ವ್ಯತ್ಯಾಸವೇನಿಲ್ಲ.. ಡಾ. ಸಿಂಗ್ ರೀತಿಯಲ್ಲೇ ಕಾಂಗ್ರೆಸ್ ನ ನೂತನ ಅಧ್ಯಕ್ಷರೂ ರಿಮೋಟ್ ಕಂಟ್ರೋಲ್ಡ್: ಬಿಜೆಪಿ

ಹೊಸ ಅಧ್ಯಕ್ಷರ ಆಯ್ಕೆ ಕಸರತ್ತಿನಲ್ಲಿ ಕಾಂಗ್ರೆಸ್ ನಾಯಕತ್ವ ತಲ್ಲೀನವಾಗಿರುವಂತೆಯೇ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ 'ರಿಮೋಟ್ ಕಂಟ್ರೋಲ್' ಎಂದು ವ್ಯಂಗ್ಯ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಹೊಸ ಅಧ್ಯಕ್ಷರ ಆಯ್ಕೆ ಕಸರತ್ತಿನಲ್ಲಿ ಕಾಂಗ್ರೆಸ್ ನಾಯಕತ್ವ ತಲ್ಲೀನವಾಗಿರುವಂತೆಯೇ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ 'ರಿಮೋಟ್ ಕಂಟ್ರೋಲ್' ಎಂದು ವ್ಯಂಗ್ಯ ಮಾಡಿದೆ.

ಈ ಕುರಿತು ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು, ಗಾಂಧಿಯೇತರರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರೂ ಸಂಪೂರ್ಣ ನಿಯಂತ್ರಣ 'ಆ ಕುಟುಂಬದ್ದೇ' ಆಗಿರುತ್ತದೆ. ನೂತನ ಅಧ್ಯಕ್ಷರು ಗಾಂಧಿ ಕುಟುಂಬದ "ಪ್ರಾಕ್ಸಿ" ಆಗಿರುತ್ತಾರೆ. ಮಾಜಿ ಪ್ರಧಾನಿ "ಮನಮೋಹನ್ ಸಿಂಗ್ ಅವರಂತೆ" ಅವರನ್ನೂ ಗಾಂಧಿ ಕುಟುಂಬ ರಿಮೋಟ್ ಕಂಟ್ರೋಲ್ ಮಾಡುತ್ತದೆ ಎಂದು ಹೇಳಿದ್ದಾರೆ.

ಮುಂದಿನ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸ್ಪರ್ಧೆ ವಿಚಾರ ಚರ್ಚೆಯಾಗುತ್ತಿರುವಂತೆಯೇ ಬಿಜೆಪಿ ಈ ರೀತಿಯ ಪ್ರತಿಕ್ರಿಯೆ ನೀಡಿದೆ.

ಯಾರು ಅಧ್ಯಕ್ಷರಾಗುತ್ತಾರೆ? ಕಾಂಗ್ರೆಸ್ ಶಾಸಕರು ನಿರ್ಧರಿಸಬೇಕಲ್ಲವೇ? ಗಾಂಧಿಯವರಿಗೆ ರಿಮೋಟ್ ಕಂಟ್ರೋಲ್ ಇದ್ದರೆ ಈ ನೆಪಮಾತ್ರ ಚುನಾವಣೆ ಏಕೆ? ಎಂದು ಪೂನವಾಲಾ ಹೇಳಿದ್ದಾರೆ. 'ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷರು ಗಾಂಧಿಗಳ ಪ್ರಾಕ್ಸಿಯಾಗುತ್ತಾರೆ ಮತ್ತು ಮನಮೋಹನ್ ಸಿಂಗ್ ಅವರನ್ನು ಸೋನಿಯಾ ಗಾಂಧಿಯವರಂತೆ ಗಾಂಧಿಗಳು ಹೇಗೆ ರಿಮೋಟ್ ಕಂಟ್ರೋಲ್ ಮಾಡುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಚುನಾವಣಾ ಪ್ರಕ್ರಿಯೆಯು ಕೇವಲ ಕಣ್ಣೊರೆಸುವ ತಂತ್ರಗಾರಿಕೆ ಎಂದು ಪೂನಾವಾಲಾ ಹೇಳಿದ್ದಾರೆ.

ಈ ಹಿಂದೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಯಾರೇ ಮುಂದಿನ ಅಧ್ಯಕ್ಷರಾದರೂ, ರಾಹುಲ್ ಗಾಂಧಿ ಅವರು ಪಕ್ಷದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿರುತ್ತಾರೆ ಎಂದು ಇತ್ತೀಚೆಗೆ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com