ಉತ್ತರ ಪ್ರದೇಶ: ಮದುವೆಗೆ ಬಂದ ಅತಿಥಿಗಳ ಆಧಾರ್ ಕಾರ್ಡ್ ಪರಿಶೀಲನೆ, ವಿಡಿಯೋ ವೈರಲ್!
ಇತ್ತೀಚಿನ ದಿನಗಳಲ್ಲಿ ಮದುವೆಗಳಲ್ಲಿ ಪರಿಚಿತರು, ಅತಿಥಿಗಳಿಗಿಂತ ಅಪರಿಚಿತರೇ ಭಾಗವಹಿಸಿ ಊಟ ಸವಿದು ಹೋಗುವುದು ಹೆಚ್ಚಾಗುತ್ತಿದೆ. ಈ ಕಾರಣ ಮದುವೆಗೆ ಕೆಲವರು ಆಹ್ವಾನ ಪತ್ರಿಕೆ ಕಡ್ಡಾಯ ಮಾಡುತ್ತಾರೆ.
Published: 26th September 2022 04:14 PM | Last Updated: 26th September 2022 04:48 PM | A+A A-

ಸಾಂದರ್ಭಿಕ ಚಿತ್ರ
ಲಖನೌ: ಇತ್ತೀಚಿನ ದಿನಗಳಲ್ಲಿ ಮದುವೆಗಳಲ್ಲಿ ಪರಿಚಿತರು, ಅತಿಥಿಗಳಿಗಿಂತ ಅಪರಿಚಿತರೇ ಭಾಗವಹಿಸಿ ಊಟ ಸವಿದು ಹೋಗುವುದು ಹೆಚ್ಚಾಗುತ್ತಿದೆ. ಈ ಕಾರಣ ಮದುವೆಗೆ ಕೆಲವರು ಆಹ್ವಾನ ಪತ್ರಿಕೆ ಕಡ್ಡಾಯ ಮಾಡುತ್ತಾರೆ. ಉತ್ತರ ಪ್ರದೇಶದ ಮದುವೆಯೊಂದರಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ.
ಹೌದು ಇಬ್ಬರು ಸಹೋದರಿಯರ ಮದುವೆ ಒಂದೇ ಸ್ಥಳದಲ್ಲಿ ಏರ್ಪಡಿಸಲಾಗಿತ್ತು. ಈ ಮದುವೆಯೊಂದರಲ್ಲಿ ಅತಿಥಿಗಳು ಊಟದ ತಟ್ಟೆಗಳನ್ನು ತೆಗೆದುಕೊಳ್ಳುವ ಮೊದಲು ತಮ್ಮ ಆಧಾರ್ ಕಾರ್ಡ್‌ಗಳನ್ನು ತೋರಿಸುವಂತೆ ಕೇಳಿದ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಾಸನಪುರದಲ್ಲಿ ನಡೆದಿದೆ.
ಮದುವೆಯಲ್ಲಿ ಅತಿಥಿಗಳು ಹೊರತಾಗಿ ಅಪರಿಚಿತರು ಭಾಗವಹಿಸಿದ್ದಾರೆ ಎಂಬ ಅನುಮಾನದ ಮೇಲೆ ಊಟಕ್ಕಿಂತ ಮೊದಲು ಆಧಾರ್ ಕಾರ್ಡ್ ತೋರಿಸಲು ಹೇಳಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನು ಓದಿ: ಪತಿ, ಅವನಲ್ಲ ಅವಳು, ಮದುವೆಯಾಗಿ 8 ವರ್ಷಗಳ ಬಳಿಕ ಬಹಿರಂಗವಾದ ಸತ್ಯ!
ಆಧಾರ್ ಕಾರ್ಡ್ ಇಲ್ಲದೇ ಬಂದಿದ್ದ ಹಲವಾರು ಮಂದಿ ಅತಿಥಿಗಳು ಇದನ್ನು ಅವಮಾನವೆಂಬಂತೆ ತಿಳಿದು ಊಟ ಮಾಡದೆ ಸ್ಥಳದಿಂದ ನಿರ್ಗಮಿಸಿದರೆ, ಆಧಾರ್ ಕಾರ್ಡ್ ಹೊಂದಿದ್ದ ಇನ್ನೂ ಹಲವರು ಊಟ ಸವಿದಿದ್ದಾರೆ.
In a seemingly bizarre incident, guests at a #wedding in Uttar Pradesh's #Amroha district were asked to show their #Aadhaar cards before they were allowed to pick up dinner plates.
— IANS (@ians_india) September 25, 2022
The incident took place in Hasanpur where two sisters were getting married at the same venue. pic.twitter.com/9IfenucXUH