ಸೂರತ್ ಒಗ್ಗಟ್ಟಿನ ಸಂಕೇತವಾಗಿದೆ, ಇದೊಂದು ಮಿನಿ-ಇಂಡಿಯಾ: ಪ್ರಧಾನಿ ಮೋದಿ
ಗುಜರಾತ್‌ನ ಸೂರತ್‌ನಲ್ಲಿ 3,400 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಿದರು.
Published: 29th September 2022 03:23 PM | Last Updated: 29th September 2022 04:24 PM | A+A A-

ಪ್ರಧಾನಿ ಮೋದಿ
ಸೂರತ್: ಗುಜರಾತ್‌ನ ಸೂರತ್‌ನಲ್ಲಿ 3,400 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಿದರು.
ಎರಡು ದಿನಗಳ ಕಾಲ ಗುಜರಾತ್ ರಾಜ್ಯಕ್ಕೆ ಭೇಟಿ ನೀಡಿರುವ ಅವರು, ರಾಜ್ಯದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಯೊಜನೆಗಳ ಲೋಕಾರ್ಪಣೆ ಬಳಿಕ ಮಾತನಾಡಿದ ಮೋದಿ ಅವರು, ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡುತ್ತಿರುವ ಡೈನಾಮಿಕ್ ಸಿಟಿ ಸೂರತ್‌ನಲ್ಲಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಸೂರತ್ ಒಗ್ಗಟ್ಟಿನ ಸಂಕೇತವಾಗಿದೆ ಎಂದು ಪ್ರಧಾನಿ ಹೇಳಿದರು.
ಗುಜರಾತಿನಲ್ಲಿ ಡಬಲ್ ಇಂಜಿನ್ ಸರ್ಕಾರ ರಚನೆಯಾದ ನಂತರ ಮನೆಗಳ ನಿರ್ಮಾಣವೂ ಚುರುಕುಗೊಂಡಿದ್ದು, ಸೂರತ್‌ನಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ, ದೇಶದಲ್ಲಿ ಇದುವರೆಗೆ ಸುಮಾರು 4 ಕೋಟಿ ಬಡ ರೋಗಿಗಳು ಉಚಿತ ಚಿಕಿತ್ಸೆ ಪಡೆದಿದ್ದಾರೆ” ಎಂದು ಹೇಳಿದರು.
ಭಾರತದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ 4 ಕೋಟಿಗೂ ಹೆಚ್ಚು ಜನರು ಉಚಿತ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಈ ಪೈಕಿ 32 ಲಕ್ಷ ಗುಜರಾತ್‌ನವರು ಮತ್ತು 1.25 ಲಕ್ಷ ಸೂರತ್‌ನವರು ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನು ಓದಿ: ಮೋದಿ, ಅಮಿತ್ ಶಾ ಅವರ ಆಯ್ಕೆಯ ಅಭ್ಯರ್ಥಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬೇಡಿ: ಗುಜರಾತ್ ಬಿಜೆಪಿ ಮುಖ್ಯಸ್ಥ
ನವರಾತ್ರಿ ಆಚರಣೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಗುಜರಾತ್‌ನಲ್ಲಿ ಮೂಲಸೌಕರ್ಯ, ಕ್ರೀಡೆ ಮತ್ತು ಆಧ್ಯಾತ್ಮಿಕ ತಾಣಗಳಿಗೆ ಅಡಿಪಾಯ ಹಾಕುವುದು ನನ್ನ ಸೌಭಾಗ್ಯ. ‘ಜನ್ ಭಾಗಿದರಿ’ ಮತ್ತು ಏಕತೆಗೆ ಸೂರತ್ ಉತ್ತಮ ಉದಾಹರಣೆಯಾಗಿದೆ. ಭಾರತದ ಎಲ್ಲಾ ವರ್ಗದ ಜನರು ಸೂರತ್‌ನಲ್ಲಿ ವಾಸಿಸುತ್ತಿದ್ದಾರೆ. ಇದೊಂದು ಮಿನಿ-ಇಂಡಿಯಾ ಎಂದು ಕರೆದಿದ್ದಾರೆ.
ಸೂರತ್ ಅಭಿವೃದ್ಧಿ ಶ್ಲಾಘಿಸಿದ ಮೋದಿ
ಸೂರತ್ ನಗರವು ಜನರ ಒಗ್ಗಟ್ಟು ಮತ್ತು ಸಾರ್ವಜನಿಕ ಸಹಭಾಗಿತ್ವಕ್ಕೆ ಅದ್ಭುತ ಉದಾಹರಣೆಯಾಗಿದೆ. ಸೂರತ್ ನಲ್ಲಿ ಭಾರತದ ಎಲ್ಲಾ ರೀತಿಯ ಜನರು ವಾಸಿಸುತ್ತಿದ್ದಾರೆ. “ಈ ಶತಮಾನದ ಆರಂಭದ ದಶಕಗಳಲ್ಲಿ, ನಾವು 3 ಪಿ ಮಾದರಿಯನ್ನು (People, Public, Private) ಚರ್ಚಿಸಿದ್ದೆವು. ಆದರೆ ಸೂರತ್ ವಿಚಾರದಲ್ಲಿ ನಾಲ್ಕು ಪಿ ಗಳ (People, Public, Private and Partnership) ಬಗ್ಗೆ ಯೋಚಿಸಬೇಕು. ಈ ಮಾದರಿಯು ಸೂರತ್ ಅನ್ನು ವಿಶೇಷಗೊಳಿಸುತ್ತದೆ ಎಂದು ಹೇಳಿದರು.
ಸೂರತ್‌ನ ಅಭಿವೃದ್ಧಿಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, “ಸೂರತ್‌ನಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ನಗರದ ಸಂಸ್ಕೃತಿ, ಸಮೃದ್ಧಿ ಮತ್ತು ಆಧುನಿಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಎರಡು ದಿನ ಪ್ರವಾಸ
ಗುರುವಾರ ಮತ್ತು ಶುಕ್ರವಾರದಂದು ಅಹಮದಾಬಾದ್, ಗಾಂಧಿನಗರ, ಸೂರತ್, ಭಾವನಗರ ಮತ್ತು ಅಂಬಾಜಿಗೆ ಪ್ರಧಾನಿ ಭೇಟಿ ನೀಡಲಿದ್ದು, ಅಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಕೆಲವನ್ನು ಲೋಕಾರ್ಪಣೆಗೊಳಿಸಲಿದ್ದಾರೆ.