ಸಲಿಂಗ ವಿವಾಹ 'ನಗರ ಪರಿಕಲ್ಪನೆ', ಸಾಮಾಜಿಕ ನೀತಿಗೆ ವಿರುದ್ಧವಾದದ್ದು: ಕೇಂದ್ರ ಸರ್ಕಾರ

ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಸಲಿಂಗ ವಿವಾಹ ಕಾಯ್ದೆಯ ಬಗ್ಗೆ ಕೇಂದ್ರ ಸರ್ಕಾರ ಮತ್ತೊಂದು ಅರ್ಜಿಯನ್ನು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದು,ಈ ವಿಚಾರಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಹೇಳಿದೆ. 
ಸಲಿಂಗ ವಿವಾಹ
ಸಲಿಂಗ ವಿವಾಹ
Updated on

ನವದೆಹಲಿ: ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಸಲಿಂಗ ವಿವಾಹ ಕಾಯ್ದೆಯ ಬಗ್ಗೆ ಕೇಂದ್ರ ಸರ್ಕಾರ ಮತ್ತೊಂದು ಅರ್ಜಿಯನ್ನು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದು,ಈ ವಿಚಾರಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಹೇಳಿದೆ. 

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನೇತೃತ್ವದ ಪೀಠವು ನಾಳೆ (ಏ.18) ಈ ಕುರಿತು ವಿಚಾರಣೆ ನಡೆಸಲಿದೆ, ಇದೀಗ ವಿಚಾರಣೆಗೆ ಒಂದು ದಿನ ಇರುವಾಗ ಕೇಂದ್ರ ಸರ್ಕಾರವು ತಮ್ಮ ನಿಲ್ಲುವನ್ನು ತಿಳಿಸಿದೆ. ಸಲಿಂಗ ವಿವಾಹವು ಭಾರತದ ಸಾಮಾಜಿಕ ನೀತಿಗೆ ವಿರುದ್ಧವಾಗಿದೆ. ಇದನ್ನೂ ಸಮಾಜಮುಖಿಯಾಗಿ ಅನೇಕರು ವಿರೋಧ ಮಾಡುತ್ತಾರೆ. ಇದು ಭಿನ್ನಲಿಂಗೀಯ ಮದುವೆಯ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡುತ್ತದೆ. ಈ ಸಲಿಂಗಗಳ ಮದುವೆಯ ಪರಿಕಲ್ಪನೆಯು ಹೊಸ ಸಾಮಾಜಿಕ ಸಂಸ್ಥೆಯನ್ನು ರಚಿಸುತ್ತದೆ. ಇದು ಮೂಲಭೂತವಾಗಿ ಶಾಸಕಾಂಗ ಕಾರ್ಯವಾಗಿದ್ದು, ನ್ಯಾಯಾಲಯಗಳು ನಿರ್ಧರಿಸಬಾರದು ಎಂದು ಹೇಳಿದೆ. 

ಕೇಂದ್ರ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಹೊಸ ಅಫಿಡವಿಟ್‌ನಲ್ಲಿ, ಜನರ ಹಿತದೃಷ್ಟಿಯಿಂದ ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಮತ್ತು ಅದು ತೀರ್ಮಾನವನ್ನು ತೆಗೆದುಕೊಳ್ಳುತ್ತದೆ. ಇದು ವೈಯಕ್ತಿಕ ಕಾನೂನಿನ ವಿಷಯದಲ್ಲಿ ದ್ವಿಗುಣವಾಗಿದೆ ಎಂದು ಹೇಳಿದ್ದು, ಅಲ್ಲದೆ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ವಜಾಗೊಳಿಸುವಂತೆ ಕೇಂದ್ರವು ಅರ್ಜಿಯಲ್ಲಿ ಮನವಿ ಮಾಡಿದೆ. 

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಭಾರತದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಏಪ್ರಿಲ್ 18 ರಿಂದ ವಿಚಾರಣೆಗೆ ನಿಗದಿಪಡಿಸಲಾಗಿದೆ. ಸಾಂವಿಧಾನಿಕ ಪೀಠದ ಇತರ ನಾಲ್ವರು ನ್ಯಾಯಾಧೀಶರು ಸಮಾಜದ ಮೇಲೆ ಪರಿಣಾಮಗಳನ್ನು ಉಂಟು ಮಾಡುವ ವಿಚಾರ ಮತ್ತು ವಿವಾದಾತ್ಮಕ ವಿಷಯದ ವಿಚಾರಣೆ ನಡೆಸಲಿದ್ದಾರೆ. ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಎಸ್ ರವೀಂದ್ರ ಭಟ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಈ ವಿಚಾರಣೆಯನ್ನು ನಡೆಸಲಿದ್ದಾರೆ.

ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ತ್ರಿಸದಸ್ಯ ಪೀಠವು ಮಾರ್ಚ್ 13ರಂದು ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಐದು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ತಿಳಿಸಿ, ಸಮಿತಿಯನ್ನು ರಚನೆ ಮಾಡಿ ಈ ಮೂಲಕ ಸಲಿಂಗ ವಿವಾಹದ ಮೂಲ ಪ್ರಾಮುಖ್ಯತೆಯ ಬಗ್ಗೆ ವಿವರಿಸುವಂತೆ ತಿಳಿಸಿದೆ.

