ಅಭಿವೃದ್ಧಿಗೆ ಮತ್ತೊಂದು ಹೆಸರು ಗಡ್ಕರಿ: ಕೇಂದ್ರ ಸಚಿವರನ್ನು ಹಾಡಿ ಹೊಗಳಿದ ತೇಜಸ್ವಿ ಯಾದವ್

ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಹಾಡಿ ಹೊಗಳಿದ್ದು, ಅಭಿವೃದ್ಧಿಗೆ ಮತ್ತೊಂದು ಹೆಸರು ಗಡ್ಕರಿ ಎಂದು ಸೋಮವಾರ ಹೇಳಿದ್ದಾರೆ.
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ಪಾಟ್ನಾ: ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಹಾಡಿ ಹೊಗಳಿದ್ದು, ಅಭಿವೃದ್ಧಿಗೆ ಮತ್ತೊಂದು ಹೆಸರು ಗಡ್ಕರಿ ಎಂದು ಸೋಮವಾರ ಹೇಳಿದ್ದಾರೆ.

ಇಂದು ರೋಹ್ತಾಸ್ ಜಿಲ್ಲೆಯ ಸೋನ್ ನದಿಯ ಪಾಂಡುಕಾ ಬಳಿ 1.5 ಕಿಲೋಮೀಟರ್ ಉದ್ದದ ದ್ವಿಪಥದ ಎಲಿವೇಟೆಡ್ ಆರ್‌ಸಿಸಿ ಸೇತುವೆಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗಡ್ಕರಿ, ರಾಜ್ಯದಲ್ಲಿ ರಸ್ತೆ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಾಯ ನೀಡುವುದಾಗಿ ಭರವಸೆ ನೀಡಿದರು.

"ನಾವು ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಗಣಿಸುವಾಗ ಅಭಿವೃದ್ಧಿ ಮತ್ತು ರಾಜಕೀಯವನ್ನು ಪ್ರತ್ಯೇಕವಾಗಿ ಇಡುತ್ತೇವೆ" ಎಂದು ಗಡ್ಕರಿ ಹೇಳಿದರು.

ಬಳಿಕ ಮಾತನಾಡಿದ ಬಿಹಾರದಲ್ಲಿ ರಸ್ತೆ ನಿರ್ಮಾಣ ಇಲಾಖೆಯ ಜವಾಬ್ದಾರಿ ಹೊತ್ತಿರುವ ತೇಜಸ್ವಿ ಯಾದವ್ ಅವರು, ಅಭಿವೃದ್ಧಿಗೆ ಮತ್ತೊಂದು ಹೆಸರು ಗಡ್ಕರಿ. ಅಭಿವೃದ್ಧಿ ವಿಚಾರದಲ್ಲಿ ಗಡ್ಕರಿ ಅವರು ರಾಜಕೀಯ ಸಂಬಂಧವನ್ನು ಪರಿಗಣಿಸುವುದಿಲ್ಲ ಎಂದರು.

“ಗಡ್ಕರಿ ಅವರು ಬಿಹಾರಕ್ಕೆ ಕೇಂದ್ರೀಯ ರಸ್ತೆ ನಿಧಿಯನ್ನು(CRF) 200 ಕೋಟಿ ಹೆಚ್ಚಿಸಿದ್ದಾರೆ. ಕೇಂದ್ರ ಸಚಿವರ ಅವಧಿಯಲ್ಲಿ 53 ಆರ್‌ಒಬಿಗಳ ನಿರ್ಮಾಣಕ್ಕೆ ಇದ್ದ ಅಡೆತಡೆಗಳನ್ನು ನಿವಾರಿಸಿದ್ದರಿಂದ ನಾನು ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದು ಬಿಹಾರ ಡಿಸಿಎಂ ಹೇಳಿದರು.

ಇದೇ ವೇಳೆ ಪೂರ್ವ ಎಕ್ಸ್‌ಪ್ರೆಸ್‌ವೇಯನ್ನು ಭಾಗಲ್ಪುರದವರೆಗೆ ವಿಸ್ತರಿಸಲು ಮತ್ತು ರಾಜ್ಯ ರಾಜಧಾನಿಯ ರಸ್ತೆ ದಟ್ಟಣೆಯನ್ನು ಕಡಿಮೆ ಮಾಡಲು ಕಚ್ಚಿ ದರ್ಗಾದಿಂದ ಏಮ್ಸ್‌ಗೆ ಎಲಿವೇಟೆಡ್ ರಸ್ತೆ ಯೋಜನೆಗೆ  ಅನುಮೋದನೆ ನೀಡುವಂತೆ ಗಡ್ಕರಿ ಅವರಿಗೆ ತೇಜಸ್ವಿ ಯಾದವ್ ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com