ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ: ರ‍್ಯಾಲಿಯಲ್ಲಿ ಗುಲಾಂ ನಬಿ ಆಜಾದ್

ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎರಡು ವರ್ಷಗಳ ಹಿಂದೆ ಹಿಂತೆಗೆದುಕೊಂಡಿದೆ. ಅದನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮಾಜಿ ನಾಯಕ ಗುಲಾಂ ನಬಿ ಆಜಾದ್ ಭಾನುವಾರ ಹೇಳಿದ್ದಾರೆ.
ಗುಲಾಂ ನಬಿ ಅಜಾದ್
ಗುಲಾಂ ನಬಿ ಅಜಾದ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎರಡು ವರ್ಷಗಳ ಹಿಂದೆ ಹಿಂತೆಗೆದುಕೊಂಡಿದೆ. ಅದನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮಾಜಿ ನಾಯಕ ಗುಲಾಂ ನಬಿ ಆಜಾದ್ ಭಾನುವಾರ ಹೇಳಿದ್ದಾರೆ.

ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ತಮ್ಮ ಮೊದಲ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಆಜಾದ್, ಆರ್ಟಿಕಲ್ 370ರ ಪುನಃಸ್ಥಾಪನೆಗೆ ಒತ್ತಾಯಿಸುವುದಾಗಿ ಭರವಸೆ ನೀಡುವ ಮೂಲಕ 'ಜನರನ್ನು ದಾರಿ ತಪ್ಪಿಸುತ್ತಿರುವ' ಪ್ರಾದೇಶಿಕ ಪಕ್ಷಗಳನ್ನು ಗುರಿಯಾಗಿಸಿದರು.

'ಗುಲಾಂ ನಬಿ ಆಜಾದ್ ಯಾರನ್ನೂ ದಾರಿ ತಪ್ಪಿಸುವುದಿಲ್ಲ. ಮತಕ್ಕಾಗಿ, ನಾನು ನಿಮ್ಮನ್ನು ದಾರಿ ತಪ್ಪಿಸುವುದಿಲ್ಲ ಮತ್ತು ಶೋಷಣೆ ಮಾಡುವುದಿಲ್ಲ. ದಯವಿಟ್ಟು ಸಾಧಿಸಲು ಸಾಧ್ಯವಾಗದ ಸಮಸ್ಯೆಗಳನ್ನು ಕೆದಕಬೇಡಿ. 370ನೇ ವಿಧಿಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ. ಸಂಸತ್ತಿನಲ್ಲಿ ಅದಕ್ಕೆ ಮೂರನೇ ಎರಡರಷ್ಟು ಬಹುಮತ ಬೇಕು' ಎಂದು ಆಜಾದ್ ತಿಳಿಸಿದರು.

ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಕೆಳಗಿಳಿಯುತ್ತಿದೆ. ಸಂಸತ್ತಿನಲ್ಲಿ ಬಹುಮತ ಪಡೆಯುವ ಮತ್ತು 370 ನೇ ವಿಧಿಯನ್ನು ಮರುಸ್ಥಾಪಿಸುವ ಯಾವುದೇ ಪಕ್ಷವು ಭಾರತದಲ್ಲಿ ಇಲ್ಲ. 'ಶೋಷಣೆ ಮತ್ತು ಸುಳ್ಳಿನ ರಾಜಕೀಯದ ವಿರುದ್ಧ ಹೋರಾಡಲು ಮುಂದಿನ 10 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಪಕ್ಷವನ್ನು ಪ್ರಾರಂಭಿಸುವುದಾಗಿ' ಎಂದು ಅವರು ಹೇಳಿದರು.

'ಶೋಷಣೆಯ ರಾಜಕೀಯವು ಕಾಶ್ಮೀರದಲ್ಲಿ ಒಂದು ಲಕ್ಷ ಜನರ ಹತ್ಯೆಗೆ ಕಾರಣವಾಗಿದೆ. ಇದು ಐದು ಲಕ್ಷ ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ ಮತ್ತು ಭಾರಿ ಗೊಂದಲವನ್ನು ಸೃಷ್ಟಿಸಿದೆ. ನನ್ನ ರಾಜಕೀಯ ಭವಿಷ್ಯಕ್ಕೆ ಧಕ್ಕೆಯಾಗಿದ್ದರೂ ಕೂಡ, ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಬಂದಿದ್ದು ಶೋಷಣೆ ಮತ್ತು ಸುಳ್ಳಿನ ವಿರುದ್ಧ ಹೋರಾಡಲೆಂದು' ಎಂದರು.

'ಜನರನ್ನು ಪ್ರತಿಭಟನೆಗೆ ಪ್ರಚೋದಿಸುವುದು ಮತ್ತು ನಂತರ ಕೊಲ್ಲುವುದು ಮತ್ತೊಂದು ನೆಪ. ಆಜಾದ್ ಬದುಕಿರುವಷ್ಟು ದಿನ ಸುಳ್ಳಿನ ವಿರುದ್ಧ ಹೋರಾಡುತ್ತೇನೆ. ಈ ವಿಚಾರವನ್ನು ನೀವು ಮೌನಗೊಳಿಸಬೇಕಾದರೆ, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ. 'ಮತಗಳನ್ನು ಪಡೆಯುವುದಕ್ಕಾಗಿ ನಾನು ಭಾವನಾತ್ಮಕ ವಿಚಾರಗಳನ್ನು ಎತ್ತುವುದಿಲ್ಲ ಮತ್ತು ಘೋಷಣೆಗಳನ್ನು ಮಾಡುವುದಿಲ್ಲ. ರಾಜ್ಯದ ಮರುಸ್ಥಾಪನೆಗಾಗಿ ನಾವು ಹೋರಾಟ ನಡೆಸಬೇಕಾಗಿದೆ. ಇದಕ್ಕಾಗಿ ಸಾಂವಿಧಾನಿಕ ತಿದ್ದುಪಡಿಯ ಅಗತ್ಯವಿಲ್ಲ' ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com