ಕೊಚ್ಚಿ ಪೊಲೀಸ್ ಠಾಣೆ
ಕೊಚ್ಚಿ ಪೊಲೀಸ್ ಠಾಣೆ

ಕೇರಳದ ಕೊಚ್ಚಿಯಲ್ಲಿ ಅಮಾನುಷ ಕ್ಯತ್ಯ: 19 ವರ್ಷದ ರೂಪದರ್ಶಿ ಮೇಲೆ ಯುವಕರಿಂದ ಸಾಮೂಹಿಕ ಅತ್ಯಾಚಾರ

ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಮತ್ತೊಂದು ನಡೆದಿದೆ. ಕೇರಳದ ಕೊಚ್ಚಿಯಲ್ಲಿ ಮೊನ್ನೆ ಗುರುವಾರ ರಾತ್ರಿ ಕಾರಿನೊಳಗೆ 19 ವರ್ಷದ ರೂಪದರ್ಶಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ.
Published on

ಕೊಚ್ಚಿ: ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಮತ್ತೊಂದು ನಡೆದಿದೆ. ಕೇರಳದ ಕೊಚ್ಚಿಯಲ್ಲಿ ಮೊನ್ನೆ ಗುರುವಾರ ರಾತ್ರಿ ಕಾರಿನೊಳಗೆ 19 ವರ್ಷದ ರೂಪದರ್ಶಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ.

ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೇರಳದ ಮೂವರು ಯುವಕರು ಮತ್ತು ರಾಜಸ್ಥಾನದ ಮಹಿಳೆಯೊಬ್ಬರನ್ನು ನಿನ್ನೆ ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಎರ್ನಾಕುಲಂ ದಕ್ಷಿಣ ಪೊಲೀಸರು ಮೂವರು ಪುರುಷರು, ಕೊಡುಂಗಲ್ಲೂರಿನ ಇಬ್ಬರು ಮತ್ತು ಎರ್ನಾಕುಲಂನ ಒಬ್ಬರನ್ನು ಮತ್ತು ಮಾಡೆಲಿಂಗ್‌ನಲ್ಲಿದ್ದ ರಾಜಸ್ಥಾನದ 21 ವರ್ಷದ ಯುವತಿಯನ್ನು ಬಂಧಿಸಿದ್ದಾರೆ. 

ನಡೆದ ಘಟನೆಯೇನು: ಕೊಚ್ಚಿ ಮೂಲದ 19 ವರ್ಷದ ಯುವತಿ ಗುರುವಾರ ರಾತ್ರಿ ಕ್ಲಬ್ ವೊಂದಕ್ಕೆ ಸ್ನೇಹಿತರ ಜೊತೆ ಹೋಗಿ ಪಬ್ ನಲ್ಲಿ ಡಿಜೆ ಪಾರ್ಟಿಗೆ ಹೋಗಿದ್ದರು. ಅಲ್ಲಿ ಯುವತಿ ವಿಪರೀತ ಕುಡಿದು ಕುಸಿದುಬಿದ್ದಿದ್ದಳು. ಆಕೆಯನ್ನು ಹೊತ್ತುಕೊಂಡು ಬಂದು ಕಾರಿನಲ್ಲಿ ಮಲಗಿಸಿ ಹೋಗುತ್ತಿರುವಾಗ ದಾರಿ ಮಧ್ಯೆ ಕಾರಿನೊಳಗೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. 

ಪಬ್ ನಲ್ಲಿ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಬಿದ್ದ ಯುವತಿಯನ್ನು ರಾತ್ರಿ 10 ಗಂಟೆ ಸುಮಾರಿಗೆ ಮೂವರು ಯುವಕರು ಅವಳನ್ನು ಆಕೆಯ ನಿವಾಸಕ್ಕೆ ಬಿಡಲು ಒಪ್ಪಿಕೊಂಡರು ಆದರೆ ಯುವತಿಯ ಸ್ನೇಹಿತ ಇವರ ಜೊತೆ ಕಾರಿನಲ್ಲಿ ಬಂದಿರಲಿಲ್ಲ.ಮಾರ್ಗ ಮಧ್ಯೆ ಯುವಕರು ಕಾರಿನೊಳಗೆ ಆಕೆಯ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಬಳಿಕ ಕಾಕ್ಕನಾಡ್‌ನಲ್ಲಿರುವ ವಸತಿಗೃಹದಲ್ಲಿ ಬಿಟ್ಟು ಹೋಗಿದ್ದಾರೆ. 

ಮರುದಿನ ಬೆಳಗ್ಗೆ ಸಂತ್ರಸ್ತೆಯ ಸ್ನೇಹಿತರು ನೀಡಿದ ದೂರಿನ ಮೇರೆಗೆ ಪೊಲೀಸರು ಆಕೆಯನ್ನು ಕಲಮಸ್ಸೆರ್ರಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ತಪಾಸಣೆಗೆ ಕರೆದುಕೊಂಡು ಹೋದರು. ಎರ್ನಾಕುಲಂ ದಕ್ಷಿಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಾಲ್ವರು ವಶಕ್ಕೆ: ಮಾಡೆಲ್ ಸ್ನೇಹಿತೆ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರ ಆಧಾರ ಮೇಲೆ ಮಹಿಳೆ ಸೇರಿದಂತೆ 4 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com