ಗಾಂಧಿ ಕುಟುಂಬದವರ ನಿರಂತರ ದಾಳಿಯು, ನನ್ನನ್ನು ಪ್ರತೀಕಾರ ತೀರಿಸಿಕೊಳ್ಳುವಂತೆ ಮಾಡಿತು: ಗುಲಾಂ ನಬಿ ಆಜಾದ್

ಕಾಂಗ್ರೆಸ್‌ನ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್, ಕಾಂಗ್ರೆಸ್‌ನಿಂದ ನಿರ್ಗಮಿಸಿದಾಗಿನಿಂದ ನಾನು ಗೌರವಾನ್ವಿತ ಮೌನವನ್ನು ವಹಿಸಿದ್ದೇನೆ. ಆದರೆ, ಅವರ ನಿರಂತರ ದಾಳಿಯು ಪ್ರತೀಕಾರ ತೀರಿಸಿಕೊಳ್ಳಲು ಒತ್ತಾಯಿಸಿದೆ ಎಂದು ಹೇಳಿದ್ದಾರೆ.
ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್

ಭದೇರ್ವಾ/ಜಮ್ಮು: ಕಾಂಗ್ರೆಸ್‌ನ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್, ಕಾಂಗ್ರೆಸ್‌ನಿಂದ ನಿರ್ಗಮಿಸಿದಾಗಿನಿಂದ ನಾನು ಗೌರವಾನ್ವಿತ ಮೌನವನ್ನು ವಹಿಸಿದ್ದೇನೆ. ಆದರೆ, ಅವರ ನಿರಂತರ ದಾಳಿಯು ಪ್ರತೀಕಾರ ತೀರಿಸಿಕೊಳ್ಳಲು ಒತ್ತಾಯಿಸಿದೆ ಎಂದು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ತಮ್ಮ ತವರು ಪಟ್ಟಣದಲ್ಲಿನ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಗಾಂಧಿಯವರು ತಮ್ಮ ಮೇಲೆ ಪದೇ ಪದೆ ದಾಳಿ ಮಾಡಿದರೂ, ತಾನು ಘನತೆಯಿಂದ ಮೌನವನ್ನು ದೀರ್ಘಕಾಲ ಅನುಸರಿಸಿದ್ದೇನೆ. ಆದರೆ, ತಮ್ಮ ಒಂದೇ ಒಂದು ಪ್ರತಿಕಾರವು ಈಗ ಅವರನ್ನು ನೆಲಸಮಗೊಳಿಸಿದೆ' ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮದೇ ಆದ ಪಕ್ಷವನ್ನು ಘೋಷಿಸುವ ಮುನ್ನ ಕಾಂಗ್ರೆಸ್ಸೇತರ ನಾಯಕರಾಗಿ ತಮ್ಮ ಚೊಚ್ಚಲ ರಾಜಕೀಯ ಪ್ರಚಾರದಲ್ಲಿರುವ ಆಜಾದ್, ದೋಡಾದ ಭದೇರ್ವಾದಲ್ಲಿನ ಜಾಮ್ ಪ್ಯಾಕ್ಡ್ ಭಲ್ಲಾ ಮಾರುಕಟ್ಟೆಯಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

'ನನ್ನ ರಾಜೀನಾಮೆ ಪತ್ರದ ನಂತರ, ನಾನು ನಾಲ್ಕು ದಿನಗಳ ಕಾಲ ಮೌನವಾಗಿದ್ದೆ. ಆದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನನ್ನ ಮೇಲೆ ವಾಗ್ದಾಳಿ ಮಾಡುತ್ತಲೇ ಇದ್ದಾಗ, ನನ್ನ ಮಾತನ್ನು ಹೇಳದೆ ನನಗೆ ಬೇರೆ ದಾರಿಯೇ ಇರಲಿಲ್ಲ. ನಿಮ್ಮ ಮೇಲೆ ದಾಳಿಯಾದಾಗ ನನ್ನ ಧರ್ಮ ಮತ್ತು ರಾಜಕೀಯದ ನೀತಿಗಳು ನಿಮಗೆ ರಕ್ಷಣೆ ನೀಡುವ ಹಕ್ಕನ್ನು ನೀಡುವುದರಿಂದ ನಾನು ಕೂಡ ಅವರ ವಿರುದ್ಧ ಮಾತನಾಡಬೇಕಾಯಿತು' ಎಂದು ಆಜಾದ್ ಹೇಳಿದರು.

