ಶ್ರದ್ಧಾ ಹತ್ಯೆ: ದೇಹವನ್ನು ಕತ್ತರಿಸಲು ಅಫ್ತಾಬ್ ಬಳಸಿದ್ದ ಆಯುಧ, ಸಂತ್ರಸ್ತೆಯ ಉಂಗುರ ವಶಪಡಿಸಿಕೊಂಡ ಪೊಲೀಸರು

ಅಫ್ತಾಬ್ ಅಮೀನ್ ಪೂನಾವಾಲಾ ತನ್ನ ಲಿವ್ ಇನ್ ಪಾರ್ಟ್ನರ್ ಶ್ರದ್ಧಾ ವಾಕರ್ ಅವರ ದೇಹವನ್ನು ಕತ್ತರಿಸಲು ಬಳಸಿದ ಆಯುಧವನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
ಶ್ರದ್ಧಾ ವಾಲ್ಕರ್
ಶ್ರದ್ಧಾ ವಾಲ್ಕರ್

ನವದೆಹಲಿ: ಅಫ್ತಾಬ್ ಅಮೀನ್ ಪೂನಾವಾಲಾ ತನ್ನ ಲಿವ್ ಇನ್ ಪಾರ್ಟ್ನರ್ ಶ್ರದ್ಧಾ ವಾಲ್ಕರ್ ಅವರ ದೇಹವನ್ನು ಕತ್ತರಿಸಲು ಬಳಸಿದ ಆಯುಧವನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ಪೂನಾವಾಲಾ ಇನ್ನೊಬ್ಬ ಮಹಿಳೆಗೆ ನೀಡಿದ್ದ ಎನ್ನಲಾದ 27 ವರ್ಷದ ವಾಲ್ಕರ್‌ಗೆ ಸೇರಿದ ಉಂಗುರವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಪೂನಾವಾಲಾ ಅವರ ಸುಳ್ಳು ಪತ್ತೆ ಪರೀಕ್ಷೆಯು ಸದ್ಯ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ಪೂನಾವಾಲಾ ಶ್ರದ್ಧಾರನ್ನು ಕತ್ತು ಹಿಸುಕಿ ಕೊಂದಿದ್ದ. ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ 300 ಲೀಟರ್ ಸಾಮರ್ಥ್ಯದ ಫ್ರಿಡ್ಜ್‌ನಲ್ಲಿ ಇರಿಸಿದ್ದ. ಹಲವಾರು ದಿನಗಳ ಕಾಲ ನಗರದಾದ್ಯಂತ ದೇಹದ ಭಾಗಗಳನ್ನು ಎಸೆದಿದ್ದಾನೆ.

ನವೆಂಬರ್ 12 ರಂದು ಆತನನ್ನು ಬಂಧಿಸಲಾಯಿತು ಮತ್ತು ಐದು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು. ಅದನ್ನು ನವೆಂಬರ್ 17 ರಂದು ಐದು ದಿನಗಳವರೆಗೆ ವಿಸ್ತರಿಸಲಾಯಿತು. ನವೆಂಬರ್ 22 ರಂದು ಆತನನ್ನು ಇನ್ನೂ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು.

ನವೆಂಬರ್ 26 ರಂದು ನ್ಯಾಯಾಲಯವು ಆತನನ್ನು 13 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ವಾಕರ್ ಅವರ ತಲೆಬುರುಡೆ ಮತ್ತು ದೇಹದ ಇತರ ಕೆಲವು ಭಾಗಗಳು ಪೊಲೀಸರಿಗೆ ಸಿಕ್ಕಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com