ಮುದ್ರಾ ಯೋಜನೆಯಡಿ ಶೇ 83ರಷ್ಟು 50 ಸಾವಿರ ರೂ. ಸಾಲ: ಆ ಮೊತ್ತದಿಂದ ಯಾವ ರೀತಿಯ ವ್ಯವಹಾರ ಮಾಡಬಹುದು: ಪಿ. ಚಿದಂಬರಂ

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಎಂಟು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಭಾನುವಾರ, ಈ ಯೋಜನೆಯಡಿ ನೀಡಲಾದ ಶೇ 83 ರಷ್ಟು ಸಾಲಗಳು 50,000 ರೂ.ಗಿಂತ ಕಡಿಮೆಯಿವೆ. ಇದು ಮೊತ್ತದ ಸಾಲದಿಂದ ಇಂದು ಯಾವ ರೀತಿಯ ವ್ಯವಹಾರವನ್ನು ಮಾಡಬಹುದು ಎಂದು ಪ್ರಶ್ನಿಸಿದ್ದಾರೆ.
ಪಿ ಚಿದಂಬರಂ
ಪಿ ಚಿದಂಬರಂ

ನವದೆಹಲಿ: ಪ್ರಧಾನ ಮಂತ್ರಿ ಮುದ್ರಾ ಯೋಜನೆ ಎಂಟು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು ಭಾನುವಾರ, ಈ ಯೋಜನೆಯಡಿ ನೀಡಲಾದ ಶೇ 83 ರಷ್ಟು ಸಾಲಗಳು 50,000 ರೂ.ಗಿಂತ ಕಡಿಮೆಯಿವೆ. ಇದು ಮೊತ್ತದ ಸಾಲದಿಂದ ಇಂದು ಯಾವ ರೀತಿಯ ವ್ಯವಹಾರವನ್ನು ಮಾಡಬಹುದು ಎಂದು ಪ್ರಶ್ನಿಸಿದ್ದಾರೆ.

ಎಂಟು ವರ್ಷಗಳ ಹಿಂದೆ ಭಾರತದ ಯಾವುದೇ ನಾಗರಿಕರಿಗೆ ಕೃಷಿಯೇತರ ಆದಾಯದ ಚಟುವಟಿಕೆಗೆ ಹಣ ನೀಡಲು ಪ್ರಾರಂಭಿಸಲಾದ ಮುದ್ರಾ ಯೋಜನೆಯಡಿ 40.82 ಕೋಟಿ ಫಲಾನುಭವಿಗಳಿಗೆ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು 23.2 ಲಕ್ಷ ಕೋಟಿ ರೂ. ಸಾಲವನ್ನು ಒದಗಿಸಿವೆ.

ಕಾರ್ಪೊರೇಟ್ ಅಲ್ಲದ, ಕೃಷಿಯೇತರ ಸಣ್ಣ ಮತ್ತು ಸೂಕ್ಷ್ಮ ಉದ್ಯಮಿಗಳಿಗೆ ಆದಾಯ ಒದಗಿಸಲು 10 ಲಕ್ಷ ರೂ. ವರೆಗಿನ ಸಾಲ ನೀಡುವ ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅನ್ನು 2015ರ ಏಪ್ರಿಲ್ 8 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. 

ಮುದ್ರಾ ಸಾಲ ಯೋಜನೆಯಡಿ ಎಂಟು ವರ್ಷಗಳಲ್ಲಿ 23.2 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ನೀಡಲಾಗಿದೆ. ಅದರಲ್ಲಿ ಶೇ 83 ರಷ್ಟು ಸಾಲಗಳು 50,000 ರೂ.ಗಿಂತ ಕಡಿಮೆಯಿರುವುದನ್ನು ಗಮನಿಸಬಹುದು. ಅದು 'ಆಕರ್ಷಕ'ವಾಗಿದೆ ಎಂದು ಚಿದಂಬರಂ ಟ್ವೀಟ್‌ನಲ್ಲಿ ಹೇಳಿದ್ದಾರೆ. 

ಅಂದರೆ, 50,000 ಅಥವಾ ಅದಕ್ಕಿಂತ ಕಡಿಮೆ ಮೊತ್ತದಲ್ಲಿ 19,25,600 ಕೋಟಿ ರೂ. ಸಾಲವನ್ನು ನೀಡಲಾಗಿದೆ. 50,000 ರೂಪಾಯಿ ಸಾಲದಿಂದ ಇಂದು ಯಾವ ರೀತಿಯ ವ್ಯವಹಾರವನ್ನು ಮಾಡಬಹುದು ಎಂದು ನನಗೆ ಆಶ್ಚರ್ಯವಾಗುತ್ತದೆ ಎಂದು ಮಾಜಿ ಹಣಕಾಸು ಸಚಿವರು ಹೇಳಿದ್ದಾರೆ.

ಪಿಎಂಎಂವೈ ಅಡಿಯಲ್ಲಿ ಸಾಲಗಳನ್ನು ಮೆಂಬರ್ ಲೆಂಡಿಂಗ್ ಇನ್‌ಸ್ಟಿಟ್ಯೂಷನ್ಸ್‌ಗಳಾದ ಬ್ಯಾಂಕ್‌ಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿಗಳು), ಕಿರು ಹಣಕಾಸು ಸಂಸ್ಥೆಗಳು (ಎಂಎಫ್ಐಗಳು) ಮತ್ತು ಇತರ ಹಣಕಾಸು ಮಧ್ಯವರ್ತಿಗಳು ನೀಡುತ್ತವೆ ಎಂದು ಹಣಕಾಸು ಸಚಿವಾಲಯ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com