ಪ್ರಜಾಪ್ರಭುತ್ವದ ಬಗ್ಗೆ ಹೆಚ್ಚು ಮಾತನಾಡುವ ಮೋದಿ ಸರ್ಕಾರ, ಮಾತಿನಂತೆ ನಡೆಯುವುದಿಲ್ಲ; ಮಲ್ಲಿಕಾರ್ಜುನ ಖರ್ಗೆ

ಸರ್ಕಾರ ಪ್ರಜಾಪ್ರಭುತ್ವದ ಬಗ್ಗೆ ಹೆಚ್ಚು ಮಾತನಾಡುತ್ತದೆ. ಆದರೆ, ಅವರು ಹೇಳಿದ್ದು ಅವರ ಕಾರ್ಯಗಳಲ್ಲಿ ಕಾಣಿಸುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.
ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ.

ನವದೆಹಲಿ: ಸರ್ಕಾರ ಪ್ರಜಾಪ್ರಭುತ್ವದ ಬಗ್ಗೆ ಹೆಚ್ಚು ಮಾತನಾಡುತ್ತದೆ. ಆದರೆ, ಅವರು ಹೇಳಿದ್ದು ಅವರ ಕಾರ್ಯಗಳಲ್ಲಿ ಕಾಣಿಸುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಖರ್ಗೆ ಅವರು, ಬಜೆಟ್ ಅಧಿವೇಶನವನ್ನು ವ್ಯರ್ಥ ಮಾಡುವುದು ಸರ್ಕಾರದ ಉದ್ದೇಶವಾಗಿತ್ತು. ಸರ್ಕಾರ ಪ್ರಜಾಪ್ರಭುತ್ವದ ಬಗ್ಗೆ ಸಾಕಷ್ಟು ಮಾತನಾಡುತ್ತದೆ, ಆದರೆ ಅವರು ಹೇಳಿದಂತೆ ನಡೆಯುವುದಿಲ್ಲ. ಆದರೆ, ಪ್ರತಿಪಕ್ಷಗಳು ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕಾಗಿ ಒಗ್ಗಟ್ಟಿನಿಂದ ಹೋರಾಡುತ್ತಿವೆ ಎಂದು ಹೇಳಿದರು.

50 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಅನ್ನು ಕೇವಲ 12 ನಿಮಿಷಗಳಲ್ಲಿ ಅಂಗೀಕರಿಸಲಾಗಿದೆ, ಆದರೆ, ಸರ್ಕಾರ ಮಾತ್ರ ವಿರೋಧ ಪಕ್ಷಗಳಿಗೆ ಆಸಕ್ತಿಯಿಲ್ಲ ಎಂದು ಆರೋಪಿಸುತ್ತದೆ. ಈ ಮೂಲಕ ಸದನದಲ್ಲಿ ಗದ್ದಲ ಏರ್ಪಡುವಂತೆ ಮಾಡುತ್ತಾರೆ. ಸದನದಲ್ಲಿ ಸೃಷ್ಟಿಯಾದ ಗದ್ದಲ ಆಡಳಿತ ಪಕ್ಷದಿಂದ ಆಗಿದೆ. ನಾವು ಬೇಡಿಕೆ ಇಟ್ಟಾಗಲೆಲ್ಲ ನಮಗೆ ಮಾತನಾಡಲು ಅವಕಾಶ ನೀಡಲಿಲ್ಲ. 52 ವರ್ಷಗಳ ನನ್ನ ಸಾರ್ವಜನಿಕ ಜೀವನದಲ್ಲಿ ಈ ರೀತಿ ನಡೆಯುತ್ತಿರುವುದು ಇದೇ ಮೊದಲು. ಈ ಹಿಂದೆಂದೂ ಈ ರೀತಿಯಾಗಿರಲಿಲ್ಲ ಎಂದು ಕಿಡಿಕಾರಿದರು.

