ಪಂಜಾಬಿ ಗಾಯಕ ಅಲ್ಫಾಜ್
ಪಂಜಾಬಿ ಗಾಯಕ ಅಲ್ಫಾಜ್

ಮೊಹಾಲಿಯಲ್ಲಿ ಪಂಜಾಬಿ ಗಾಯಕ ಅಲ್ಫಾಜ್ ಮೇಲೆ ದಾಳಿ; ಆಸ್ಪತ್ರೆಗೆ ದಾಖಲು

ಪಂಜಾಬಿ ಗಾಯಕ ಅಲ್ಫಾಜ್ ಅಕಾ ಅಮಾನ್‌ಜೋತ್ ಸಿಂಗ್ ಪನ್ವಾರ್ ಅವರಿಗೆ ಮೊಹಾಲಿಯ ಸ್ಥಳೀಯ ಡಾಬಾದಲ್ಲಿ ಶನಿವಾರ ವಾಹನ ಡಿಕ್ಕಿ ಹೊಡೆದಿದ್ದರಿಂದ ಗಾಯಗಳಾಗಿದ್ದು, ಮೊಹಾಲಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಮೊಹಾಲಿ: ಪಂಜಾಬಿ ಗಾಯಕ ಅಲ್ಫಾಜ್ ಅಕಾ ಅಮಾನ್‌ಜೋತ್ ಸಿಂಗ್ ಪನ್ವಾರ್ ಅವರಿಗೆ ಮೊಹಾಲಿಯ ಸ್ಥಳೀಯ ಡಾಬಾದಲ್ಲಿ ಶನಿವಾರ ವಾಹನ ಡಿಕ್ಕಿ ಹೊಡೆದಿದ್ದರಿಂದ ಗಾಯಗಳಾಗಿದ್ದು, ಮೊಹಾಲಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಸಹ ಪಂಜಾಬಿ ಗಾಯಕ ಹನಿ ಸಿಂಗ್ ರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಅಲ್ಫಾಜ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ‘ಯಾರ್ ಬತೇರೆ’ ಗಾಯಕ ತನ್ನ ಮೂವರು ಸ್ನೇಹಿತರೊಂದಿಗೆ ಪಲ್ ಡಾಬಾದಲ್ಲಿ ಉಪಹಾರ ಸೇವಿಸಿ ತೆರಳುತ್ತಿದ್ದಾಗ, ಡಾಬಾದ ಮಾಜಿ ಉದ್ಯೋಗಿ ವಿಕ್ಕಿ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ.

ಡಾಬಾ ಮಾಲೀಕರು ತನ್ನ ಬಾಕಿಯನ್ನು ಇತ್ಯರ್ಥಪಡಿಸಲು ಮಧ್ಯಸ್ಥಿಕೆ ವಹಿಸುವಂತೆ ಗಾಯಕ ಅಲ್ಫಾಜ್ ಅವರಿಗೆ ವಿಕ್ಕಿ ವಿನಂತಿಸಿದ್ದಾರೆ. ಈ ವೇಳೆ ಗಾಯಕ ಮಧ್ಯಪ್ರವೇಶಿಸಲು ನಿರಾಕರಿಸಿದಾಗ ವಿಕ್ಕಿ ಮಾಲೀಕರ ಟೆಂಪೋದೊಂದಿಗೆ ಓಡಿಹೋಗಲು ಪ್ರಯತ್ನಿಸಿದ. ಈ ವೇಳೆ ವಾಹನವನ್ನು ರಿವರ್ಸ್ ತೆಗೆದುಕೊಳ್ಳುವಾಗ ಗಾಯಕ ಅಲ್ಫಾಜ್ ಗೆ ಡಿಕ್ಕಿ ಹೊಡೆಸಿದ್ದಾನೆ. ಘಟನೆಯಲ್ಲಿ ಗಾಯಕನ ತಲೆ, ತೋಳುಗಳು ಮತ್ತು ಕಾಲುಗಳ ಮೇಲೆ ಹಲವಾರು ಗಾಯಗಳಾಗಿದ್ದು, ಅವರನ್ನು ಸ್ನೇಹಿತರು ಆಸ್ಪತ್ರೆಗೆ ಸಾಗಿಸಿದ್ದಾರೆ.

ವಿಕ್ಕಿ ಆ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರೂ ನಂತರ ಮೊಹಾಲಿ ಪೊಲೀಸರು ಬಂಧಿಸಿದ್ದಾರೆ. ನಂತರ ಪೊಲೀಸರು ಸೋಹ್ನಾ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪಂಜಾಬಿ ಗಾಯಕ ಅಲ್ಫಾಜ್ ಅವರು ‘ಪುಟ್ ಜಟ್ ದ’, ‘ರಿಕ್ಷಾ’, ‘ಗಡ್ಡಿ’ ಮತ್ತು ಇನ್ನೂ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಹೆಸರುವಾಸಿಯಾಗಿದ್ದಾರೆ. ‘ಹಯೇ ಮೇರಾ ದಿಲ್’, ‘ಬೆಬೋ’, ‘ಬರ್ತ್‌ಡೇ ಬ್ಯಾಷ್’ ಮತ್ತು ‘ಯಾರ್ ಬತೇರೆ’ ನಂತಹ ಚಾರ್ಟ್‌ಬಸ್ಟರ್ ಟ್ರ್ಯಾಕ್‌ಗಳಿಗಾಗಿ ಗಾಯಕ ಹನಿ ಸಿಂಗ್‌ರೊಂದಿಗೆ ಹಾಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com