ಅಪಘಾತದ ಸಂದರ್ಭದಲ್ಲಿ ಏರ್ ಬ್ಯಾಗ್ ಗಳೇಕೆ ತೆರೆದುಕೊಳ್ಳಲಿಲ್ಲ? ಮರ್ಸಿಡೀಸ್ ಸಂಸ್ಥೆಗೆ ಪೊಲೀಸ್ ಪ್ರಶ್ನೆ

ಕೈಗಾರಿಕೋದ್ಯಮಿ ಹಾಗೂ ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮಿಸ್ತ್ರಿ ಪ್ರಯಾಣಿಸುತ್ತಿದ್ದ ಮರ್ಸಿಡೀಸ್ ಕಾರಿನ ಸಂಸ್ಥೆಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. 
ಸೈರಸ್ ಮಿಸ್ತ್ರಿ
ಸೈರಸ್ ಮಿಸ್ತ್ರಿ

ಮುಂಬೈ: ಕೈಗಾರಿಕೋದ್ಯಮಿ ಹಾಗೂ ಟಾಟಾ ಸನ್ಸ್ ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮಿಸ್ತ್ರಿ ಪ್ರಯಾಣಿಸುತ್ತಿದ್ದ ಮರ್ಸಿಡೀಸ್ ಕಾರಿನ ಸಂಸ್ಥೆಗೆ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. 

ಮಿಸ್ತ್ರಿ ಪ್ರಯಾಣಿಸುತ್ತಿದ್ದ ಮರ್ಸಿಡೀಸ್ ಕಾರಿನ ಏರ್ ಬ್ಯಾಗ್ ಗಳು ಅಪಘಾತದ ಸಂದರ್ಭದಲ್ಲಿ ಏಕೆ ತೆರೆದುಕೊಳ್ಳಲಿಲ್ಲ? ಕಾರಿನ ಬ್ರೇಕ್ ಫ್ಲ್ಯುಯಡ್ ಎಷ್ಟಿತ್ತು? ಕಾರಿನಲ್ಲೇನಾದರೂ ಯಾಂತ್ರಿಕ ದೋಷವಿತ್ತೇ? ಟೈರ್ ಪ್ರಷರ್ ಎಷ್ಟಿತ್ತು? ಎಂಬೆಲ್ಲಾ ಪ್ರಶ್ನೆಗಳನ್ನು ಕಾರು ತಯಾರಿಕಾ ಸಂಸ್ಥೆಗೆ ಪೊಲೀಸರು ಕೇಳಿದ್ದಾರೆ.

ನಿಖರವಾದ ಪರೀಕ್ಷೆಯ ನಂತರವಷ್ಟೇ ಈ ವಾಹನಗಳು ಮಾರುಕಟ್ಟೆಗೆ ಬರುತ್ತವೆ ಎಂದು ಪೊಲೀಸರು ಹೇಳಿದ್ದು ಈ ರೀತಿಯ ಪರಿಸ್ಥಿತಿಯಲ್ಲಿ ಉತ್ಪಾದಕರ ತನಿಖೆಯ ವರದಿಯಲ್ಲಿ ಘರ್ಷಣೆಯ ಪರಿಣಾಮ ಏನಿರುತ್ತದೆ? ಘರ್ಷಣೆ ಉಂಟಾದ ಬೆನ್ನಲ್ಲೇ ಕಾರ್ ಸ್ಟೀರಿಂಗ್ ಲಾಕ್ ಆಗಿತ್ತೆ? ಎಂದ್ಮು ಪೊಲೀಸರು ಕಾರು ಉತ್ಪಾದಕರನ್ನು ಪ್ರಶ್ನಿಸಿದ್ದಾರೆ.

ಪೊಲೀಸ್ ಪ್ರಶ್ನೆಗಳಿಗೆ ಕಾರು ತಯಾರಕ ಸಂಸ್ಥೆ ತನ್ನ ವರದಿಯ ಮೂಲಕ ಉತ್ತರಿಸಲಿದೆ. ಮೂಲಗಳ ಪ್ರಕಾರ, ಕಾರು ತಯಾರಿಕಾ ಸಂಸ್ಥೆ ಪಾಲ್ಘರ್ ಪೊಲೀಸರಿಗೆ ನೀಡಿರುವ ಮಾಹಿತಿಯಲ್ಲಿ ಡೇಟಾ ರೆಕಾರ್ಡರ್ ಚಿಪ್ ನ್ನು ಜರ್ಮನಿಗೆ ಕಳಿಸಿ ಡೀಕೋಡ್ ಮಾಡಲಾಗುತ್ತದೆ, ಈ ಬಳಿಕ ಎಸ್ ಯುವಿ ಬಗ್ಗೆ ವಿವರವಾದ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com