ಅಮಿತ್ ಶಾ ದೇಶದ ಅತಿದೊಡ್ಡ ಪಪ್ಪು ಎಂದಿದ್ದ ಅಭಿಷೇಕ್ ಬ್ಯಾನರ್ಜಿ ಸಂಬಂಧಿಗೆ ಸಮನ್ಸ್ ನೀಡಿದ ಇ.ಡಿ

ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಸೊಸೆ ಮನೇಕಾ ಗಂಭೀರ್ ಅವರನ್ನು ವಿದೇಶಕ್ಕೆ ತೆರಳದಂತೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಇ.ಡಿ ಶನಿವಾರ ಸಂಜೆ ತಡೆಹಿಡಿದಿದೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಮನ್ಸ್ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಭಿಷೇಕ್ ಬ್ಯಾನರ್ಜಿ
ಅಭಿಷೇಕ್ ಬ್ಯಾನರ್ಜಿ

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಸೊಸೆ ಮನೇಕಾ ಗಂಭೀರ್ ಅವರನ್ನು ವಿದೇಶಕ್ಕೆ ತೆರಳದಂತೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಇ.ಡಿ ಶನಿವಾರ ಸಂಜೆ ತಡೆಹಿಡಿದಿದೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಮನ್ಸ್ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮನೇಕಾ ಗಂಭೀರ್ ಅವರು ರಾತ್ರಿ 9 ಗಂಟೆ ಸುಮಾರಿಗೆ ಬ್ಯಾಂಕಾಕ್‌ಗೆ ತೆರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ತನಿಖಾ ಸಂಸ್ಥೆ ತನ್ನ ವಿರುದ್ಧ ಹೊರಡಿಸಿರುವ ಲುಕ್ ಔಟ್ ಸುತ್ತೋಲೆ (ಎಲ್‌ಓಸಿ) ಆಧಾರದ ಮೇಲೆ ಮನೇಕಾ ಅವರಿಗೆ ವಲಸೆ ಕ್ಲಿಯರೆನ್ಸ್ ನಿರಾಕರಿಸಲಾಗಿದೆ ಎಂದು ಮೂಲಗಳು ಭಾನುವಾರ ತಿಳಿಸಿವೆ.
ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಆಕೆಯನ್ನು ತಡೆದರು ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಮಾಹಿತಿ ನೀಡಿದ್ದಾರೆ. ಬಳಿಕ ವಿಮಾನ ನಿಲ್ದಾಣಕ್ಕೆ ಬಂದ ಇ.ಡಿ ಅಧಿಕಾರಿಗಳು ಆಕೆಯೊಂದಿಗೆ ಮಾತನಾಡಿ ಪ್ರಯಾಣಕ್ಕೆ ಅನುಮತಿಯನ್ನು ನಿರಾಕರಿಸಿದ್ದಾರೆ ಎಂದು ಅವರು ಹೇಳಿದರು.

ಪಶ್ಚಿಮ ಬಂಗಾಳದಲ್ಲಿನ ಕಲ್ಲಿದ್ದಲು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೋಲ್ಕತ್ತಾದ ಕೋಲ್ಕತ್ತಾದ ಸಾಲ್ಟ್ ಲೇಕ್ ಪ್ರದೇಶದ ಕಚೇರಿಯಲ್ಲಿ ಸೋಮವಾರ (ಸೆ. 12) ಬೆಳಿಗ್ಗೆ 11 ಗಂಟೆಗೆ ತನಿಖಾ ಸಂಸ್ಥೆಯ ಮುಂದೆ ಹಾಜರಾಗುವಂತೆ ಕೋರಿ ಇ.ಡಿ ಅಧಿಕಾರಿಗಳು ಮನೇಕಾ ಅವರಿಗೆ ಸಮನ್ಸ್ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಇದಾದ ಬಳಿಕ ಭಾನುವಾರ ರಾತ್ರಿ 10:30 ರ ಸುಮಾರಿಗೆ ಮನೇಕಾ ಅವರು ವಿಮಾನ ನಿಲ್ದಾಣದಿಂದ ತನ್ನ ಕೋಲ್ಕತ್ತಾದ ಮನೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ ಮನೇಕಾ ಅವರನ್ನು ಇ.ಡಿ ಈವರೆಗೂ ವಿಚಾರಣೆ ನಡೆಸಿಲ್ಲ. ಈ ಪ್ರಕರಣದಲ್ಲಿ ಈ ಹಿಂದೆ ಸಿಬಿಐ ಆಕೆಯ ವಿಚಾರಣೆ ನಡೆಸಿತ್ತು.

ಕಲ್ಕತ್ತಾ ಹೈಕೋರ್ಟ್ ಆಗಸ್ಟ್‌ನಲ್ಲಿ ಇ.ಡಿಗೆ ಗಂಭೀರ್ ಅವರನ್ನು ಕೋಲ್ಕತ್ತಾದಲ್ಲಿರುವ ತನ್ನ ಪ್ರಾದೇಶಿಕ ಕಚೇರಿಯಲ್ಲಿ ವಿಚಾರಣೆ ನಡೆಸಬೇಕು ಹೊರತು ದೆಹಲಿಯಲ್ಲಿ ಅಲ್ಲ ಎಂದು ನಿರ್ದೇಶನ ನೀಡಿತು. ಅಲ್ಲದೆ, ಮುಂದಿನ ವಿಚಾರಣೆಯ ದಿನಾಂಕದವರೆಗೆ ಆಕೆಯ ವಿರುದ್ಧ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಸೂಚಿಸಿತ್ತು.

ಆಪಾದಿತ ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ತನ್ನ ಮುಂದೆ ಹಾಜರಾಗುವಂತೆ ಹೇಳಿದ ಇ.ಡಿ ಸಮನ್ಸ್ ಅನ್ನು ಮನೇಕಾ ಗಂಭೀರ್ ಅವರು ಪ್ರಶ್ನಿಸಿದ್ದರು ಮತ್ತು ತಾನು ವಾಸಿಸುತ್ತಿರುವ ಕೋಲ್ಕತ್ತಾದಲ್ಲಿನ ಕಚೇರಿಯಲ್ಲಿ ಹಾಜರಾಗಲು ಅವಕಾಶ ನೀಡುವಂತೆ ಏಜೆನ್ಸಿಗೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಅವರನ್ನು ಈ ಹಿಂದೆ ಇ.ಡಿ ಇದೇ ಪ್ರಕರಣದಲ್ಲಿ ವಿಚಾರಣೆ ನಡೆಸಿತ್ತು. ಅಭಿಷೇಕ್ ಬ್ಯಾನರ್ಜಿ ಅವರನ್ನು ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಇ.ಡಿ ಪ್ರಶ್ನಿಸಿದ್ದರೆ, ಗಂಭೀರ್ ಅವರಂತೆ ನ್ಯಾಯಾಲಯದಿಂದ ಇದೇ ರೀತಿಯ ಪರಿಹಾರವನ್ನು ಪಡೆದ ನಂತರ ರುಜಿರಾ ಅವರನ್ನು ಕೋಲ್ಕತ್ತಾದಲ್ಲಿ ವಿಚಾರಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com