ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಹೆಚ್ಚಿಸಿದ ಬಿಜೆಪಿ, ಯುಪಿಎ ಸರ್ಕಾರದ ಅವಧಿಯ ಭ್ರಷ್ಟಾಚಾರದ ವಿಡಿಯೋ ಬಿಡುಗಡೆ

2024ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಮೇಲೆ ಹೊಸ ದಾಳಿಯನ್ನು ಪ್ರಾರಂಭಿಸಿರುವ ಬಿಜೆಪಿ ಭಾನುವಾರ ಹೊಸ ವಿಡಿಯೋ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ತನ್ನ ಆಡಳಿತದಲ್ಲಿ ಜನರ ಹಣವನ್ನು 'ದರೋಡೆ' ಮಾಡಿದೆ ಎಂದು ಆರೋಪಿಸಿದೆ.
ಬಿಜೆಪಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದ ಸ್ಕ್ರೀನ್ ಶಾಟ್
ಬಿಜೆಪಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದ ಸ್ಕ್ರೀನ್ ಶಾಟ್

ನವದೆಹಲಿ: 2024ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ಮೇಲೆ ಹೊಸ ದಾಳಿಯನ್ನು ಪ್ರಾರಂಭಿಸಿರುವ ಬಿಜೆಪಿ ಭಾನುವಾರ ಹೊಸ ವಿಡಿಯೋ ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ತನ್ನ ಆಡಳಿತದಲ್ಲಿ ಜನರ ಹಣವನ್ನು 'ದರೋಡೆ' ಮಾಡಿದೆ ಎಂದು ಆರೋಪಿಸಿದೆ.

'ಕಾಂಗ್ರೆಸ್ ಫೈಲ್ಸ್' ಶೀರ್ಷಿಕೆಯ ಸರಣಿಯ ಮೊದಲ ವಿಡಿಯೋದಲ್ಲಿ ಬಿಜೆಪಿಯು, ಕಾಂಗ್ರೆಸ್ 48,20,69,00,00,000 ರೂಪಾಯಿಗಳ ಭ್ರಷ್ಟಾಚಾರ ಮತ್ತು ಹಗರಣಗಳನ್ನು ಮಾಡಿದೆ ಎಂದು ಆರೋಪಿಸಿದೆ. ಹಗರಣದಲ್ಲಿ ಕಳೆದುಹೋದ ಹಣವನ್ನು 300 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು, 24 ಐಎನ್‌ಎಸ್ ವಿಕ್ರಾಂತ್ ತಯಾರಿಸಲು ಮತ್ತು 1000 ಮಂಗಳಯಾನ ಕಾರ್ಯಾಚರಣೆಗಳನ್ನು ನಿರ್ವಹಿಸಲು ಬಳಸಬಹುದಿತ್ತು ಎಂದು ಬಿಜೆಪಿ ಹೇಳಿದೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ 2004 ಮತ್ತು 2014ರ ನಡುವಿನ ಅವಧಿಯು 'ಕಳೆದುಹೋದ ದಶಕ' ಎಂದು ಬಿಜೆಪಿ ಹೇಳಿದೆ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ದುರುಪಯೋಗಪಡಿಸಿಕೊಂಡ ಮೊತ್ತವು ದೇಶದ ಪ್ರಗತಿಗೆ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಬಹುದಿತ್ತು ಎಂದಿರುವ ಬಿಜೆಪಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದೆ. 'ಭ್ರಷ್ಟಾಚಾರದ ನಂತರ ಭ್ರಷ್ಟಾಚಾರ'ಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದೆ.

ಪ್ರತಿಪಕ್ಷ ನಾಯಕರನ್ನು ಗುರಿಯಾಗಿಸಲು ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ ಕೆಲವೇ ದಿನಗಳಲ್ಲಿ ಈ ವಿಡಿಯೋವನ್ನು ಬಿಡುಗಡೆಯಾಗಿದೆ. 

ಕಲ್ಲಿದ್ದಲು ಹಗರಣ 1.86 ಲಕ್ಷ ಕೋಟಿ ರೂಪಾಯಿ, ನರೇಗಾದಲ್ಲಿ 10,000 ಕೋಟಿ ರೂಪಾಯಿ ಹಗರಣ, 70,000 ಕೋಟಿ ರೂಪಾಯಿ ಮೌಲ್ಯದ ಕಾಮನ್ ವೆಲ್ತ್ ಹಗರಣ, 1.76 ಲಕ್ಷ ಕೋಟಿ ರೂಪಾಯಿ ಮೌಲ್ಯದ 2G ಸ್ಪೆಕ್ಟ್ರಮ್ ಹಗರಣ ನಡೆಸಿದೆ. ವಿಡಿಯೋ ಸರಣಿಯ ಎರಡನೇ ಸಂಚಿಕೆಯಲ್ಲಿ 2 ಕೋಟಿ ರೂಪಾಯಿ ಬೆಲೆಯ ಪೇಂಟಿಂಗ್ ಮತ್ತು ಇತರ ಭ್ರಷ್ಟಾಚಾರ ಕಥೆಗಳ ವಿವರಗಳೊಂದಿಗೆ ಶೀಘ್ರದಲ್ಲೇ ಬರಲಿದೆ ಎಂದು ಬಿಜೆಪಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com