ದಿ ವೈರ್ ಸಂಸ್ಥಾಪಕ ಸಿದ್ಧಾರ್ಥ್ ವರದರಾಜನ್, ಮೈಕ್ ವೇಣು ನಿವಾಸದ ಮೇಲೆ ದೆಹಲಿ ಪೊಲೀಸ್ ದಾಳಿ
ವೈರ್ ಸಂಸ್ಥಾಪಕ ಸಿದ್ಧಾರ್ಥ್ ವರದರಾಜನ್ ಮತ್ತು ಸಂಪಾದಕ ಎಂಕೆ ವೇಣು ಅವರ ಮನೆಗಳ ಮೇಲೆ ದೆಹಲಿ ಪೊಲೀಸರು ಸೋಮವಾರ ರಾತ್ರಿ ದಾಳಿ ನಡೆಸಿದ್ದಾರೆ.
Published: 31st October 2022 07:57 PM | Last Updated: 31st October 2022 07:57 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ವೈರ್ ಸಂಸ್ಥಾಪಕ ಸಿದ್ಧಾರ್ಥ್ ವರದರಾಜನ್ ಮತ್ತು ಸಂಪಾದಕ ಎಂಕೆ ವೇಣು ಅವರ ಮನೆಗಳ ಮೇಲೆ ದೆಹಲಿ ಪೊಲೀಸರು ಸೋಮವಾರ ರಾತ್ರಿ ದಾಳಿ ನಡೆಸಿದ್ದಾರೆ.
ಯಾರನ್ನೂ ಬಂಧಿಸಿಲ್ಲ ಅಥವಾ ವಶಕ್ಕೆ ಪಡೆದಿಲ್ಲ ಎಂದು ಹೇಳಿರುವ ಪೊಲೀಸರು, ಪ್ರಸ್ತುತ 'ದಿ ವೈರ್' ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಸಾಕ್ಷ್ಯವನ್ನು ಸಂಗ್ರಹಿಸುವ ಸಲುವಾಗಿ ಜೋಡಿ ಎಲೆಕ್ಟ್ರಾನಿಕ್ ಸಾಧನಗಳನ್ನು ಶೋಧಿಸುತ್ತಿರುವುದಾಗಿ ತಿಳಿಸಿದ್ದಾರೆ.
ದೆಹಲಿ ಪೊಲೀಸರು ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯಾ ಅವರ ದೂರಿನ ಆಧಾರದ ಮೇಲೆ 'ದಿ ವೈರ್' ಮತ್ತು ಅದರ ಸಂಪಾದಕರ ವಿರುದ್ಧ ಕಳೆದ ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನು ಓದಿ: ವಿಡಿಯೋ: ದೆಹಲಿ ಕಂಟೋನ್ಮೆಂಟ್ ಬಳಿ ಗನ್ ತೋರಿಸಿ ವ್ಯಕ್ತಿಯೊಬ್ಬರ ಎಸ್ಯುವಿ ದರೋಡೆ ಮಾಡಿದ ಬೈಕ್ ಸವಾರರು
"ವಂಚನೆ ಮತ್ತು ಫೋರ್ಜರಿ" ಹಾಗೂ ಪ್ರತಿಷ್ಠೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಅಮಿತ್ ಮಾಳವೀಯಾ ದೂರು ನೀಡಿದ್ದರು.
ಮಾಳವೀಯ ಅವರು ಸಾಮಾಜಿಕ ಮಾಧ್ಯಮ ಸಂಸ್ಥೆ ಮೆಟಾದಲ್ಲಿ(ಫೇಸ್‌ಬುಕ್ ಮಾತೃಸಂಸ್ಥೆ) ತಮ್ಮ ವಿಶೇಷ ಅಧಿಕಾರ ಬಳಸಿಕೊಂಡು 700 ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಿಂದ ತೆಗೆದುಹಾಕಿದ್ದಾರೆ ಎಂಬ ವರದಿಗೆ ಸಂಬಂಧಿಸಿದಂತೆ ದಿ ವೈರ್ ಮತ್ತು ಅದರ ಸಂಸ್ಥಾಪಕ, ಸಂಪಾದಕರ ವಿರುದ್ಧ ದೂರು ದಾಖಲಿಸಿದ್ದರು.