ಕೇರಳ: ಹಿಂಸಾಚಾರಕ್ಕೆ ತಿರುಗಿದ ಅದಾನಿ ಬಂದರು ವಿರುದ್ಧದ ಹೋರಾಟ, 25 ಪೊಲೀಸರಿಗೆ ಗಾಯ!

ಕೇರಳದಲ್ಲಿ ಅದಾನಿ ಬಂದರು ವಿರುದ್ಧದ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು 25 ಪೊಲೀಸರಿಗೆ ಗಾಯಗಳಾಗಿವೆ. 
ಪ್ರತಿಭಟನೆ ವೇಳೆ ಪೊಲೀಸ್ ವಾಹನಕ್ಕೆ ಹಾನಿ
ಪ್ರತಿಭಟನೆ ವೇಳೆ ಪೊಲೀಸ್ ವಾಹನಕ್ಕೆ ಹಾನಿ

ತಿರುವನಂತಪುರಂ: ಕೇರಳದಲ್ಲಿ ಅದಾನಿ ಬಂದರು ವಿರುದ್ಧದ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು 25 ಪೊಲೀಸರಿಗೆ ಗಾಯಗಳಾಗಿವೆ. 

ಕೇರಳದ ವಿಳಿಂಜಮ್ ನಲ್ಲಿ ಅದಾನಿ ಅಂತಾರಾಷ್ಟ್ರೀಯ ಬಂದರು ನಿರ್ಮಾಣದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆದಿದ್ದು, ಪ್ರತಿಭಟನಾ ನಿರತರು ತಮ್ಮವರ ಪೈಕಿ ಬಂಧನಕ್ಕೊಳಗಾದ 5 ಮಂದಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.

ಬಂದರು ಯೋಜನೆಯನ್ನು ವಿರೋಧಿಸಿ ಕಳೆದ ತಿಂಗಳುಗಳಿಂದ ಪ್ರತಿಭಟನೆ ನಡೆಯುತ್ತಿದೆ. ವಿಳಿಂಜಮ್ ನಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಬಂದರು ಕರಾವಳಿ ಪರಿಸರ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಲಿದೆ ಎಂಬುದು ಸ್ಥಳೀಯ ಪ್ರತಿಭಟನಾ ನಿರತರ ಆಕ್ಷೇಪವಾಗಿದೆ. ಭಾನುವಾರದಂದು ನಡೆದ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಒಂಬತ್ತು ಪ್ರಕರಣ ದಾಖಲಿಸಿದ್ದಾರೆ.

ನಿರ್ಮಾಣ ಹಂತದಲ್ಲಿರುವ ವಿಳಿಂಜಮ್ ಬಂದರಿನ ಮುಂದೆ ಶನಿವಾರ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೇರಳ ಹೈಕೋರ್ಟ್‌ಗೆ ನೀಡಿದ ಭರವಸೆಯನ್ನು ಮರೆತು ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಟ್ರಕ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com