ಬುಡಕಟ್ಟು ಮಹಿಳೆಯರೊಂದಿಗೆ ರಾಹುಲ್ ಡ್ಯಾನ್ಸ್
ದೇಶ
ತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆ: ಬುಡಕಟ್ಟು ಮಹಿಳೆಯರೊಂದಿಗೆ ರಾಹುಲ್ ಡ್ಯಾನ್ಸ್! ವಿಡಿಯೋ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಗೆ ನೆರೆಯ ತೆಲಂಗಾಣದಲ್ಲೂ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಇಂದು ಧರ್ಮಪುರ್ ನಿಂದ ಯಾತ್ರೆ ಪುನರ್ ಆರಂಭವಾದ ಕೆಲ ತಾಸುಗಳ ಬಳಿಕ ರಾಹುಲ್ ಗಾಂಧಿ ಆದಿವಾಸಿ ಸಮುದಾಯದ ಸಾಂಪ್ರದಾಯಿಕ ಡ್ಯಾನ್ಸ್ ಮಾಡಿದ್ದಾರೆ.
ಧರ್ಮಪುರ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಗೆ ನೆರೆಯ ತೆಲಂಗಾಣದಲ್ಲೂ ಭಾರೀ ಜನಬೆಂಬಲ ವ್ಯಕ್ತವಾಗುತ್ತಿದೆ. ಇಂದು ಧರ್ಮಪುರ್ ನಿಂದ ಯಾತ್ರೆ ಪುನರ್ ಆರಂಭವಾದ ಕೆಲ ತಾಸುಗಳ ಬಳಿಕ ರಾಹುಲ್ ಗಾಂಧಿ ಆದಿವಾಸಿ ಸಮುದಾಯದ ಸಾಂಪ್ರದಾಯಿಕ ಡ್ಯಾನ್ಸ್ ಮಾಡಿದ್ದಾರೆ.
ತೆಲಂಗಾಣದ ಭದ್ರಚಾಲಂನ ಬುಡಕಟ್ಟು ಮಹಿಳೆಯರೊಂದಿಗೆ 'ಕೊಮ್ಮು ಕೊಯಾ' ಎಂಬ ನೃತ್ಯಕ್ಕೆ ರಾಹುಲ್ ಗಾಂಧಿ ಹೆಜ್ಜೆ ಹಾಕಿದರು. ಇವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮತ್ತಿತರ ಕಾಂಗ್ರೆಸ್ ಮುಖಂಡರು ಕೂಡಾ ಡ್ಯಾನ್ಸ್ ಮಾಡಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನಂತರ ಮಾರ್ಷಲ್ ಆರ್ಟ್ಸ್ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