ಬಜೆಟ್ ಅಧಿವೇಶನವನ್ನು ವ್ಯರ್ಥ ಮಾಡುವುದು ಸರ್ಕಾರದ ಉದ್ದೇಶವಾಗಿತ್ತು. ಇದನ್ನು ನಾವು ಖಂಡಿಸುತ್ತೇವೆ. ಇದು ಹೀಗೆಯೇ ಮುಂದುವರೆದಿದ್ದೇ ಆದರೆ, ಪ್ರಜಾಪ್ರಭುತ್ವ ಅಂತ್ಯಗೊಳ್ಳುತ್ತದೆ. ನಾವು ಸರ್ವಾಧಿಕಾರದತ್ತ ಸಾಗುತ್ತೇವೆಂದು ಎಚ್ಚರಿಸಿದ್ದಾರೆ.

ಅದಾನಿ ವಿಷಯಜದ ಕುರಿತು 18 ರಿಂದ 19 ವಿರೋಧ ಪಕ್ಷಗಳು ಧ್ವನಿ ಎತ್ತಿವೆ. ಅದಾನಿಯವರ ಸಂಪತ್ತು ಕೇವಲ 2 ರಿಂದ 2.5 ವರ್ಷಗಳ ಅವಧಿಯಲ್ಲಿ 12 ಲಕ್ಷ ಕೋಟಿ ರೂ.ಗೆ ಹೇಗೆ ಹೆಚ್ಚಾಯಿತು ಎಂದು ಪ್ರಶ್ನಿಸಿದ್ದಾರೆ.

ಅದಾನಿ ವಿಚಾರವನ್ನು ಜೆಪಿಸಿ ತನಿಖೆಗೆ ಒಪ್ಪಿಸಲು ಸರ್ಕಾರ ಹೆದರುತ್ತಿರುವುದೇಕೆ? ಇದರಲ್ಲಿ ಏನೋ ಮರ್ಮವಿದೆ. ಹೀಗಾಗಿಯೇ ಸರ್ಕಾರ ಜೆಪಿಸಿ ತನಿಖೆಗೆ ಒಪ್ಪಿಸುತ್ತಿಲ್ಲ. ಅದಾನಿ ವಿಚಾರವನ್ನು ಪ್ರಸ್ತಾಪಿಸಿದಾಗಲೆಲ್ಲಾ ಸರ್ಕಾರ ಲಂಡನ್ ನಲ್ಲಿ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಸಂಬಂಧ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತಾ ವಿಷಯಾಂತರ ಮಾಡುತ್ತಾರೆ.  ಅದಾನಿ ಪ್ರಕರಣದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಜೆಪಿಸಿ ತನಿಖೆಗೆ ಒತ್ತಾಯಿಸಲಾಗುತ್ತಿದೆ. ಇದರಿಂದ ವಿರೋಧ ಪಕ್ಷಗಳ ಸಂಸದರು ಕೂಡ ದಾಖಲೆಗಳ ಪರಿಶೀಲನೆಗೆ ಅವಕಾಶ ಪಡೆದುಕೊಳ್ಳುತ್ತಾರೆಂದು ಹೇಳಿದರು.

ಇದೇ ವೇಳೆ ರಾಹುಲ್ ಗಾಂಧಿಯವರ ಅನರ್ಹತೆ ವಿಚಾರ ಕುರಿತು ಮಾತನಾಡಿದ ಅವರು, "ಮಿಂಚಿನ ವೇಗದಲ್ಲಿ" ರಾಹುಲ್ ಗಾಂಧಿಯವರನ್ನು ಅನರ್ಹತೆಗೊಳಿಸಲಾಯಿತು. ಬಿಜೆಪಿ ಸಂಸದರೊಬ್ಬರನ್ನೂ ಕೂಡ ಈ ಹಿಂದೆ ದೋಷಿ ಎಂದು ತೀರ್ಪೂ ನೀಡಿದ್ದ ನ್ಯಾಯಾಲಯ ಅವರಿಗೆ 3 ವರ್ಷ ಶಿಕ್ಷೆ ವಿಧಿಸಿತ್ತು. ಶಿಕ್ಷೆಯಾಗಿ 16 ದಿನಗಳಾದರೂ ಅವರನ್ನು ಅನರ್ಹಗೊಳಿಸಲಾಗಿರಲಿಲ್ಲ ಎಂದು ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com