ಕೊಚ್ಚಿ: ಉದ್ಯೋಗ ಕೊಡಿಸುವ ನೆಪದಲ್ಲಿ ದಿನಗಟ್ಟಲೆ ತಮಿಳುನಾಡಿನ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಕೆಲಸ ಕೊಡಿಸುವುದಾಗಿ ಹೇಳಿ ನಗರಕ್ಕೆ ಕರೆತಂದಿದ್ದ ತಮಿಳುನಾಡು ಮೂಲದ ಮಹಿಳೆಯ ಮೇಲೆ ಕೊಚ್ಚಿಯ ವಿವಿಧೆಡೆ ಕೆಲ ವ್ಯಕ್ತಿಗಳು ಸತತವಾಗಿ ಅತ್ಯಾಚಾರ ಎಸಗಿರುವ ಘಟನೆಯ ಕುರಿತು ನಗರ ಪೊಲೀಸರು ವಿಸ್ತೃತ ತನಿಖೆ ಆರಂಭಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಚ್ಚಿ: ಕೆಲಸ ಕೊಡಿಸುವುದಾಗಿ ಹೇಳಿ ನಗರಕ್ಕೆ ಕರೆತಂದಿದ್ದ ತಮಿಳುನಾಡು ಮೂಲದ ಮಹಿಳೆಯ ಮೇಲೆ ಕೊಚ್ಚಿಯ ವಿವಿಧೆಡೆ ಕೆಲ ವ್ಯಕ್ತಿಗಳು ಸತತವಾಗಿ ಅತ್ಯಾಚಾರ ಎಸಗಿರುವ ಘಟನೆಯ ಕುರಿತು ನಗರ ಪೊಲೀಸರು ವಿಸ್ತೃತ ತನಿಖೆ ಆರಂಭಿಸಿದ್ದಾರೆ.

ಘಟನೆ ನಂತರ ಸೋಂಕಿಗೆ ತುತ್ತಾಗಿರುವ ಮಹಿಳೆಗೆ ಕೊಯಮತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

ವಯನಾಡ್‌ನ ಬತೇರಿಯ ಅಬ್ದುಲ್ ಅಜೀಸ್ (49), ಕೊಚ್ಚಿಯ ಎಡಪಲ್ಲಿಯ ಬಿನು ಕೆ.ಜಿ. (50), ತಿರುವನಂತಪುರಂನ ವಲ್ಲಕ್ಕಡವುನ ನಜರ್ ಎಂ (42) ಮತ್ತು ತ್ರಿಸ್ಸೂರ್‌ ಜಿಲ್ಲೆಯ ಕೊಡುಂಗಲ್ಲೂರಿನ ಡಿಲ್ಮನ್ ಟಿ.ವಿ. (32) ಬಂಧಿತರು. ಬಂಧಿತ ಆರೋಪಿಗಳ ವಿರುದ್ಧ ಅತ್ಯಾಚಾರ, ಮಾನವ ಕಳ್ಳಸಾಗಣೆ ಮತ್ತು ಅಕ್ರಮ ಬಂಧನ ಹಾಗೂ ಅನೈತಿಕ ಕಳ್ಳಸಾಗಣೆಗಾಗಿ ಪ್ರಕರಣ ದಾಖಲಾಗಿದೆ.

'ನಾವು ವಸ್ತು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ಆರೋಪಿಗಳ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗಿದೆ. ಕೆಲವು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಸಂತ್ರಸ್ತೆ ಆಗಸ್ಟ್‌ನಲ್ಲಿ ಪೊಲೀಸರನ್ನು ಸಂಪರ್ಕಿಸಿದ್ದಾರೆ' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆ ಪ್ರಕಾರ, ಆರೋಪಿಗಳು ಮಾರ್ಚ್‌ನಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಸಂತ್ರಸ್ತೆಯನ್ನು ಕೊಯಮತ್ತೂರಿನಿಂದ ಇನ್ನೊಬ್ಬ ವ್ಯಕ್ತಿಯ ಮೂಲಕ ಕರೆತಂದಿದ್ದರು. ನಂತರ ಆಕೆಯನ್ನು ಕಲಮಸ್ಸೆರಿಯಲ್ಲಿರುವ ಮನೆಗೆ ಕರೆದುಕೊಂಡು ಹೋಗಿ ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಎಂ.ಜಿ. ರಸ್ತೆ ಬಳಿಯ ಹೋಟೆಲ್‌ಗೆ ಕರೆದೊಯ್ದು ಅಲ್ಲಿ ಆಕೆಯನ್ನು ಅಕ್ರಮವಾಗಿ ಬಂಧಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಅಲ್ಲಿಂದ ಮತ್ತೆ ಆಕೆಯನ್ನು ಮತ್ತೊಂದು ಹೋಟೆಲ್‌ಗೆ ಕರೆದೊಯ್ದು, ಅಲ್ಲಿಯೂ ಆಕೆಗೆ ಲೈಂಗಿಕ ಕಿರುಕುಳ ನೀಡಿ ಬೆದರಿಸಲಾಗಿದೆ. ನಂತರ ಮಹಿಳೆಯನ್ನು ಮೇ 2022 ರಂದು ಕೊಯಮತ್ತೂರಿನ ಕೋವೈ ಮೆಡಿಕಲ್ ಸೆಂಟರ್‌ಗೆ ದಾಖಲಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನನ್ನು ಒಂದು ವಾರಕ್ಕೂ ಹೆಚ್ಚು ಕಾಲ ಬಂಧನದಲ್ಲಿ ಇರಿಸಲಾಗಿತ್ತು ಮತ್ತು ಆರೋಪಿಗಳು ಪದೇ ಪದೆ ಅತ್ಯಾಚಾರ ಎಸಗಿದರು. ಕೊಯಮತ್ತೂರಿಗೆ ಹಿಂತಿರುಗಲು ಆರೋಪಿಯು ನನಗೆ 2000 ರೂಪಾಯಿಯನ್ನು ನೀಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಿಟ್ಟುಹೋದರು ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಇದನ್ನು ತಿರಸ್ಕರಿಸಿರುವ ಆರೋಪಿಗಳು, ಸಂತ್ರಸ್ತೆಯನ್ನು ನಾವು ಎಂದಿಗೂ ಬಂಧನದಲ್ಲಿ ಇರಿಸಿರಲಿಲ್ಲ ಮತ್ತು ತಮ್ಮನ್ನು ಈ ಪ್ರಕರಣದಲ್ಲಿ ಸುಳ್ಳು ಆರೋಪ ಮಾಡಿ ಸಿಲುಕಿಸಲಾಗಿದೆ. ಸಂತ್ರಸ್ತೆಯು ನಗರದ ವಿವಿಧ ಹೋಟೆಲ್‌ಗಳಲ್ಲಿ ವೇಶ್ಯಾವಾಟಿಕೆ ದಂಧೆಯ ಭಾಗವಾಗಿದ್ದರು ಎಂದು ಅವರು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com