ಸಿ-295 ಸಾರಿಗೆ ವಿಮಾನ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ಗುಜರಾತ್ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ವಡೋದರಾದಲ್ಲಿ ಸಿ-295 ಸಾರಿಗೆ ವಿಮಾನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ವಡೋದರಾದಲ್ಲಿ ಪ್ರಧಾನಿ ಮೋದಿ.
ವಡೋದರಾದಲ್ಲಿ ಪ್ರಧಾನಿ ಮೋದಿ.

ವಡೋದರಾ (ಗುಜರಾತ್): ಗುಜರಾತ್ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ವಡೋದರಾದಲ್ಲಿ ಸಿ-295 ಸಾರಿಗೆ ವಿಮಾನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಸ್ಮರಣಿಕೆ ನೀಡಿ ಗೌರವಿಸಿದರು.

ಭಾರತೀಯ ವಾಯುಪಡೆಗಾಗಿ ಟಾಟಾ-ಏರ್‌ಬಸ್ ಸಿ-295 ಸಾರಿಗೆ ವಿಮಾನವನ್ನು ತಯಾರಿಸಲಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, 'ಇಂದು ದೇಶದಲ್ಲೇ ಪ್ರಥಮ ಬಾರಿಗೆ ಖಾಸಗಿ ವಲಯದಿಂದ ವಿಮಾನ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದ್ದು, ರಕ್ಷಣಾ ಕ್ಷೇತ್ರಕ್ಕೆ ಇಡೀ ದೇಶಕ್ಕೆ ಇದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.

"ಇದು ಕೇವಲ ಅಡಿಪಾಯವಲ್ಲ. ರಕ್ಷಣಾ ವಲಯದ 'ಆತ್ಮನಿರ್ಭರ್ತ' ಪ್ರಯಾಣದಲ್ಲಿ ಒಂದು ಮೈಲಿಗಲ್ಲಾಗಿದೆ. ಈ ಸೌಲಭ್ಯದಲ್ಲಿ ತಯಾರಿಸಲಾದ ಸಿ-295 ವಿಮಾನವು ಉನ್ನತ ಸಾಮರ್ಥ್ಯ ಮತ್ತು ಜಾಗತಿಕ ಗುಣಮಟ್ಟವನ್ನು ಹೊಂದಿರುವ ಅತ್ಯಾಧುನಿಕ ವಿಮಾನವಾಗಿದೆ. ಇದು ಭಾರತೀಯ ವಾಯುಪಡೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು. 

ಸಿ-295ಎಂಡಬ್ಲ್ಯೂ 5-10 ಟನ್ ಸಾಮರ್ಥ್ಯ ಮತ್ತು ಸಮಕಾಲೀನ ತಂತ್ರಜ್ಞಾನವನ್ನು ಹೊಂದಿರುವ ಸಾರಿಗೆ ವಿಮಾನವಾಗಿದೆ. ಸುಮಾರು 40-45 ಪ್ಯಾರಾಟ್ರೂಪರ್‌ಗಳನ್ನು ಅಥವಾ ಸುಮಾರು 70 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲದು. ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್ಸ್ ಮತ್ತು ಸಿದ್ಧವಿಲ್ಲದ ರನ್‌ವೇಗಳಿಂದಲೂ ಇದು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಇದು ತ್ವರಿತ ಪ್ರತಿಕ್ರಿಯೆಗಾಗಿ ಮತ್ತು ಪಡೆಗಳು ಮತ್ತು ಸರಕುಗಳನ್ನು ಕೆಳಗಿಳಿಸಲು ವಿಮಾನದ ಹಿಂಭಾಗದಲ್ಲಿ ರಾಂಪ್ ಬಾಗಿಲು ಇರಲಿದೆ. ಅರೆ-ಸಿದ್ಧ ಮೇಲ್ಮೈಗಳಿಂದ ಸಣ್ಣ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ಅದರ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.

ಸಿ-295 ವಿಮಾನ ತಯಾರಿಕಾ ಸೌಲಭ್ಯವನ್ನು ಪ್ರಾರಂಭಿಸುವುದರೊಂದಿಗೆ ಅಂತಹ ವಿಮಾನಗಳನ್ನು ತಯಾರಿಸುವ ಸಾಮರ್ಥ್ಯದೊಂದಿಗೆ ಭಾರತವು 12ನೇ ರಾಷ್ಟ್ರವಾಗಲಿದೆ. ಪ್ರಸ್ತುತ, ಯುಎಸ್, ಜಪಾನ್, ಯುಕೆ, ರಷ್ಯಾ, ಫ್ರಾನ್ಸ್, ಇಟಲಿ, ಸ್ಪೇನ್, ಉಕ್ರೇನ್, ಬ್ರೆಜಿಲ್, ಚೀನಾ ಮತ್ತು ಜಪಾನ್ ಆ ಸಾಮರ್ಥ್ಯವನ್ನು ಹೊಂದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com