ಗುಜರಾತಿನ ಹಲವು ಬಿಜೆಪಿ ನಾಯಕರು ರಹಸ್ಯವಾಗಿ ಎಎಪಿ ಬೆಂಬಲಿಸುತ್ತಿದ್ದಾರೆ: ಕೇಜ್ರಿವಾಲ್

ಗುಜರಾತ್‌ನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ(ಬಿಜೆಪಿ) ಹಲವು ನಾಯಕರು ಮತ್ತು ಕಾರ್ಯಕರ್ತರು ತಮ್ಮ ಆಮ್ ಆದ್ಮಿ ಪಕ್ಷವನ್ನು(ಎಎಪಿ) ರಹಸ್ಯವಾಗಿ ಬೆಂಬಲಿಸುತ್ತಿದ್ದಾರೆ ಮತ್ತು ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ...
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್

ಧರಂಪುರ: ಗುಜರಾತ್‌ನಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ(ಬಿಜೆಪಿ) ಹಲವು ನಾಯಕರು ಮತ್ತು ಕಾರ್ಯಕರ್ತರು ತಮ್ಮ ಆಮ್ ಆದ್ಮಿ ಪಕ್ಷವನ್ನು(ಎಎಪಿ) ರಹಸ್ಯವಾಗಿ ಬೆಂಬಲಿಸುತ್ತಿದ್ದಾರೆ ಮತ್ತು ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಪಕ್ಷದ ಸೋಲನ್ನು ನೋಡಲು ಬಯಸುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ಹೇಳಿದ್ದಾರೆ. .

ಶನಿವಾರ ಗುಜರಾತ್‌ನ ಹಲವಾರು ನಗರಗಳಲ್ಲಿ ತಮ್ಮ ವಿರುದ್ಧದ ಹಿಂದೂ ವಿರೋಧಿ ಪೋಸ್ಟರ್‌ಗಳಿಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಸಿಎಂ, ಪೋಸ್ಟರ್‌ಗಳ ಹಿಂದೆ ಇರುವವರು "ರಾಕ್ಷಸರು ಮತ್ತು ಕಾನ್‌ಗಳ ವಂಶಸ್ಥರು" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಹಲವು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನನ್ನನ್ನು ಭೇಟಿಯಾಗಿ ಆಡಳಿತ ಪಕ್ಷವನ್ನು ಸೋಲಿಸಲು ಏನಾದರೂ ಮಾಡುವಂತೆ ರಹಸ್ಯವಾಗಿ ಕೇಳುತ್ತಿದ್ದಾರೆ. ಬಿಜೆಪಿಯನ್ನು ಸೋಲಿಸಲು ಬಯಸುವ ಎಲ್ಲಾ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರಿಗೆ ಎಎಪಿಗಾಗಿ ರಹಸ್ಯವಾಗಿ ಕೆಲಸ ಮಾಡುವಂತೆ ಹೇಳಲು ಬಯಸುತ್ತೇನೆ" ಎಂದು ಆಪ್ ರಾಷ್ಟ್ರೀಯ ಸಂಚಾಲಕ ಹೇಳಿದ್ದಾರೆ.

“ನಾವು ಅವರ(ಬಿಜೆಪಿ) 27 ವರ್ಷಗಳ ದುರಹಂಕಾರವನ್ನು ಮುರಿಯಬೇಕಾಗಿದೆ. ನೀವು ನಮ್ಮೊಂದಿಗೆ ಸೇರಿಕೊಂಡರೆ ಅವರು ನಿಮ್ಮ ವ್ಯವಹಾರವನ್ನು ಹಾಳು ಮಾಡುತ್ತಾರೆ. ಹೀಗಾಗಿ ನೀವು ಅಲ್ಲೇ ಇರಿ. ಆದರೆ ಬಿಜೆಪಿ ಸೋಲಿಸಲು ರಹಸ್ಯವಾಗಿ ಕೆಲಸ ಮಾಡಿ. ಕಾಂಗ್ರೆಸ್ ಕಾರ್ಯಕರ್ತರು ಭಯಪಡುವ ಅಗತ್ಯವಿಲ್ಲ, ನೀವು ಮಾಡಬಹುದು. ನಿಮ್ಮ ಪಕ್ಷವನ್ನು ಬಿಟ್ಟು ಎಎಪಿ ಸೇರಿಕೊಳ್ಳಿ, ನಿಮ್ಮ ಪಕ್ಷವನ್ನು ಮರೆತುಬಿಡಿ ಎಂದು ಕೇಜ್ರಿವಾಲ್ ಕರೆ ನೀಡಿದ್ದಾರೆ.

ರಾಕ್ಷಸರನ್ನು ತೊಡೆದುಹಾಕಲು ಮುಂಬರುವ ಚುನಾವಣೆಯಲ್ಲಿ ಎಎಪಿಯನ್ನು ಬೆಂಬಲಿಸುವಂತೆ ಮತದಾರರಿಗೆ ಮನವಿ ಮಾಡಿದ ಕೇಜ್ರಿವಾಲ್, ಹೊಸ ಗುಜರಾತ್‌ಗಾಗಿ ಎಲ್ಲರೂ ಒಂದಾಗಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com