ಅಮೃತಸರದ ಪ್ರಮುಖ ಶಾಲೆಯಲ್ಲಿ ಹುಸಿ ಬಾಂಬ್ ಬೆದರಿಕೆ, ವದಂತಿ ಹಬ್ಬಿಸಿದ್ದ ಮೂವರು ವಿದ್ಯಾರ್ಥಿಗಳು ಪತ್ತೆ: ಪೊಲೀಸರು

ಅಮೃತಸರದ ಪ್ರಮುಖ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ವದಂತಿಯನ್ನು ಅದೇ ಶಾಲೆಯ ಮೂವರು ವಿದ್ಯಾರ್ಥಿಗಳೇ ಹಬ್ಬಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟದ ಎಚ್ಚರಿಕೆ ಸಂದೇಶಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು.
ವದಂತಿ ಹಬ್ಬಿಸಿದ್ದು ಅದೇ ಶಾಲೆಯ ವಿದ್ಯಾರ್ಥಿಗಳು ಎಂದು ತಳಿದುಬಂದಿದೆ ಎಂದ ಪೊಲೀಸರು
ವದಂತಿ ಹಬ್ಬಿಸಿದ್ದು ಅದೇ ಶಾಲೆಯ ವಿದ್ಯಾರ್ಥಿಗಳು ಎಂದು ತಳಿದುಬಂದಿದೆ ಎಂದ ಪೊಲೀಸರು

ಚಂಡೀಗಢ: ಅಮೃತಸರದ ಪ್ರಮುಖ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ವದಂತಿಯನ್ನು ಅದೇ ಶಾಲೆಯ ಮೂವರು ವಿದ್ಯಾರ್ಥಿಗಳೇ ಹಬ್ಬಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟದ ಎಚ್ಚರಿಕೆ ಸಂದೇಶಗಳು ಅಂತರ್ಜಾಲದಲ್ಲಿ ವೈರಲ್ ಆದ ನಂತರ ಶಾಲೆಯ ಹೊರಗೆ ಭಾರಿ ಭದ್ರತೆಯನ್ನು ನಿಯೋಜಿಸಲಾಗಿತ್ತು.

ವದಂತಿಗಳನ್ನು ಹಬ್ಬಿದ ಕೆಲವೇ ಗಂಟೆಗಳಲ್ಲಿ ಶಾಲೆಯ ಮೂವರು ವಿದ್ಯಾರ್ಥಿಗಳನ್ನು ಪತ್ತೆಹಚ್ಚಲಾಗಿದೆ. ಆದರೆ, ಅವರು ಅಪ್ರಾಪ್ತರಾಗಿರುವುದರಿಂದ ಅವರನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಕಾನೂನಿನ ಪ್ರಕಾರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹುಸಿ ಬಾಂಬ್ ಬೆದರಿಕೆಯ ಪೋಸ್ಟ್ ವೈರಲ್ ಆಗಿದ್ದರೆ, ಅದೇ ಶಾಲೆಯಲ್ಲಿ ಗುಂಡಿನ ದಾಳಿಯ ಎಚ್ಚರಿಕೆ ಸಂದೇಶವನ್ನು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗಿದೆ. ಸಂದೇಶಗಳು ಶೀಘ್ರದಲ್ಲೇ ಶಾಲಾ ಗುಂಪುಗಳಿಗೆ ಪ್ರವೇಶಿಸಿ ಭಯವನ್ನು ಉಂಟುಮಾಡಿವೆ. ಗಮನಾರ್ಹವಾಗಿ, ಎರಡೂ ಪೋಸ್ಟ್‌ಗಳು ಪಾಕಿಸ್ತಾನದ ಧ್ವಜದ ಎಮೋಜಿಗಳನ್ನು ಒಳಗೊಂಡಿದ್ದು, ಪಠ್ಯವು ಇಂಗ್ಲಿಷ್ ಮತ್ತು ಉರ್ದು ಎರಡರಲ್ಲೂ ಇತ್ತು.

ಅಮೃತಸರ ಪೊಲೀಸರ ಸೈಬರ್ ಸೆಲ್ ವಿಭಾಗವು ಅಮೃತಸರ ನಗರದ ಸಮೀಪದ ಚೆಹರ್ತಾದಲ್ಲಿ ತಂಗಿರುವ 9 ನೇ ತರಗತಿಯ ವಿದ್ಯಾರ್ಥಿಯ ಐಪಿ ವಿಳಾಸದಿಂದ ಸಂದೇಶಗಳು ಬಂದಿರುವುದನ್ನು ಪತ್ತೆಹಚ್ಚಿದೆ.

ಮಾಹಿತಿ ಮೇರೆಗೆ, ಪೊಲೀಸರು ಶಾಲೆಯ ಹೊರಗೆ ಭದ್ರತೆಗಾಗಿ ಕಮಾಂಡೋಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಿದ್ದರು ಮತ್ತು ಸೈಬರ್ ಸೆಲ್‌ನ ಮಾಹಿತಿಯ ಆಧಾರದ ಮೇಲೆ ರಾತ್ರಿಯಿಡೀ ಹುಡುಕಾಟ ನಡೆಸಿದರು.

9 ನೇ ತರಗತಿಯ ಮೂವರು ವಿದ್ಯಾರ್ಥಿಗಳು ಕಿಡಿಗೇಡಿತನದ ಭಾಗವಾಗಿ ಇದನ್ನು ಯೋಜಿಸಿದ್ದರು ಮತ್ತು ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಪ್ರಭ್ಜೋತ್ ಸಿಂಗ್ ವಿರ್ಕ್ ಹೇಳಿದ್ದಾರೆ.

ಬೆದರಿಕೆಗಳು ಸುಳ್ಳು ಎಂದು ತಿಳಿದ ಬಳಿಕ, ವಿದ್ಯಾರ್ಥಿಗಳು ಶಾಲೆಗೆ ಬರುವುದು ಸುರಕ್ಷಿತ ಎಂದು ತೀರ್ಮಾನಿಸಲಾಯಿತು. ಅವರು ಸಾಮಾನ್ಯ ಭಾವನೆ ಹೊಂದಲಿ ಎಂದು ಶಾಲೆಯ ಪ್ರಾಂಶುಪಾಲರು ಸುದ್ದಿಗಾರರಿಗೆ ತಿಳಿಸಿದರು.

ಇದಕ್ಕೂ ಮುನ್ನ, ಅಮೃತಸರ ಸಂಸದ ಗುರ್ಜಿತ್ ಸಿಂಗ್ ಔಜ್ಲಾ ಅವರು ಶಾಲೆಯ ಹೊರಗೆ ಭದ್ರತೆಯನ್ನು ಬಿಗಿಗೊಳಿಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಕೇಳಿದ್ದರು. ಪ್ರಸಿದ್ಧ ಶಾಲೆಯೊಂದರ ಪ್ರಾಂಶುಪಾಲರಿಗೆ ಬೆದರಿಕೆ ಇದೆ ಎಂಬುದು ಸ್ಥಳೀಯ ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com