ಮದ್ಯ ವ್ಯಾಪಾರದ ಏಕಸ್ವಾಮ್ಯಕ್ಕೆ ಅನುಕೂಲವಾಗುವಂತೆ ದೆಹಲಿ ಅಬಕಾರಿ ನೀತಿ ದುರ್ಬಳಕೆ, ಮಾಸ್ಟರ್ ಮೈಂಡ್ ಸಿಸೋಡಿಯಾ: ಹೈಕೋರ್ಟ್‌ಗೆ ಸಿಬಿಐ ಹೇಳಿಕೆ

ಇತ್ತೀಚೆಗೆ ರದ್ದಾದ ದೆಹಲಿ ಅಬಕಾರಿ ನೀತಿ 2021-22 ಅನ್ನು ರಾಷ್ಟ್ರ ರಾಜಧಾನಿಯಲ್ಲಿನ ಮದ್ಯದ ವ್ಯಾಪಾರದಲ್ಲಿ ಕಾರ್ಟಲೈಸೇಶನ್ (ಉತ್ಪಾದಕರು, ಮಾರಾಟಗಾರರು, ವಿತರಕರು, ವ್ಯಾಪಾರಿಗಳು ಅಥವಾ ಸೇವಾ ಪೂರೈಕೆದಾರರ ಗುಂಪು) ಮತ್ತು ಏಕಸ್ವಾಮ್ಯಕ್ಕೆ ಅನುಕೂಲವಾಗುವಂತೆ ಕುಶಲತೆಯಿಂದ ದುರ್ಬಳಕೆ ಮಾಡಲಾಗಿದೆ ಮತ್ತು ಇದರಲ್ಲಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ

ನವದೆಹಲಿ: ಇತ್ತೀಚೆಗೆ ರದ್ದಾದ ದೆಹಲಿ ಅಬಕಾರಿ ನೀತಿ 2021-22 ಅನ್ನು ರಾಷ್ಟ್ರ ರಾಜಧಾನಿಯಲ್ಲಿನ ಮದ್ಯದ ವ್ಯಾಪಾರದಲ್ಲಿ ಕಾರ್ಟಲೈಸೇಶನ್ (ಉತ್ಪಾದಕರು, ಮಾರಾಟಗಾರರು, ವಿತರಕರು, ವ್ಯಾಪಾರಿಗಳು ಅಥವಾ ಸೇವಾ ಪೂರೈಕೆದಾರರ ಗುಂಪು) ಮತ್ತು ಏಕಸ್ವಾಮ್ಯಕ್ಕೆ ಅನುಕೂಲವಾಗುವಂತೆ ಕುಶಲತೆಯಿಂದ ದುರ್ಬಳಕೆ ಮಾಡಲಾಗಿದೆ ಮತ್ತು ಇದರಲ್ಲಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಉದ್ಯಮಿ ವಿಜಯ್ ನಾಯರ್ ಪ್ರಮುಖ ಸಂಚುಕೋರರು ಎಂದು ಸಿಬಿಐ ಬುಧವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ವಿರೋಧಿಸುವ ಸಂದರ್ಭದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ವಾದವನ್ನು ಮಂಡಿಸಿದ್ದು, 'ಸಿಸೋಡಿಯಾ ಅವರು ಪರಿಹಾರ ಪಡೆದಿರುವ ಇತರ ಆರೋಪಿಗಳೊಂದಿಗೆ ಸಮಾನತೆಯನ್ನು ಕೋರುತ್ತಿದ್ದು, ಹಿರಿಯ ಎಎಪಿ ನಾಯಕ ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಾರೆ. ಆದರೆ ಸಾಕ್ಷ್ಯವನ್ನು ಹಾಳುಮಾಡುವ ಸಾಧ್ಯತೆ ಇದೆ ಎಂದು ಸಿಬಿಐ ತನ್ನ ವಾದ ಮಂಡಿಸಿದೆ.

ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು ಸಿಬಿಐ ಅನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ವಿ ರಾಜು ಅವರಿಗೆ ಸಂಪೂರ್ಣ ಹಗರಣವನ್ನು ವಿವರಿಸಲು ಕೇಳಿದರು. ಈ ವೇಳೆ, ಎಎಸ್‌ಜಿ ರಾಜು ಮಾತನಾಡಿ, 'ಆರೋಪಿಗಳು ಹಣ ಸಂಪಾದಿಸಲು ಬಯಸಿದ್ದರು. ಆದರೆ ಅದೇ ಸಮಯದಲ್ಲಿ ಅವರು ಪಾರದರ್ಶಕವಾಗಿರುವುದನ್ನು ತೋರಿಸಲು ಬಯಸಿದ್ದರು. ಇದು ವಂಚನೆ, ಹಣ ಸಂಪಾದಿಸುವ ಹಗರಣ. ಆದರೆ ಅವರು ಪಾರದರ್ಶಕ ಎಂದು ತೋರಿಸಲು ಬಯಸಿದ್ದರು. ಮದ್ಯದ ತಯಾರಕರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಸಂಪರ್ಕ ಹೊಂದಿದ್ದರು. ನೀತಿ ಫಲಪ್ರದವಾಗುವ ಮೊದಲು 90-100 ಕೋಟಿ ಲಂಚವನ್ನು ಪಾವತಿಸಲಾಗಿದೆ. ಮನೀಶ್ ಸಿಸೋಡಿಯಾ ಅವರು ಎಲ್ಲದರ ಚುಕ್ಕಾಣಿ ಹಿಡಿದಿದ್ದರು ಎಂದು ಕಾನೂನು ಅಧಿಕಾರಿ ಕೋರ್ಟ್ ನಲ್ಲಿ ವಾದಿಸಿದರು.

