ದೆಹಲಿ ಮದ್ಯ ಹಗರಣ: ಎಎಪಿ ಹಣಿಯಲು ನಿರಂತರ ಪ್ರಯತ್ನವಾಗುತ್ತಿದೆ; ಸಿಬಿಐ ಸಮನ್ಸ್ ಕುರಿತು ಕೇಜ್ರಿವಾಲ್ ಹೇಳಿಕೆ

ಎಎಪಿ ಪಕ್ಷ ದೇಶಕ್ಕೆ ಭರವಸೆಯ ಕಿರಣವಾಗಿ ಹೊರಹೊಮ್ಮಿದ್ದು, ಅದನ್ನು ಹಣಿಯುವ ಉದ್ದೇಶದಿಂದಲೇ ಮತ್ತು ಅದಕ್ಕಾಗಿಯೇ ಅದನ್ನು ತುಳಿಯಲು ಪ್ರಯತ್ನಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ಎಎಪಿ ಪಕ್ಷ ದೇಶಕ್ಕೆ ಭರವಸೆಯ ಕಿರಣವಾಗಿ ಹೊರಹೊಮ್ಮಿದ್ದು, ಅದನ್ನು ಹಣಿಯುವ ಉದ್ದೇಶದಿಂದಲೇ ಮತ್ತು ಅದಕ್ಕಾಗಿಯೇ ಅದನ್ನು ತುಳಿಯಲು ಪ್ರಯತ್ನಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಮುಂದೆ ಹಾಜರಾಗುವಂತೆ ನೋಟಿಸ್ ನೀಡಿದ ನಂತರ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದು, ತಾವು ಭಾನುವಾರ ತನಿಖಾಧಿಕಾರಿಗದಳ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದರು. 

ಈ ಕುರಿತು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 75 ವರ್ಷಗಳಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ದಷ್ಟು ಯಾವುದೇ ಪಕ್ಷ ಗುರಿಯಾಗಿಲ್ಲ. ಏಕೆಂದರೆ AAP ಬಡತನವನ್ನು ನಿರ್ಮೂಲನೆ ಮಾಡುತ್ತದೆ ಮತ್ತು ಅವರನ್ನು ವಿದ್ಯಾವಂತರನ್ನಾಗಿ ಮಾಡುತ್ತದೆ ಎಂಬ ಭರವಸೆಯನ್ನು ಜನರಿಗೆ ನೀಡಿದೆ. ಇದೇ ಕಾರಣಕ್ಕಾಗಿ ಅವರು ನಮ್ಮನ್ನು ಗುರಿಯಾಗಿಸಿಕೊಂಡು ಈ ಭರವಸೆಯನ್ನು ತುಳಿಯಲು ಬಯಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಇಡೀ ದೇಶದ ಕೇಂದ್ರ ಬಿಂದುವಾಗಿರುವ ಅಬಕಾರಿ ನೀತಿಯು ಅತ್ಯುತ್ತಮ ನೀತಿಯಾಗಿದೆ ಮತ್ತು ಪಕ್ಷವು ಅಧಿಕಾರದಲ್ಲಿರುವ ಪಂಜಾಬ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಿಬಿಐ ಮತ್ತು ಇಡಿ ಸುಳ್ಳು ಅಫಿಡವಿಟ್‌ಗಳನ್ನು ಸಲ್ಲಿಸಿದೆ. ತಮ್ಮ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರು 14 ಫೋನ್‌ಗಳನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ, ಆದರೆ "ವಾಸ್ತವಾಂಶ ಬೇರೆಯೇ ಇದೆ" ಎಂದು ಕೇಜ್ರಿವಾಲ್ ಹೇಳಿದರು.

ಸಿಸೋಡಿಯಾ ನಾಶ ಪಡಿಸಿದ್ದಾರೆ ಎನ್ನಲಾದ ಫೋನ್ ಗಳ ಪೈಕಿ ನಾಲ್ಕು ಫೋನ್‌ಗಳು ಇಡಿ ಬಳಿ ಮತ್ತು ಒಂದು ಸಿಬಿಐ ಬಳಿ ಇವೆ. ಇತರ ಹೆಚ್ಚಿನ ಫೋನ್‌ಗಳು ಸಕ್ರಿಯವಾಗಿವೆ ಮತ್ತು ಸ್ವಯಂಸೇವಕರಿಂದ ಬಳಸಲ್ಪಡುತ್ತಿವೆ. ಇದು ಸಿಬಿಐ ಮತ್ತು ಇಡಿಗೆ ತಿಳಿದಿದೆ. ಅವರು ನ್ಯಾಯಾಲಯದಲ್ಲಿ ಸುಳ್ಳು ಅಫಿಡವಿಟ್‌ಗಳನ್ನು ಸಲ್ಲಿಸುತ್ತಿದ್ದಾರೆ. 100 ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಆ ಹಣ ಎಲ್ಲಿದೆ ಎಂದು ಕೇಜ್ರಿವಾಲ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

"400ಕ್ಕೂ ಹೆಚ್ಚು ದಾಳಿ ನಡೆಸಲಾಗಿದೆ...ಹಣ ಎಲ್ಲಿದೆ? ಗೋವಾ ಚುನಾವಣೆಯಲ್ಲಿ ಹಣ ಬಳಸಲಾಗಿದೆ ಎಂದು ಹೇಳಲಾಗಿದೆ. ನಾವು ಕೆಲಸ ಮಾಡಿದ ಪ್ರತಿಯೊಬ್ಬ ಗೋವಾ ಮಾರಾಟಗಾರರನ್ನು ಅವರು ಪ್ರಶ್ನಿಸಿದ್ದಾರೆ. ಆದರೆ ಅಲ್ಲಿ ಏನೂ ಸಿಗಲಿಲ್ಲ. ಪ್ರಶ್ನೆಯು ಭ್ರಷ್ಟಾಚಾರದ ಬಗ್ಗೆ ಅಲ್ಲ. ಅಬಕಾರಿ ನೀತಿಯ ಬಗ್ಗೆ," ಅವರು ಪ್ರತಿಪಾದಿಸಿದರು.

ಇದೇ ವಿಚಾರವಾಗಿ ಟ್ವೀಟ್ ಕೂಡ ಮಾಡಿರುವ ಕೇಜ್ರಿವಾಲ್, "ನಾವು ಸಿಬಿಐ ಮತ್ತು ಇಡಿ ಅಧಿಕಾರಿಗಳ ವಿರುದ್ಧ ಸುಳ್ಳು ಸಾಕ್ಷ್ಯ ಮತ್ತು ನ್ಯಾಯಾಲಯಗಳಲ್ಲಿ ಸುಳ್ಳು ಸಾಕ್ಷ್ಯವನ್ನು ಒದಗಿಸಿದಕ್ಕಾಗಿ ಸೂಕ್ತ ಪ್ರಕರಣಗಳನ್ನು ದಾಖಲಿಸುತ್ತೇವೆ" ಎಂದು ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com