ಅಸ್ಸಾಂ ನಲ್ಲಿ ಇನ್ನೂ ಕೆಲವು ಪ್ರದೇಶಗಳಿಂದ ಎಎಫ್ಎಸ್ ಪಿಎ ಹಿಂತೆಗೆತ- ಸಿಎಂ ಶರ್ಮ ಸುಳಿವು 

ಅಸ್ಸಾಂ ಸರ್ಕಾರ ರಾಜ್ಯದ ಇನ್ನೂ ಕೆಲವು ಪ್ರದೇಶಗಳಿಂದ ಸೇನೆಗೆ ನೀಡಲಾಗಿರುವ ವಿಶೇಷಾಧಿಕಾರ (ಎಎಫ್ಎಸ್ ಪಿಎ) ಯನ್ನು ಹಿಂತೆಗೆದುಕೊಳ್ಳುವ ಸುಳಿವು ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಸ್ಸಾಂ: ಅಸ್ಸಾಂ ಸರ್ಕಾರ ರಾಜ್ಯದ ಇನ್ನೂ ಕೆಲವು ಪ್ರದೇಶಗಳಿಂದ ಸೇನೆಗೆ ನೀಡಲಾಗಿರುವ ವಿಶೇಷಾಧಿಕಾರ (ಎಎಫ್ಎಸ್ ಪಿಎ) ಯನ್ನು ಹಿಂತೆಗೆದುಕೊಳ್ಳುವ ಸುಳಿವು ನೀಡಿದೆ. 

ಎಎಫ್ಎಸ್ ಪಿಎಯನ್ನು ರಾಜ್ಯದ ಕೆಲವು ಭಾಗಗಳಿಂದ ಹಿಂಪಡೆಯಲು ರಾಜ್ಯ ಸರ್ಕಾರ ಪರಿಗಣಿಸುತ್ತಿದೆ ಎಂದು ಸಿಎಂ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.

ಶರಣಾದ ಭಯೋತ್ಪಾದಕರಿಗೆ ಪುನರ್ವಸತಿ ಕಲ್ಪಿಸುವುದು ಹಾಗೂ ಆರ್ಥಿಕ ಬೆಂಬಲ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಮರಳಿ ಸ್ಥಾಪನೆಯಾಗಿದೆ. ರಾಜ್ಯದ ಶೇ.65 ಪ್ರದೇಶಗಳಿಂದ ಎಎಫ್ಎಸ್ ಪಿಎಯನ್ನು ಈಗಾಗಲೇ ಹಿಂಪಡೆಯಲಾಗಿದೆ.
 
ಲಖಿಪುರ ಉಪವಿಭಾಗಗಳಿಂದ ಈಗಾಗಲೇ ಎಎಫ್ಎಸ್ ಪಿಎಯನ್ನು ಹಿಂಪಡೆಯಲು ಪರಿಗಣಿಸುತ್ತಿದ್ದೇವೆ, ಇನ್ನು ಕಬ್ರಿ ಅಂಗ್ಲಾಂಗ್ ನಿಂದ ಪೂರ್ಣ ಪ್ರಮಾಣದಲ್ಲಿ ಎಫ್ಎಫ್ಎಸ್ ಪಿಎಯನ್ನು ಪೂರ್ಣವಾಗಿ ಹಿಂಪಡೆಯಲು ಚಿಂತನೆ ನಡೆಸುತ್ತಿದ್ದೇವೆ ಎಂದು ಸಿಎಂ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com