ಏಪ್ರಿಲ್ 25 ರಂದು ವಿಚಾರಣಾ ನ್ಯಾಯಾಲಯದ ಮುಂದೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ವಿಚಾರಣೆಯನ್ನು ಇನ್ನೂ ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಹೈಕೋರ್ಟ್‌ಗೆ ತಿಳಿಸಿದರು. ಈ ವಿವಾದಿತ ಅಬಕಾರಿ ನೀತಿಯ ಬಗ್ಗೆ ಯಾವುದೇ ಚರ್ಚೆಯನ್ನು ಮಾಡಲಾಗಿಲ್ಲ ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಇದನ್ನು ಅನುಮೋದಿಸಲಿಲ್ಲ ಮತ್ತು ಹಿಂದಿನ ನೀತಿಯಲ್ಲಿ ಕಿಕ್‌ಬ್ಯಾಕ್‌ಗಳನ್ನು ಉತ್ಪಾದಿಸಲು ಸಾಧ್ಯವಾಗದ ಕಾರಣ ಹೊಸ ನೀತಿಯನ್ನು ಜಾರಿಗೊಳಿಸಲಾಗಿದೆ. ಮನೀಷ್ ಸಿಸೋಡಿಯಾ ಇತರ ಆರೋಪಿಗಳೊಂದಿಗೆ ಒಳಸಂಚು ರೂಪಿಸಿ ಎಲ್ಜಿ ಅನುಮೋದಿಸಿಲ್ಲ ಎಂದು ಹೇಳಿದ್ದಾರೆ ಎಂದು ASG ವಾದದಲ್ಲಿ ಉಲ್ಲೇಖಿಸಿದರು.

ಇದನ್ನೂ ಓದಿ: 'ಪ್ರಧಾನಿ ಮೋದಿ ಶೈಕ್ಷಣಿಕ ಅರ್ಹತೆಯ ಕೊರತೆ ದೇಶಕ್ಕೇ ಅಪಾಯಕಾರಿ': ಜೈಲಿನಿಂದಲೇ ಪತ್ರ ಬರೆದ ಸಿಸೋಡಿಯಾ!
 
ಸಿಬಿಐ ತನ್ನ ಸಲ್ಲಿಕೆಗಳ ಕುರಿತು ಕಿರು ಟಿಪ್ಪಣಿಯನ್ನು ಸಲ್ಲಿಸುವಂತೆ ಹೈಕೋರ್ಟ್ ಕೇಳಿದ್ದು, ಶುಕ್ರವಾರ ಹೆಚ್ಚಿನ ವಿಚಾರಣೆಗೆ ವಿಷಯವನ್ನು ಪಟ್ಟಿ ಮಾಡಿದೆ. ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿ ಸಿಬಿಐ ತನ್ನ ಲಿಖಿತ ಉತ್ತರದಲ್ಲಿ, 'ಎಎಪಿ ನಾಯಕ ಗಂಭೀರ ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿದ್ದು, ಅಪರಾಧದ ಕಾರ್ಯವೈಖರಿಯನ್ನು ಬಿಚ್ಚಿಡುವಲ್ಲಿ ಪ್ರಮುಖರಾಗಿದ್ದರು. ಹೀಗಾಗಿ ಅವರ ಜಾಮೀನು ಅರ್ಜಿಯನ್ನು ಪರಿಗಣಿಸಲು ಯಾವುದೇ ಅರ್ಹತೆಯನ್ನು ಹೊಂದಿಲ್ಲ ಮತ್ತು ಇದು ಪ್ರಕರಣದ ತನಿಖೆಯ ಪ್ರಗತಿಯನ್ನು ತಡೆಯಲು ಕಾನೂನಿನ ಜಟಿಲತೆಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ಅದು ಹೇಳಿದೆ.

ಸಿಸೋಡಿಯಾ ಅವರು ಪಿತೂರಿಯ ಕಿಂಗ್‌ಪಿನ್ ಮತ್ತು ಮಾಸ್ಟರ್ ಮೈಂಡ್ ಎಂದು ಸಿಬಿಐ ವಾದಿಸಿದ್ದು, ಸಹ-ಆರೋಪಿಗಳೊಂದಿಗೆ ಅವರು ಜಾಮೀನು ಪಡೆಯಲು ಯಾವುದೇ ಸಮಾನತೆಯನ್ನು ಹೊಂದುವುದಿಲ್ಲ ಎಂದು ಸಿಬಿಐ ವಾದಿಸಿದೆ.  

ಹಲವಾರು ಸುತ್ತಿನ ವಿಚಾರಣೆಯ ನಂತರ ಫೆಬ್ರವರಿ 26 ರಂದು ಈಗ ರದ್ದಾದ ದೆಹಲಿ ಅಬಕಾರಿ ನೀತಿ 2021-22 ರ ರಚನೆ ಮತ್ತು ಅನುಷ್ಠಾನದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಮಾರ್ಚ್ 31 ರಂದು, ಇಲ್ಲಿನ ವಿಚಾರಣಾ ನ್ಯಾಯಾಲಯವು ಈ ವಿಷಯದಲ್ಲಿ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು,   
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com