಗಳು ನಡೆಯಬೇಕು. ಇಲ್ಲದಿದ್ದರೆ ಬಹಳ ಕಷ್ಟದ ಪರಿಸ್ಥಿತಿ ಎಂದುರಾಗುತ್ತದೆ. ನೀವು ಯಾವ ಕ್ರಮವನ್ನು ಕೈಗೊಳ್ಳುವಿರಿ ಎಂಬುದನ್ನು ನಮಗೆ ತಿಳಿಸಿ.... ನಂತರ ನೀವು ಹೆಜ್ಜೆ ಹಾಕಬೇಕು' ಎಂದು ಸೂಚಿಸಿದೆ.

'ಇದು ರಾಷ್ಟ್ರದ ಭದ್ರತೆ, ಧರ್ಮ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಆದ್ದರಿಂದ, ಭಾರತ ಸರ್ಕಾರವು ತಮ್ಮ ನಿಲುವನ್ನು ಸ್ಪಷ್ಟಪಡಿಸುವುದು ಮತ್ತು ಅಂತಹ ಬಲವಂತದ ಮತಾಂತರವನ್ನು ತಡೆಯಲು ಮುಂದೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದೆಂಬುದರ ಬಗ್ಗೆ ತಿಳಿಸುವುದು ಉತ್ತಮ' ಎಂದು ಪೀಠ ಹೇಳಿದೆ.

'ಹೆದರಿಸುವುದು, ಬೆದರಿಕೆ, ಉಡುಗೊರೆಗಳು ಮತ್ತು ಆರ್ಥಿಕ ಪ್ರಯೋಜನಗಳ ಆಮಿಷವೊಡ್ಡಿ  ಮೂಲಕ ಮಾಡುವ ಮೋಸದ ಧಾರ್ಮಿಕ ಮತಾಂತರವನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com