ಅಕ್ಟೋಬರ್ 25ಕ್ಕೆ ವರ್ಷದ ಕೊನೆಯ ಸೂರ್ಯ ಗ್ರಹಣ; ಭಾರತದಲ್ಲಿ ಎಲ್ಲೆಲ್ಲಿ ಗೋಚರಿಸುತ್ತದೆ?

ಇದೇ ಅಕ್ಟೋಬರ್ 25ರಂದು ವರ್ಷದ ಕೊನೆಯ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದ್ದು ದೀಪಾವಳಿಯಂದೇ ಈ ಸೂರ್ಯಗ್ರಹಣ ಗೋಚರಿಸಲಿದೆ. 
ಸೂರ್ಯ ಗ್ರಹಣ
ಸೂರ್ಯ ಗ್ರಹಣ

ಇದೇ ಅಕ್ಟೋಬರ್ 25ರಂದು ವರ್ಷದ ಕೊನೆಯ ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದ್ದು ದೀಪಾವಳಿಯಂದೇ ಈ ಸೂರ್ಯಗ್ರಹಣ ಗೋಚರಿಸಲಿದೆ. 

ಅ. 25ರಂದು ಸಂಜೆ 4.29ಕ್ಕೆ ಆರಂಭವಾಗಿ ಸಂಜೆ 5.42ಕ್ಕೆ ಸೂರ್ಯಗ್ರಹಣ ಕೊನೆಗೊಳ್ಳಲಿದ್ದು ಭಾರತದ ಬಹುತೇಕ ಪ್ರದೇಶಗಳಲ್ಲಿ ಗೋಚರಿಸಲಿದೆ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ ಯುರೋಪ್, ಪಶ್ಚಿಮ ಸೈಬೀರಿಯಾ, ಮಧ್ಯ ಏಷ್ಯಾ, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದ ಈಶಾನ್ಯ ಭಾಗದಲ್ಲಿ ಗೋಚರಿಸುತ್ತದೆ.

ಈ ಭಾಗಶಃ ಸೂರ್ಯಗ್ರಹಣವು ದೆಹಲಿಯಲ್ಲಿ ಗೋಚರಿಸುತ್ತದೆ. ಭಾಗಶಃ ಸೂರ್ಯಗ್ರಹಣವನ್ನು ಆಂಶಿಕ್ ಸೂರ್ಯ ಗ್ರಹಣ ಎಂದೂ ಕರೆಯುತ್ತಾರೆ. ಸಂಪೂರ್ಣ ಗ್ರಹಣವಾದಾಗ ಚಂದ್ರನು ಸೂರ್ಯಗೆ ಸಂಪೂರ್ಣವಾಗಿ ಅಡ್ಡ ನಿಂತಿರುತ್ತಾನೆ. ಆದರೆ, ಭಾಗಶಃ ಗ್ರಹಣಗಳಲ್ಲಿ ಸೂರ್ಯನ ಒಂದು ಭಾಗ ಮಾತ್ರ ಅಸ್ಪಷ್ಟಗೊಳಿಸಲಾಗುತ್ತದೆ.

ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಸೂತಕದ ಅವಧಿಯು ಪ್ರಾರಂಭವಾಗುತ್ತದೆ. ಗ್ರಹಣ ಮುಗಿದ ನಂತರ ಸೂತಕ ಕೊನೆಗೊಳ್ಳುತ್ತದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂತಕದ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಇನ್ನು ವಿಶೇಷವಾಗಿ ಗರ್ಭಿಣಿಯರು ಈ ಸಮಯದಲ್ಲಿ ಹೊರಗೆ ಬರಬಾರದು. ಅಲ್ಲದೆ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕಾರಣ ಅವರ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಮೇಲೂ ಇದರ ಪರಿಣಾಮ ಬೀರುತ್ತದೆ. 

ಸೂರ್ಯಗ್ರಹಣ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು?
ಯಾವುದೇ ಗ್ರಹಣದ ಸಮಯದಲ್ಲಿ ಭಾರತದಲ್ಲಿ ಜನರು ಸಾಮಾನ್ಯವಾಗಿ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಅಲ್ಲದೆ, ಗ್ರಹಣದ ದುಷ್ಪರಿಣಾಮಗಳನ್ನು ತಡೆಗಟ್ಟಲು ದರ್ಭೆ ಹುಲ್ಲು ಅಥವಾ ತುಳಸಿ ಎಲೆಗಳನ್ನು ಶೇಖರಿಸಿಟ್ಟಿರುವ ನೀರಿನಲ್ಲಿ ಹಾಕಲಾಗುತ್ತದೆ. ಗ್ರಹಣದ ನಂತರ ಸ್ನಾನ ಮಾಡಿ ಹೊಸ ಬಟ್ಟೆ ತೊಡುತ್ತಾರೆ. ನಂತರ ದೇವರಿಗೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com