ಸಲಿಂಗ ಪೋಷಕರಿಂದ ಬೆಳೆದ ಮಕ್ಕಳು ಸಾಂಪ್ರದಾಯಿಕ ಲಿಂಗ ಮಾದರಿಗಳಿಗೆ ಒಡ್ಡಿಕೊಳ್ಳದೇ ಇರಬಹದು!
ಸಲಿಂಗ ಪೋಷಕರಿಂದ ಬೆಳೆದ ಮಕ್ಕಳು ಸಾಂಪ್ರದಾಯಿಕ ಲಿಂಗ ಮಾದರಿಗಳಿಗೆ ಸೀಮಿತವಾಗಿ ಒಡ್ಡಿಕೊಳ್ಳುತ್ತಾರೆ ಮತ್ತು ಲಿಂಗ ಪಾತ್ರಗಳು ಮತ್ತು ಗುರುತಿನ ಬಗ್ಗೆ ಅವರ ತಿಳುವಳಿಕೆಯ ಮೇಲೆ ಪರಿಣಾಮ ಬೀರಬಹುದು. ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಆಯೋಗ ವಿರೋಧಿಸಿತ್ತು. ಜುವೆನೈಲ್ ಜಸ್ಟಿಸ್ ಆಕ್ಟ್ ಅಡಿಯಲ್ಲಿ "ನಿರೀಕ್ಷಿತ ದತ್ತು ತೆಗೆದುಕೊಳ್ಳುವ ಪೋಷಕರ" ನಿಬಂಧನೆಯ ಮೇಲೆ ಅರ್ಜಿಗಳ ಫಲಿತಾಂಶವು ಪರಿಣಾಮಗಳನ್ನು ಬೀರುತ್ತದೆ ಎಂದು NCPCR ಮತ್ತಷ್ಟು ಹೇಳಿದೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂಸ್ಥೆಯು ಸಲಿಂಗ ದಂಪತಿಗಳಿಂದ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಅನುಮತಿಸಬಾರದು ಎಂದು ಹೇಳಿದೆ. ಸಲಿಂಗ ಪೋಷಕರಿಂದ ಬೆಳೆದ ಮಕ್ಕಳು ಸಾಂಪ್ರದಾಯಿಕ ಲಿಂಗ ಮಾದರಿಗಳಿಗೆ ಸೀಮಿತವಾಗಿ ಒಡ್ಡಿಕೊಳ್ಳಬಹುದು ಅಥವಾ ಒಡ್ಡಿಕೊಳ್ಳದೆಯೂ ಇರಬಹದು. ಇದು ಲಿಂಗ ಪಾತ್ರಗಳು ಮತ್ತು ಗುರುತಿನ ಅವರ ತಿಳುವಳಿಕೆಯ ಮೇಲೆ ಪರಿಣಾಮ ಬೀರಬಹುದು. ಈ ಮಕ್ಕಳ ಮಾನ್ಯತೆ ಸೀಮಿತವಾಗಿರುತ್ತದೆ ಮತ್ತು ಅವರ ವ್ಯಕ್ತಿತ್ವ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು NCPCR ಅರ್ಜಿ ಸಲ್ಲಿಸಿದೆ.

ಸಲಿಂಗ ಕುಟುಂಬಗಳು ಭಿನ್ನಲಿಂಗೀಯ ಕುಟುಂಬಗಳಂತೆ ‘ಸಾಮಾನ್ಯ’ ಎಂದು ಸಾರ್ವಜನಿಕ ಜಾಗೃತಿ ಮೂಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದು ಮಕ್ಕಳ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ ಎಂದು DCPCR ಹೇಳಿದೆ. ಜಮಿಯತ್ ಉಲಾಮಾ-ಇ-ಹಿಂದ್ ಕೂಡ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಈ ಕಾಯ್ದೆಯ ಬಗ್ಗೆ ವಿರೋಧಿಸಿದೆ. ಸಲಿಂಗ ವಿವಾಹ ಸಾಮಾನ್ಯ ಕುಟುಂಬದ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡಬಹುದು ಎಂದು ಜಮಿಯತ್ ಉನ್ನತ ನ್ಯಾಯಾಲಯದಲ್ಲಿ ಸಲ್ಲಿಸಿದ ಮಧ್ಯಸ್ಥಿಕೆ ಅರ್ಜಿಯಲ್ಲಿ ಹೇಳಿದೆ.

ದೆಹಲಿ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್ (DCPCR) ಸಲಿಂಗ ವಿವಾಹಗಳನ್ನು ಕಾನೂನುಬದ್ಧಗೊಳಿಸುವುದನ್ನು ಬೆಂಬಲಿಸಿದೆ. ಈ ವಿಷಯದಲ್ಲಿ ಮಧ್ಯಸ್ಥಿಕೆ ಅರ್ಜಿಯನ್ನು ಸಲ್ಲಿಸಿರುವ ಡಿಸಿಪಿಸಿಆರ್, ಒಂದೇ ಲಿಂಗ ದಂಪತಿಗಳು ಉತ್ತಮ ಪೋಷಕರಾಗಬಹುದು ಎಂದು ಅನೇಕ ಅಧ್ಯಯನಗಳು ತೋರಿಸಿವೆ ಎಂದು ಹೇಳಿತ್ತು.

 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com