ತಾನೇ ವಿಮೆ ಮಾಡಿಸಿ, 10 ಲಕ್ಷ ರೂಪಾಯಿ ಇನ್ಶೂರೆನ್ಸ್ ಹಣಕ್ಕಾಗಿ ತಂದೆಯನ್ನು ಕೊಲ್ಲಲು ಹಂತಕರಿಗೆ ಸುಪಾರಿ ಕೊಟ್ಟ ಮಗ!

ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಆಕ್ಸಿಡೆಂಟಲ್ ವಿಮೆ ಹಣವನ್ನು ಪಡೆಯಲು ತನ್ನ ತಂದೆಯನ್ನೇ ಕೊಲೆ ಮಾಡಲು ಗುತ್ತಿಗೆ ಹಂತಕರನ್ನು ನೇಮಿಸಿಕೊಂಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬರ್ವಾನಿ: ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಆಕ್ಸಿಡೆಂಟಲ್ ವಿಮೆ ಹಣವನ್ನು ಪಡೆಯಲು ತನ್ನ ತಂದೆಯನ್ನೇ ಕೊಲೆ ಮಾಡಲು ಹಂತಕರಿಗೆ ಸುಪಾರಿ ಕೊಟ್ಟಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಆರೋಪಿಯು ನವೆಂಬರ್ 10 ರಂದು ಅಪರಿಚಿತ ವಾಹನ ಡಿಕ್ಕಿ ಹೊಡೆದು ತನ್ನ 52 ವರ್ಷದ ತಂದೆ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಸೆಂಧ್ವಾ ಪೊಲೀಸ್ ಠಾಣೆಗೆ ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ದೀಪಕ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ.

ಅಪಘಾತ ನಡೆದ ಸ್ಥಳವನ್ನು ಪರಿಶೀಲಿಸಿದ ಪೊಲೀಸರು ಇದೊಂದು ಕೊಲೆ ಎಂದು ತೀರ್ಮಾನಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸಂತ್ರಸ್ತರಿಗೆ ಡಿಕ್ಕಿ ಹೊಡೆದ ವಾಹನವು ಅದೇ ಸ್ಥಳದಲ್ಲಿ ಸುತ್ತುತ್ತಿರುವುದು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ರಾಜೇಶ್ ಯಾದವ್ ಹೇಳಿದ್ದಾರೆ.

ಸಂತ್ರಸ್ತ ಪ್ರತಿದಿನಿ ಬೆಳಗ್ಗೆ ವಾಕಿಂಗ್‌ಗೆ ಹೋಗುತ್ತಿದ್ದರು. ನವೆಂಬರ್ 10 ರಂದು ಆರೋಪಿಯು ತನ್ನ ತಂದೆ ವಾಕಿಂಗ್‌ಗೆ ಮನೆಯಿಂದ ಹೊರಟರು ಎಂದು ಹೇಳಲು ಗುತ್ತಿಗೆ ಕೊಲೆಗಾರನಿಗೆ ದೂರವಾಣಿ ಕರೆ ಮಾಡಿದ್ದಾನೆ ಎಂದು ಅವರು ಹೇಳಿದರು.

ತನಿಖೆಯ ನಂತರ, ಶಂಕಿತ ಕರಣ್ ಶಿಂಧೆಯನ್ನು ಪುಣೆಯಲ್ಲಿ ಬಂಧಿಸಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ, ಕೊಲೆಗೆ 2.5 ಲಕ್ಷ ರೂಪಾಯಿ ನೀಡುವುದಾಗಿ ಸಂತ್ರಸ್ತನ ಮಗ ಭರವಸೆ ನೀಡಿದ್ದಾನೆ ಎಂದು ಹೇಳಿದರು.

ಸಂತ್ರಸ್ತನ ಮಗ ತನ್ನ ತಂದೆಗೆ 10 ಲಕ್ಷ ರೂಪಾಯಿಯ ಆಕ್ಸಿಡೆಂಟಲ್ ವಿಮೆ ಮಾಡಿಸಿ ಕೊಲೆಗಾರನನ್ನು ನೇಮಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅಪರಾಧದಲ್ಲಿ ಭಾಗಿಯಾಗಿರುವ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com