ಹರಿಯಾಣ ಜಿಲ್ಲಾ ಪರಿಷತ್ ಚುನಾವಣೆ: ಬಿಜೆಪಿ ಕಳಪೆ ಪ್ರದರ್ಶನ, ಎರಡನೇ ಸ್ಥಾನದಲ್ಲಿ ಎಎಪಿ

ಹರಿಯಾಣ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಕಳಪೆ ಪ್ರದರ್ಶನ ತೋರಿದ್ದು, ಸ್ಪರ್ಧಿಸಿದ್ದ 100 ಸ್ಥಾನಗಳ ಪೈಕಿ ಕೇವಲ 22ರಲ್ಲಿ ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇನ್ನು ಎಎಪಿ ಸ್ಪರ್ಧಿಸಿದ್ದ 100 ಸ್ಥಾನಗಳ ಪೈಕಿ 15...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಂಡಿಗಢ: ಹರಿಯಾಣ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಕಳಪೆ ಪ್ರದರ್ಶನ ತೋರಿದ್ದು, ಸ್ಪರ್ಧಿಸಿದ್ದ 100 ಸ್ಥಾನಗಳ ಪೈಕಿ ಕೇವಲ 22ರಲ್ಲಿ ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇನ್ನು ಎಎಪಿ ಸ್ಪರ್ಧಿಸಿದ್ದ 100 ಸ್ಥಾನಗಳ ಪೈಕಿ 15 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಎರಡನೇ ಸ್ಥಾನದಲ್ಲಿದೆ.

ಜಿಲ್ಲಾ ಪರಿಷತ್ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಭಾರತೀಯ ರಾಷ್ಟ್ರೀಯ ಲೋಕದಳ ಸ್ವಲ್ಪ ಲಾಭವನ್ನು ಗಳಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಮಿತ್ರ ಪಕ್ಷವಾದ ಜನನಾಯಕ ಜನತಾ ಪಾರ್ಟಿ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಚಿಹ್ನೆಯ ಮೇಲೆ ಸ್ಪರ್ಧಿಸಿರಲಿಲ್ಲ.

ಈ ಚುನಾವಣಾ ಫಲಿತಾಂಶವು 2024ರ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ರಾಜಕೀಯ ತಜ್ಞರ ಹೇಳಿದ್ದಾರೆ.

ಆದಾಗ್ಯೂ, ರಾಜ್ಯದ ಇತರ ಜಿಲ್ಲೆಗಳಲ್ಲಿ ನಡೆದ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ಕೇಸರಿ ಪಕ್ಷ ಹೇಳಿಕೊಂಡಿದೆ.

ಆದರೆ ಜಿಲ್ಲಾ ಪರಿಷತ್ ಚುನಾವಣಾ ಫಲಿತಾಂಶವು ಪಂಚಕುಲದಲ್ಲಿ ಬಿಜೆಪಿಗೆ ತೀವ್ರ ಆಘಾತ ನೀಡಿದ್ದು, ಅಲ್ಲಿ ಬಿಜೆಪಿ ಸ್ಪರ್ಧಿಸಿದ ಎಲ್ಲಾ 10 ಸ್ಥಾನಗಳಲ್ಲೂ ಸೋಲು ಅನುಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com