ಮೋದಿ, ಅಮಿತ್ ಶಾ ಅವರ ಆಯ್ಕೆಯ ಅಭ್ಯರ್ಥಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬೇಡಿ: ಗುಜರಾತ್ ಬಿಜೆಪಿ ಮುಖ್ಯಸ್ಥ

ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನಿರ್ಧಾರವನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದು ಗುಜರಾತ್ ಬಿಜೆಪಿ ಮುಖ್ಯಸ್ಥ ಸಿಆರ್ ಪಾಟೀಲ್ ಆನಂದ್‌ನಲ್ಲಿರುವ ಪಕ್ಷದ 'ಪೇಜ್ ಸಮಿತಿ' ಸದಸ್ಯರಿಗೆ ಗುಂಪುಗಾರಿಕೆ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.
ಗುಜರಾತ್ ಬಿಜೆಪಿ ಮುಖ್ಯಸ್ಥ ಸಿಆರ್ ಪಾಟೀಲ್
ಗುಜರಾತ್ ಬಿಜೆಪಿ ಮುಖ್ಯಸ್ಥ ಸಿಆರ್ ಪಾಟೀಲ್

ಅಹಮದಾಬಾದ್: ಪಕ್ಷದ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನಿರ್ಧಾರವನ್ನು ಪ್ರಶ್ನಿಸುವ ಹಕ್ಕಿಲ್ಲ ಎಂದು ಗುಜರಾತ್ ಬಿಜೆಪಿ ಮುಖ್ಯಸ್ಥ ಸಿಆರ್ ಪಾಟೀಲ್ ಆನಂದ್‌ನಲ್ಲಿರುವ ಪಕ್ಷದ 'ಪೇಜ್ ಸಮಿತಿ' ಸದಸ್ಯರಿಗೆ ಗುಂಪುಗಾರಿಕೆ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

ಆನಂದ ಜಿಲ್ಲೆಯಲ್ಲಿನ ‘ಪೇಜ್ ಸಮಿತಿ’ ಸದಸ್ಯರನ್ನು ಉದ್ದೇಶಿಸಿ ಸೋಮವಾರ ಜಿಲ್ಲಾ ‘ಕಮಲಂ’ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪನ್ನಾ ಪ್ರಮುಖ್’ (ಪೇಜ್ ಉಸ್ತುವಾರಿ) ಪರಿಕಲ್ಪನೆಯು ಅಮಿತ್ ಶಾ ಕೂಸು, ಇದನ್ನು ಮೊದಲು 2007ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಯಿತು ಮತ್ತು ನಂತರ ಇತರ ರಾಜ್ಯಗಳಲ್ಲಿ ಪುನರಾವರ್ತಿಸಲಾಗಿದೆ. ಸುಮಾರು 30 ಮತದಾರರ ಹೆಸರನ್ನು ಒಳಗೊಂಡಿರುವ ಮತದಾರರ ಪಟ್ಟಿಯ ಒಂದು ಪುಟದ (ಮುಂಭಾಗ ಮತ್ತು ಹಿಂದೆ) ಮುಖ್ಯಸ್ಥರಾಗಿ ‘ಪನ್ನಾ ಪ್ರಮುಖ್’ ಕಾರ್ಯನಿರ್ವಹಿಸುತ್ತಾರೆ.

ಮತದಾರರ ಪಟ್ಟಿಯಲ್ಲಿ ಪಟ್ಟಿ ಮಾಡಲಾದ ಮತದಾರರು ಮತದಾನದ ದಿನದಂದು ತಮ್ಮ ಮತವನ್ನು ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳುವುದು ಪನ್ನಾ ಪ್ರಮುಖರ ಜವಾಬ್ದಾರಿಯಾಗಿದೆ. ಅವರು ತಮ್ಮ ಪುಟದಲ್ಲಿನ ಮತದಾರರೊಂದಿಗೆ ನಿಯಮಿತ ಸಂಪರ್ಕವನ್ನು ಸಾಧಿಸಬೇಕು ಮತ್ತು ಕೇಸರಿ ಪಕ್ಷಕ್ಕೆ ಮತ ಹಾಕುವಂತೆ ಅವರನ್ನು ಪ್ರೇರೇಪಿಸಬೇಕು.

ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದು, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಕೂಡ ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಬಿಜೆಪಿ ಕೂಡ ತನ್ನ ಅಭ್ಯರ್ಥಿಗಳನ್ನು ಘೋಷಿಸುವ ಒತ್ತಡದಲ್ಲಿದೆ.

'ಯಾರಿಗೆ ಟಿಕೆಟ್ ಸಿಗುತ್ತದೆ ಎಂದು ಚಿಂತಿಸಬೇಡಿ. ಅದನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನಿರ್ಧರಿಸುತ್ತಾರೆ. ಟಿಕೆಟ್ ಹಂಚಿಕೆ ಮಾಡುವ ಅಧಿಕಾರ ನನಗಿಲ್ಲ. ಕೆಲವೊಮ್ಮೆ ಹಲವು ಸಮರ್ಥ ಟಿಕೆಟ್ ಆಕಾಂಕ್ಷಿಗಳು ನಿರಾಶೆಗೊಂಡಿದ್ದಾರೆ. ಅವರು ಚಿಂತಿಸುವ ಅವಶ್ಯಕತೆ ಇಲ್ಲ. ಪ್ರತಿ ಟಿಕೆಟ್ ಆಕಾಂಕ್ಷಿಗಳ ಮಾಹಿತಿಯನ್ನು ಪಕ್ಷವು ದೆಹಲಿಗೆ ಕಳುಹಿಸಲಿದೆ. ಆಕಾಂಕ್ಷಿಗಳು ದೂರುಗಳಿದ್ದರೆ ಇಲ್ಲಿಗೆ ಭೇಟಿ ನೀಡುವ ಪಕ್ಷದ ವೀಕ್ಷಕರ ಮುಂದೆ ಇಡಬಹುದು' ಎಂದು ಹೇಳಿದರು.

ಪ್ರಧಾನಿ ಮೋದಿ ಗುಜರಾತಿನ ‘ಭಗೀರಥ’ ಎಂದ ಅಮಿತ್ ಶಾ

ಅಹಮದಾಬಾದ್‌ಗೆ ನರ್ಮದಾ ನದಿ ನೀರು ತಂದಂತೆ ಪ್ರಧಾನಿ ಮೋದಿ ಭಗೀರಥ ಕೆಲಸ ಮಾಡಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ. ಗುಜರಾತ್‌ನ ಅಹಮದಾಬಾದ್ ಜಿಲ್ಲೆಯ ಬಾಲವಾದಲ್ಲಿ ನಡೆದ ರೈತ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, '1964 ರಿಂದ ಕಾಂಗ್ರೆಸ್ ನರ್ಮದಾ ಅಣೆಕಟ್ಟು ಯೋಜನೆಗೆ ಕಾಲಹರಣ ಮಾಡಿತ್ತು. ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿ ಆದ ಕೂಡಲೇ ಅಹಮದಾಬಾದ್‌ ಜಿಲ್ಲೆಗೆ ನರ್ಮದಾದಿಂದ ನೀರು ತರಲು ಶ್ರಮಿಸಿದರು. ನರೇಂದ್ರ ಮೋದಿಯವರು ಗುಜರಾತಿನ ಭಗೀರಥರಾದರು' ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com