ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ಪೊಲೀಸರಿಗೆ 'ಒಂದು ರಾಷ್ಟ್ರ, ಒಂದು ಸಮವಸ್ತ್ರ' ನೀತಿಯನ್ನು ತಂದರೆ ಉತ್ತಮ: ಪ್ರಧಾನಿ ನರೇಂದ್ರ ಮೋದಿ

'ಒಂದು ರಾಷ್ಟ್ರ, ಒಂದು ಚುನಾವಣೆ' ನಡೆಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಹಳ ಒಲವು ಹೊಂದಿದ್ದಾರೆ. ಅದಿನ್ನೂ ಜಾರಿಗೆ ಬಂದಿಲ್ಲ. ಈ ಮಧ್ಯೆ, ಪೊಲೀಸರಿಗೆ ‘ಒಂದು ರಾಷ್ಟ್ರ, ಒಂದು ಸಮವಸ್ತ್ರ’ ಕಲ್ಪನೆಯನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ.
Published on

ಸೂರಜ್‌ಕುಂಡ್ (ಹರಿಯಾಣ): 'ಒಂದು ರಾಷ್ಟ್ರ, ಒಂದು ಚುನಾವಣೆ' ನಡೆಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಹಳ ಒಲವು ಹೊಂದಿದ್ದಾರೆ. ಅದಿನ್ನೂ ಜಾರಿಗೆ ಬಂದಿಲ್ಲ. ಈ ಮಧ್ಯೆ, ಪೊಲೀಸರಿಗೆ ‘ಒಂದು ರಾಷ್ಟ್ರ, ಒಂದು ಸಮವಸ್ತ್ರ’ ಕಲ್ಪನೆಯನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಆದರೆ ಇದು ಕೇವಲ ತಮ್ಮ ಸಲಹೆಯಾಗಿದ್ದು, ಅದನ್ನು ರಾಜ್ಯಗಳ ಮೇಲೆ ಹೇರಲು ಬಯಸುವುದಿಲ್ಲ ಎಂದಿದ್ದಾರೆ. 

ರಾಜ್ಯ ಗೃಹ ಮಂತ್ರಿಗಳ "ಚಿಂತನ್ ಶಿಬಿರ" ವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಅಪರಾಧಗಳು ಮತ್ತು ಅಪರಾಧಿಗಳನ್ನು ನಿಭಾಯಿಸಲು ರಾಜ್ಯಗಳ ನಡುವೆ ನಿಕಟ ಸಹಕಾರದ ಅಗತ್ಯವನ್ನು ಒತ್ತಿ ಹೇಳಿದರು. ಸಹಕಾರಿ ಒಕ್ಕೂಟವು ಸಂವಿಧಾನದ ಭಾವನೆ ಮಾತ್ರವಲ್ಲದೆ ರಾಜ್ಯಗಳು ಮತ್ತು ಕೇಂದ್ರದ ಜವಾಬ್ದಾರಿಯಾಗಿದೆ ಎಂದು ಹೇಳಿದರು. 

ಪೊಲೀಸರಿಗೆ 'ಒಂದು ರಾಷ್ಟ್ರ, ಒಂದು ಸಮವಸ್ತ್ರ'ವು ಕೇವಲ ಆಲೋಚನೆಯಾಗಿದೆ. ಅದನ್ನು ನಾನು ರಾಜ್ಯಗಳ ಮೇಲೆ ಹೇರುವುದಿಲ್ಲ, ಆಲೋಚನೆ ಮಾಡಿ ಮನಸ್ಸು ಮಾಡಿದರೆ ಜಾರಿಗೆ ತರಬಹುದು. ಇದು 5, 50, ಅಥವಾ 100 ವರ್ಷಗಳಲ್ಲಿ ಆಗಬಹುದು. ಸ್ವಲ್ಪ ಯೋಚಿಸಿ ಎಂದಷ್ಟೇ ಹೇಳಿದರು.

ದೇಶದಾದ್ಯಂತ ಪೊಲೀಸರ ಗುರುತು ಒಂದೇ ಆಗಿದ್ದರೆ ಚೆನ್ನಾಗಿರುತ್ತದೆ ಎಂದು ನಾನು ಆಶಿಸುತ್ತೇನೆ ಎಂದರು. ಕಾನೂನು ಮತ್ತು ಸುವ್ಯವಸ್ಥೆ ಮತ್ತು ಭದ್ರತೆಯ ಹಲವು ಸವಾಲುಗಳನ್ನು ಎದುರಿಸಲು ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ಏಜೆನ್ಸಿಗಳು ಸಂಘಟಿತ ಕ್ರಮ ಕೈಗೊಳ್ಳಬೇಕು. ಹಳೆಯ ಕಾನೂನುಗಳನ್ನು ಪರಿಶೀಲಿಸಬೇಕು ಮತ್ತು ಪ್ರಸ್ತುತ ಸಂದರ್ಭಕ್ಕೆ ತಿದ್ದುಪಡಿ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.

ಪೊಲೀಸರ ಬಗ್ಗೆ ಉತ್ತಮ ಗ್ರಹಿಕೆಯನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ ಇಲ್ಲಿನ ತಪ್ಪು, ಲೋಪದೋಷಗಳನ್ನು ಗಮನಿಸಿ ಪರಿಹರಿಸಬೇಕು. ದಕ್ಷತೆ, ಉತ್ತಮ ಫಲಿತಾಂಶ ಮತ್ತು ಸಾಮಾನ್ಯ ಜನರಿಗೆ ರಕ್ಷಣೆಯನ್ನು ನೀಡಲು ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ಪರಸ್ಪರ ಸಹಕರಿಸಬೇಕು ಎಂದು ಸಹ ಪ್ರತಿಪಾದಿಸಿದರು. 

ಪೊಲೀಸ್ ಇಲಾಖೆಯನ್ನು ಬಲಪಡಿಸಲು, ಉತ್ತಮ ಫಲಿತಾಂಶವನ್ನು ತರಲು ಪೊಲೀಸ್ ಮತ್ತು ಭದ್ರತಾ ಏಜೆನ್ಸಿಗಳಿಂದ ಮಾನವ ಬುದ್ಧಿಮತ್ತೆಯನ್ನು (Human intelligence) ಉತ್ಪಾದಿಸುವ ಹಳೆಯ ಉತ್ತಮ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಕೂಡ ಪ್ರಧಾನಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com