ಜೈಲಿನಲ್ಲಿ ಸತ್ಯೇಂದರ್ ಜೈನ್'ಗೆ ಮಸಾಜ್: ಕೇಜ್ರಿವಾಲ್ ಮೌನ ಪ್ರಶ್ನಿಸಿ ಆಪ್ ಅನ್ನು 'ಸ್ಪಾ ಮತ್ತು ಮಸಾಜ್ ಪಾರ್ಟಿ' ಎಂದ ಬಿಜೆಪಿ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮೇ ತಿಂಗಳಲ್ಲಿ ಬಂಧಿತರಾಗಿರುವ ದಿಲ್ಲಿ ಸಚಿವ ಸತ್ಯೇಂದ್ರ ಜೈನ್ ಅವರು ದಿಲ್ಲಿಯ ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ಕುರಿತು ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮೇ ತಿಂಗಳಲ್ಲಿ ಬಂಧಿತರಾಗಿರುವ ದಿಲ್ಲಿ ಸಚಿವ ಸತ್ಯೇಂದ್ರ ಜೈನ್ ಅವರು ದಿಲ್ಲಿಯ ತಿಹಾರ್ ಜೈಲಿನಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋ ಕುರಿತು ಆಮ್ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ಪ್ರತಿಕ್ರಿಯೆ ನೀಡಿ, "ಆಮ್ ಆದ್ಮಿ ಪಕ್ಷ ಈಗ ಸ್ಪಾ ಮತ್ತು ಮಸಾಜ್ ಪಾರ್ಟಿಯಾಗಿ ಮಾರ್ಪಟ್ಟಿದೆ, ಸತ್ಯೇಂದ್ರ ಜೈನ್ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ಏಕೆ ನೀಡಲಾಗುತ್ತಿದೆ ಎಂಬುದನ್ನು ಅರವಿಂದ್ ಕೇಜ್ರಿವಾಲ್ ವಿವರಿಸಬೇಕು" ಎಂದು ಒತ್ತಾಯಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಈಗ ಎಲ್ಲಿ ಅಡಗಿದ್ದಾರೆ? ಮಸಾಜ್ ಮಾಡಿಸಿಕೊಳ್ಳುವುದು ಮತ್ತು ಜೈಲಿನಲ್ಲಿ ಬಹಳಷ್ಟು ಜನರನ್ನು ಭೇಟಿ ಮಾಡುವಂತಹ ಜೈಲು ನಿಯಮಗಳನ್ನು ಸತ್ಯೇಂದ್ರ ಜೈನ್ ಉಲ್ಲಂಘಿಸಿದ್ದಾರೆ. ಇಂತಹ ವಿಐಪಿ ಚಿಕಿತ್ಸೆ ಪ್ರಜಾಪ್ರಭುತ್ವಕ್ಕೆ ಕೆಟ್ಟದ್ದು, ಎಂದು ಹೇಳಿದರು.

ಪ್ರಸ್ತುತ ಬಿಡುಗಡೆಯಾಗಿರುವ ವಿಡಿಯೋದಲ್ಲಿ ಸತ್ಯೇಂದರ್ ಜೈನ್ ಅವರು ಮಸಾಜ್ ಮಾಡಿಸಿಕೊಳ್ಳುತ್ತಿದ್ದು, ಸಂದರ್ಶಕರನ್ನು ಭೇಟಿ ಮಾಡಿರುವುದು, ಕೆಲವರೊಂದಿಗೆ ಚರ್ಚೆಯಲ್ಲಿ ತೊಡಗಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈನ್ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ. ಸತ್ಯೇಂದರ್ ಜೈನ್ ಅವರು ಜೈಲು ಸೇರಿ 5 ತಿಂಗಳಾದರೂ ಕೇಜ್ರಿವಾಲ್ ಅವರು ಸತ್ಯೇಂದರ್ ಜೈನ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com