ಹಣ ಅಕ್ರಮ ವರ್ಗಾವಣೆ ಪ್ರಕರಣ: ಸೆಪ್ಟೆಂಬರ್ 19ರವರೆಗೆ ಸಂಜಯ್ ರಾವತ್‌ಗೆ ಜೈಲೇ ಗತಿ!

ಮುಂಬೈನ ವಿಶೇಷ ನ್ಯಾಯಾಲಯವು ರಾಜ್ಯಸಭಾ ಸದಸ್ಯ ಮತ್ತು ಶಿವಸೇನೆ ನಾಯಕ ಸಂಜಯ್ ರಾವುತ್ ಅವರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 19 ರವರೆಗೆ ವಿಸ್ತರಿಸಿದೆ.
ಸಂಜಯ್ ರಾವುತ್
ಸಂಜಯ್ ರಾವುತ್

ಮುಂಬೈ: ಇಲ್ಲಿನ ವಿಶೇಷ ನ್ಯಾಯಾಲಯವು ರಾಜ್ಯಸಭಾ ಸದಸ್ಯ ಮತ್ತು ಶಿವಸೇನೆ ನಾಯಕ ಸಂಜಯ್ ರಾವುತ್ ಅವರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 19 ರವರೆಗೆ ವಿಸ್ತರಿಸಿದೆ. ಪತ್ರಾ ಚಾಲ್ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದಿಂದ ಬಂಧನಕ್ಕೊಳಗಾಗಿರುವ ಅವರಿಗೆ ಜೈಲೇ ಗತಿ ಎನ್ನುವಂತಾಗಿದೆ.

ಸಂಜಯ್ ರಾವುತ್ ಅವರು ಇನ್ನೂ ಜಾಮೀನು ಅರ್ಜಿ ಸಲ್ಲಿಸಿಲ್ಲ ಎಂದು ಅವರ ಪರ ವಕೀಲರು ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದರು.

ಸಂಜಯ್ ರಾವುತ್ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸುವಂತೆ ಕೋರಿ ಇ.ಡಿ ಈ ಹಿಂದೆ ಮನವಿ ಸಲ್ಲಿಸಿತ್ತು.

ಸಂಸತ್ತಿನ ಕೆಲವು ನಮೂನೆಗಳಿಗೆ ಸಹಿ ಹಾಕಲು ಮತ್ತು ನ್ಯಾಯಾಲಯ ಹಾಗ ಇ.ಡಿಗೆ ಅದರ ಪ್ರತಿಯನ್ನು ಒದಗಿಸಲು ನ್ಯಾಯಾಲಯವು ಸಂಜಯ್ ರಾವುತ್ ಅವರಿಗೆ ಅವಕಾಶ ನೀಡಿದೆ.

ಸಂಜಯ್ ರಾವುತ್ ಅವರ ಕುಟುಂಬ ಇಂದು ನ್ಯಾಯಾಲಯಕ್ಕೆ ಹಾಜರಾಗಿತ್ತು. ಅವರ ಅನೇಕ ಬೆಂಬಲಿಗರೂ ನ್ಯಾಯಾಲಯದ ಮೆಟ್ಟಿಲೇರಿದ್ದರು.

1,034 ಕೋಟಿ ರೂಪಾಯಿ ಪತ್ರಾ ಚಾಲ್ ಭೂ ಹಗರಣ ಪ್ರಕರಣದಲ್ಲಿ ಆರು ಗಂಟೆಗಳ ವಿಚಾರಣೆಯ ನಂತರ ಸಂಜಯ್ ರಾವುತ್ ಅವರನ್ನು ಆಗಸ್ಟ್ 1 ರಂದು ಇ.ಡಿ ಬಂಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com