‘ನಬನ್ನಾ’ ಅಭಿಯಾನ: ಹಿಂಸೆಗೆ ತಿರುಗಿದ ಪ್ರತಿಭಟನೆ, ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಬಂಗಾಳ ಪೊಲೀಸರಿಂದ ಅಶ್ರುವಾಯು ಪ್ರಯೋಗ
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಪ್ರತಿಭಟನಾ ಮೆರವಣಿಗೆ ಮೂಲಕ ಕೊಲ್ಕತ್ತಾದ ರಾಜ್ಯ ಕಾರ್ಯಾಲಯ ‘ನಬನ್ನಾ’ಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವಿನ ಸಂಘರ್ಷದಿಂದಾಗಿ ಪಶ್ಚಿಮ ಬಂಗಾಳದ ಕೆಲವೆಡೆ ಮಂಗಳವಾರ ರಣರಂಗದ ಪರಿಸ್ಥಿತಿ ನಿರ್ಮಾಣವಾಯಿತು.
Published: 13th September 2022 08:18 PM | Last Updated: 13th September 2022 09:56 PM | A+A A-

ಬ್ಯಾರಿಕೇಡ್ ಹಾಕುವ ಮೂಲಕ ಬಿಜೆಪಿ ಬೆಂಬಲಿಗರನ್ನು ನಿಯಂತ್ರಿಸುತ್ತಿರುವ ಭದ್ರತಾ ಸಿಬ್ಬಂದಿ
ಕೊಲ್ಕತ್ತ: ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಪ್ರತಿಭಟನಾ ಮೆರವಣಿಗೆ ಮೂಲಕ ಕೊಲ್ಕತ್ತಾದ ರಾಜ್ಯ ಕಾರ್ಯಾಲಯ ‘ನಬನ್ನಾ’ಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವಿನ ಸಂಘರ್ಷದಿಂದಾಗಿ ಪಶ್ಚಿಮ ಬಂಗಾಳದ ಕೆಲವೆಡೆ ಮಂಗಳವಾರ ರಣರಂಗದ ಪರಿಸ್ಥಿತಿ ನಿರ್ಮಾಣವಾಯಿತು.
ಈ ಹಿಂಸಾಚಾರದಲ್ಲಿ ಬಿಜೆಪಿಯ ಮೀನಾ ದೇವಿ ಪುರೋಹಿತ್, ಸ್ವಪನ್ ದಾಸ್ ಗುಪ್ತಾ ಸೇರಿದಂತೆ ಬಿಜೆಪಿಯ ಅನೇಕ ಮುಖಂಡರು ಹಾಗೂ ಪೊಲೀಸ್ ಅಧಿಕಾರಿಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ. ಪ್ರತಿಭಟನಾ ಮೆರವಣಿಗೆ ವೇಳೆ ಬಂಗಾಳ ವಿಪಕ್ಷ ನಾಯಕ ಸುವೇಂದು ಅಧಿಕಾರಿ, ಹಿರಿಯ ಮುಖಂಡ ರಾಹುಲ್ ಸಿನ್ಹಾ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿದ್ದು, ನಗರದಲ್ಲಿನ ಅನೇಕ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ನಬನ್ನಾದ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ವಿಪಕ್ಷ ನಾಯಕ ಹಕ್ಕನ್ನು ಪಕ್ಷಪಾತಿ ಪೊಲೀಸರು ಹೇಗೆ ಕಸಿದುಕೊಂಡರು ಎಂಬುದನ್ನು ಪ್ರತಿಯೊಬ್ಬರು ನೋಡಿದ್ದಾರೆ. ಮಹಿಳಾ ಕಾನ್ಸ್ ಟೇಬಲ್ ಒಬ್ಬರಿಂದ ನನ್ನ ಮೇಲೆ ಹಲ್ಲೆಯಾಗಿದೆ. ಇದನ್ನು ಕೂಡಾ ಜನರು ನೋಡಿದ್ದಾರೆ ಎಂದು ಬಂಧನಕ್ಕೂ ಮುನ್ನ ಅಧಿಕಾರಿ ಸುದ್ದಿಗಾರರಿಗೆ ತಿಳಿಸಿದರು.
West Bengal | Police vehicle torched amid BJP's 'Nabanna Chalo' march against the state government, in Kolkata pic.twitter.com/e6jqE3VIEs
— ANI (@ANI) September 13, 2022
ಇದನ್ನೂ ಓದಿ: ಬಿಜೆಪಿಯಿಂದ ‘ನಬನ್ನಾ’ ಮುತ್ತಿಗೆ ಯತ್ನ: ಸುವೇಂದು ಅಧಿಕಾರಿ ಸೇರಿ ಹಲವು ನಾಯಕರು ಪೊಲೀಸ್ ವಶಕ್ಕೆ
ಸಾಂತ್ರಗಚಿಯಲ್ಲಿ ಪೊಲೀಸರು ಕಲ್ಲು ತೂರಾಟದ ಮೂಲದ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ. ಪ್ರತಿಭಟನಾಕಾರರನ್ನು ತಡೆದರಿಂದ ಪೊಲೀಸ್ ಚೌಕಿಯೊಂದು ಹಾನಿಯಾಗಿದೆ. ಹೌರಾ, ಕೊಲ್ಕತ್ತಾದ ಲಾಲ್ ಬಜಾರ್, ಎಂಜಿ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಲಾಲ್ ಬಜಾರ್ ನಲ್ಲಿ ಪೊಲೀಸ್ ವಾಹನವೊಂದಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.