'ಅವರು ನನ್ನ ಮೇಲೆ ಕ್ಷಿಪಣಿಗಳನ್ನು ಹಾರಿಸುವ ಮೂಲಕ ನನ್ನನ್ನು ದೂಷಿಸಲು ಪ್ರಯತ್ನಿಸಿದರು. ಆದರೆ, ನಾನು ಪ್ರತೀಕಾರ ತೀರಿಸಿಕೊಂಡಾಗ, ಅವರು 303 ರೈಫಲ್‌ನ ಒಂದೇ ಹೊಡೆತದಿಂದ ನೆಲಸಮರಾದರು. ಒಂದು ವೇಳೆ ನಾನು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಬಳಸಿದ್ದರೆ, ಅವರು ರಾಜಕೀಯದಿಂದ ಶಾಶ್ವತವಾಗಿ ಕಣ್ಮರೆಯಾಗುತ್ತಿದ್ದರು' ಎಂದರು.

'ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವ ಮತ್ತು ಅದರ ಜನರ ಹಕ್ಕುಗಳನ್ನು ಪುನಃಸ್ಥಾಪಿಸಲು ಹೋರಾಡುತ್ತೇನೆ. ಜಮ್ಮು ಮತ್ತು ಕಾಶ್ಮೀರದ ಭೂಮಿ ಮತ್ತು ಉದ್ಯೋಗಗಳ ಮೇಲಿನ ಮೊದಲ ಹಕ್ಕು ನಮ್ಮ ಜನರಿಗೆ ಇರಬೇಕು ಮತ್ತು ನನ್ನ ಜನರಿಗೆ ಅವರ ಹಕ್ಕನ್ನು ನೀಡಲು ಹೋರಾಡುವುದು ನನ್ನ ಮೊದಲ ಆದ್ಯತೆಯಾಗಿದೆ. ತಮ್ಮ ಪಕ್ಷವು ಸಂಪೂರ್ಣ ರಾಜ್ಯತ್ವದ ಮರುಸ್ಥಾಪನೆ ಮತ್ತು ಸ್ಥಳೀಯ ವಾಸಸ್ಥಳ ಹೊಂದಿರುವವರಿಗೆ ಭೂಮಿ ಮತ್ತು ಉದ್ಯೋಗದ ಹಕ್ಕನ್ನು ಕೇಂದ್ರೀಕರಿಸುತ್ತದೆ' ಎಂದು ಅವರು ಹೇಳಿದರು.

ಉಧಂಪುರದಲ್ಲಿ ನಡೆದ ಮತ್ತೊಂದು ರ‍್ಯಾಲಿಯಲ್ಲಿ, (ಕಾಂಗ್ರೆಸ್-ಪಿಡಿಪಿ) ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕೆಲವರು ಹಿಂತೆಗೆದುಕೊಂಡಾಗ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಮಾಡಲು ಸಾಧ್ಯವಾಗದ ಅಪೂರ್ಣ ಕೆಲಸವನ್ನು ಈಗ ಪ್ರಾರಂಭಿಸುವುದಾಗಿ ಹೇಳಿದ ಅವರು, ಆ ಜನರ (ಕಾಂಗ್ರೆಸ್ಸಿಗರ) ಹೃದಯ ಮತ್ತು ಮನಸ್ಸಿನ ಬಗ್ಗೆ ಅವರಿಗೆ ಮೊದಲೇ ತಿಳಿದಿದ್ದರೆ, ಬಹಳ ಹಿಂದೆಯೇ ಕಾಂಗ್ರೆಸ್ ತೊರೆಯುತ್ತಿದ್ದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com