ಸೆ. 29ರಂದು ಗುಜರಾತ್‌ನಲ್ಲಿ ವಿಶ್ವದ ಮೊದಲ ಸಿಎನ್‌ಜಿ ಟರ್ಮಿನಲ್‌ಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 29 ರಂದು ಗುಜರಾತ್ ನ ಭಾವನಗರದಲ್ಲಿ ವಿಶ್ವದ ಮೊದಲ ಸಿಎನ್‌ಜಿ ಟರ್ಮಿನಲ್‌ಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 29 ರಂದು ಗುಜರಾತ್ ನ ಭಾವನಗರದಲ್ಲಿ ವಿಶ್ವದ ಮೊದಲ ಸಿಎನ್‌ಜಿ ಟರ್ಮಿನಲ್‌ಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

2019ರಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯಲ್ಲಿ ಸಿಎನ್‌ಜಿ ಟರ್ಮಿನಲ್‌ ನಿರ್ಮಾಣ ಸಂಬಂಧ ಫೋರ್ ಸೈಟ್ ಗ್ರೂಪ್ ಗುಜರಾತ್ ಮ್ಯಾರಿಟೈಮ್ ಬೋರ್ಡ್ (ಜಿಎಂಬಿ) ನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿತ್ತು. 

4024 ಕೋಟಿ ರೂಪಾಯಿ ವೆಚ್ಚದಲ್ಲಿ ಬಂದರನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ವಿಶ್ವದ ಮೊದಲ ಸಿಎನ್‌ಜಿ ಟರ್ಮಿನಲ್‌ಗಾಗಿ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಹೊಂದಿರಲಿದೆ ಮತ್ತು ಅತ್ಯಾಧುನಿಕ ವಿಶ್ವದ ನಾಲ್ಕನೇ ಅತಿದೊಡ್ಡ ಲಾಕ್ ಗೇಟ್ ವ್ಯವಸ್ಥೆಯನ್ನು ಇದು ಹೊಂದಿರುತ್ತದೆ.

ಈ ಬಂದರು ಅಲ್ಟ್ರಾ-ಆಧುನಿಕ ಕಂಟೇನರ್ ಟರ್ಮಿನಲ್, ವಿವಿಧೋದ್ದೇಶ ಟರ್ಮಿನಲ್ ಮತ್ತು ಲಿಕ್ವಿಡ್ ಟರ್ಮಿನಲ್ ಅನ್ನು ಸಹ ಹೊಂದಿರಲಿದ್ದು, ಅಸ್ತಿತ್ವದಲ್ಲಿರುವ ರಸ್ತೆಮಾರ್ಗ ಮತ್ತು ರೈಲ್ವೆ ಜಾಲಕ್ಕೆ ನೇರ ಸಂಪರ್ಕವನ್ನು ಹೊಂದಲಿದೆ. ಇದು ಅತಿದೊಡ್ಡ ಕೈಗಾರಿಕಾ ವಲಯಗಳಿಗೆ, ಸರಕು ಸಾಗಣೆ ಕಾರಿಡಾರ್ ಮತ್ತು ದೇಶದ ಉತ್ತರ ಒಳನಾಡುಗಳಿಗೆ ಸಂಪರ್ಕಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com