ಸೋನಾಲಿ ಫೋಗಟ್ ಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಒತ್ತಾಯಿಸಿ ಅರ್ಜಿ ಸಲ್ಲಿಸಲಿದೆ ಫೋಗಟ್ ಕುಟುಂಬ

ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋನಾಲಿ ಫೋಗಟ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಗಟ್ ಅವರ ಕುಟುಂಬವು ಈಗ ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಿದೆ.
ಸೋನಾಲಿ ಪೋಗಟ್
ಸೋನಾಲಿ ಪೋಗಟ್

ಹಿಸ್ಸಾರ್: ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಸೋನಾಲಿ ಫೋಗಟ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಗಟ್ ಅವರ ಕುಟುಂಬವು ಈಗ ಈ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಒತ್ತಾಯಿಸಿದೆ.

ಸೋನಾಲಿ ಫೋಗಟ್ ಅವರ ಸೋದರಳಿಯ ವಿಕಾಸ್ ಸಿಂಗ್ ಹಾಗೂ ಕುಟುಂಬವು ಸಿಬಿಐ ತನಿಖೆಗಾಗಿ ಗೋವಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಿದೆ ಎಂದು ಹೇಳಿದ್ದಾರೆ.

ಈಮಧ್ಯೆ, ಗೋವಾ ಪೊಲೀಸರ ತಂಡವು ಇಂದು (ಭಾನುವಾರ) ಗುರ್ಗಾಂವ್‌ಗೆ ಭೇಟಿ ನೀಡಲಿದೆ.

ಸೋನಾಲಿ ಫೋಗಟ್ ಅವರ ಸಹೋದರನ ಪ್ರಕಾರ, ಗೋವಾ ಪೊಲೀಸರು ಫೋಗಟ್ ಅವರ ಫ್ಲಾಟ್‌‌ಗೆ ಮಧ್ಯಾಹ್ನ 2 ಗಂಟೆಗೆ ತಲುಪಲು ಕುಟುಂಬ ಸದಸ್ಯರನ್ನು ಕೇಳಿದ್ದಾರೆ ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮಾತ್ರ ಫ್ಲಾಟ್ ಅನ್ನು ತೆರೆದು ಶೋಧಕಾರ್ಯ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಸೋನಾಲಿ ಫೋಗಟ್ ಅವರ ಇಬ್ಬರು ಸಹೋದರರು, ಸೋದರ ಮಾವ ಮತ್ತು ಸೋದರಳಿಯರು ಕುಟುಂಬದ ಇತರ ಇಬ್ಬರು ಸದಸ್ಯರೊಂದಿಗೆ ಗುರುಗ್ರಾಮಕ್ಕೆ ತೆರಳಲಿದ್ದಾರೆ. ಸೋನಾಲಿ ಫೋಗಟ್ ಅವರು ಮತ್ತು ಅವರ ಸಹಾಯಕ ಸುಧೀರ್ ಗೋವಾಗೆ ಹೋಗುವ ಮೊದಲು ಈ ಫ್ಲಾಟ್‌ನಲ್ಲಿ ಉಳಿದುಕೊಂಡಿದ್ದರು.

ಕುಟುಂಬದವರ ಪ್ರಕಾರ, ಗೋವಾ ಪೊಲೀಸರು ತನಿಖೆ ಹೆಸರಿನಲ್ಲಿ ಏನೂ ಮಾಡುತ್ತಿಲ್ಲ ಎಂದು ಆರೋಪಿಸಿದ್ದು, 'ಗೋವಾ ಪೊಲೀಸರು 4 ದಿನಗಳ ರಜೆಯ ಪ್ಯಾಕೇಜ್‌ನಲ್ಲಿ ಬಂದಿದ್ದಾರೆ' ಎಂದು ದೂರಿದ್ದಾರೆ.

42 ವರ್ಷದ ಸೋನಾಲಿ ಫೋಗಟ್ ಅವರು ಗೋವಾದಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಆಕೆಯ ಇಬ್ಬರು ಸಹಾಯಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com