ನ್ಯಾಯಾಲಯಕ್ಕೆ ಸುಳ್ಳು ಹೇಳಿಕೆ: ಸಿಬಿಐ, ಇಡಿ ವಿರುದ್ಧ ಮೊಕದ್ದಮೆ ಹೂಡುತ್ತೇನೆ ಎಂದ ಕೇಜ್ರಿವಾಲ್

ಸುಳ್ಳು ಸಾಕ್ಷಿ ಮತ್ತು ನ್ಯಾಯಾಲಯಗಳಲ್ಲಿ ಸುಳ್ಳು ಅಫಿಡವಿಟ್ ಸಲ್ಲಿಸಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಮೊಕದ್ದಮೆ ಹೂಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Updated on

ನವದೆಹಲಿ: ಸುಳ್ಳು ಸಾಕ್ಷಿ ಮತ್ತು ನ್ಯಾಯಾಲಯಗಳಲ್ಲಿ ಸುಳ್ಳು ಅಫಿಡವಿಟ್ ಸಲ್ಲಿಸಿದ ಆರೋಪದ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಮೊಕದ್ದಮೆ ಹೂಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಗೆ ಸಿಬಿಐ ಸಮನ್ಸ್ ನೀಡಿದ್ದು, ತನಿಖಾ ತಂಡದ ಪ್ರಶ್ನೆಗಳಿಗೆ ಉತ್ತರಿಸಲು ಭಾನುವಾರ ಬೆಳಗ್ಗೆ 11 ಗಂಟೆಗೆ ಬೆಳಗ್ಗೆ 11 ಗಂಟೆಗೆ ಏಜೆನ್ಸಿ ಪ್ರಧಾನ ಕಚೇರಿಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ಸಂಸ್ಥೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಈಗಾಗಲೇ ಬಂಧಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಕೇಜ್ರಿವಾಲ್, ಕೇಂದ್ರ ತನಿಖಾ ಸಂಸ್ಥೆಗಳು ನ್ಯಾಯಾಲಯಗಳಲ್ಲಿ ಸುಳ್ಳು ಅಫಿಡವಿಟ್‌ಗಳನ್ನು ಸಲ್ಲಿಸುತ್ತಿವೆ ಎಂದು ಆರೋಪಿಸಿದರು. ಸುಳ್ಳು ಸಾಕ್ಷ್ಯ ಮತ್ತು ನ್ಯಾಯಾಲಯಗಳಲ್ಲಿ ಸುಳ್ಳು ಸಾಕ್ಷ್ಯವನ್ನು ಒದಗಿಸುವುದಕ್ಕಾಗಿ ಸಿಬಿಐ ಮತ್ತು ಇಡಿ ಅಧಿಕಾರಿಗಳ ವಿರುದ್ಧ ಸೂಕ್ತ ಪ್ರಕರಣಗಳನ್ನು ದಾಖಲಿಸುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನಾ ಮಾತನಾಡಿದ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ 14 ಫೋನ್‌ಗಳನ್ನು ನಾಶಪಡಿಸಿದ್ದಾರೆ ಎಂದು ಇಡಿ ತನ್ನ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದೆ. ಈ ಫೋನ್‌ಗಳ ಐಎಂಇಐ ಸಂಖ್ಯೆಗಳನ್ನು ಸಹ ದಾಖಲೆಗಳಲ್ಲಿ ಸೇರಿಸಲಾಗಿದೆ ಎಂದರು. 

ಈ 14 ಫೋನ್‌ಗಳಲ್ಲಿ ನಾಲ್ಕು ಇಡಿ ಮತ್ತು ಒಂದು ಸಿಬಿಐ ಬಳಿ ಇವೆ ಎಂದು ವಶಕ್ಕೆ ಪಡೆದ ಮೆಮೊ ತೋರಿಸುತ್ತದೆ. ಇತರ ಹೆಚ್ಚಿನ ಫೋನ್‌ಗಳು ಅಸ್ವಿತ್ವದಲ್ಲಿದ್ದು, ಸ್ವಯಂಸೇವಕರಿಂದ ಬಳಸುತ್ತಿವೆ. ಈ ಫೋನ್‌ಗಳ ಬಗ್ಗೆ ಇಡಿ ಮತ್ತು ಸಿಬಿಐಗೆ ತಿಳಿದಿದೆ. ಆದಾಗ್ಯೂ, ಸುಳ್ಳು ಅಫಿಡವಿಟ್‌ಗಳನ್ನು ಸಲ್ಲಿಸುವ ಮೂಲಕ ನ್ಯಾಯಾಲಯವನ್ನು ಹಾದಿತಪ್ಪಿಸುತ್ತಿವೆ. ಸುಳ್ಳು ತಪ್ಪೊಪ್ಪಿಗೆಗಳನ್ನು ಪಡೆಯಲು ಏಜೆನ್ಸಿಗಳು ಜನರನ್ನು ಹಿಂಸಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

"ನನ್ನ ಹೆಸರು ಮತ್ತು ಸಿಸೋಡಿಯಾ ಹೆಸರನ್ನು ಕೆಡಿಸಲು ಜನರಿಗೆ ಹೇಳಲಾಗುತ್ತಿದೆ. ನಮಗೆ ಪರಿಚಯವಿಲ್ಲದ ಚಂದನ್ ರೆಡ್ಡಿ ಎಂಬಾತಿಗೆ ಚಿತ್ರಹಿಂಸೆ ನೀಡಲಾಗಿದೆ. ಅವನ ಕಿವಿ ಮತ್ತು ಮುಖಕ್ಕೆ ಗಾಯವಾಗಿದೆ ಎಂದು ವೈದ್ಯಕೀಯ ವರದಿ ಹೇಳುತ್ತದೆ.  ಥರ್ಡ್ ಡಿಗ್ರಿ ಮೂಲಕ ಮಾನಸಿಕ ಕಿರುಕುಳ, ದೈಹಿಕ ಚಿತ್ರಹಿಂತೆ ನೀಡುವ ಮೂಲಕ ಸುಳ್ಳು ಹೇಳಿಕೆ ಪಡೆಯಲಾಗುತ್ತಿದೆ ಎಂದು ಕೇಜ್ರಿವಾಲ್ ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com