
ಹಸಿವು ಸೂಚ್ಯಂಕ
ನವದೆಹಲಿ: 2022 ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ಪ್ರಕಟವಾಗಿದ್ದು, 121 ದೇಶಗಳ ಪೈಕಿ ಭಾರತ 107 ನೇ ಸ್ಥಾನದಲ್ಲಿದೆ. ಭಾರತದಲ್ಲಿ ಮಕ್ಕಳಲ್ಲಿನ ಅಪೌಷ್ಟಿಕತೆ ಪ್ರಮಾಣ ಶೇ.19.3 ರಷ್ಟಿದ್ದು, ಇದು ಜಗತ್ತಿನಲ್ಲೇ ಅತಿ ಹೆಚ್ಚಿನ ಅಪೌಷ್ಟಿಕತೆಯ ಪ್ರಮಾಣವಾಗಿದೆ.
ಗ್ಲೋಬಲ್ ಹಂಗರ್ ಇಂಡೆಕ್ಸ್ (ಜಿಹೆಚ್ಐ) ನಲ್ಲಿ ಭಾರತಕ್ಕೆ ಶೇ.29.1 ಸ್ಕೋರ್ ನೀಡಲಾಗಿದ್ದು, ಇದು ಅತ್ಯಂತ ಗಂಭೀರವಾದ ಮಟ್ಟ ಎಂದು ಗುರುತಿಸಲಾಗಿದೆ.
![]() |
ಸಂಪನ್ಮೂಲಗಳನ್ನ ಗುಡಿಸಿ ಗುಂಡಾಂತರ ಮಾಡಿ ಬೆಳ್ಳಿ ತಟ್ಟೆಯಲ್ಲಿ ಭೋಜನ ಸವಿಯುವವರಿಗೆ, ಹಸಿವು ಸೂಚ್ಯಂಕದಲ್ಲಿ 117ನೇ ಸ್ಥಾನಕ್ಕೆ ಕುಸಿದಿರೋದು ಕಾಣುತ್ತಾ? |
ಏಷ್ಯಾದಲ್ಲಿ ಭಾರತಕ್ಕಿಂತಲೂ ಹಿಂದಿರುವ ರಾಷ್ಟ್ರವೆಂದರೆ ಅದು ಅಫ್ಘಾನಿಸ್ತಾನವಾಗಿದ್ದು 109 ನೇ ಸ್ಥಾನದಲ್ಲಿದೆ. ನೆರೆ ರಾಷ್ಟ್ರಗಳಾದ ಪಾಕಿಸ್ತಾನ (99) ಬಾಂಗ್ಲಾದೇಶ (84) ನೇಪಾಳ (81) ಶ್ರೀಲಂಕಾ (64) ಭಾರತಕ್ಕಿಂತಲೂ ಉತ್ತಮ ಸ್ಥಾನದಲ್ಲಿವೆ. 2021 ರಲ್ಲಿ ಭಾರತ 116 ರಾಷ್ಟ್ರಗಳ ಪೈಕಿ 101 ನೇ ಸ್ಥಾನದಲ್ಲಿತ್ತು, ಇದಕ್ಕೂ ಹಿಂದಿನ ವರ್ಷ 94 ನೇ ಸ್ಥಾನದಲ್ಲಿತ್ತು.
ಹಸಿವಿನ ಸೂಚ್ಯಂಕ ಹೆಚ್ಚಾಗಿರುವ ದಕ್ಷಿಣ ಏಷ್ಯಾ ಪ್ರದೇಶ ಮಕ್ಕಳಲ್ಲಿ ಜಗತ್ತಿನಲ್ಲೆ ಅತಿ ಹೆಚ್ಚು ಅಪೌಷ್ಟಿಕತೆಯನ್ನು ಹೊಂದಿರುವ ಪ್ರದೇಶವೂ ಆಗಿದೆ. ಭಾರತದಲ್ಲಿನ ಮಕ್ಕಳ ಅಪೌಷ್ಟಿಕತೆ ಪ್ರಮಾಣ ಶೇ.19.3 ರಷ್ಟಿದ್ದು, ಮಕ್ಕಳಲ್ಲಿ ಅತಿ ಹೆಚ್ಚು ಅಪೌಷ್ಟಿಕತೆಯನ್ನು ಹೊಂದಿರುವ ದೇಶವಾಗಿದೆ ಎಂದು ಸೂಚ್ಯಂಕದ ವರದಿ ಮೂಲಕ ತಿಳಿದುಬಂದಿದೆ.